ಅಫ್ಘಾನ್‍ನಲ್ಲಿ ಹಸುವಿನ ವೇಷ ತೊಟ್ಟ ತಾಲಿಬಾನ್ ರಾಕ್ಷಸರು – ಷರಿಯತ್ ಕಾನೂನು ಪಾಲಿಸಲು ಕಟ್ಟಪ್ಪಣೆ

Public TV
1 Min Read
Taliban attack

ಕಾಬೂಲ್: ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ನಿಯಂತ್ರಣಕ್ಕೆ ತೆಗೆದುಕೊಂಡ ತಾಲಿಬಾನ್ ರಾಕ್ಷಸರು ಈಗ ಹಸುವಿನ ವೇಷ ತೊಟ್ಟು ನಟಿಸತೊಡಗಿದ್ದಾರೆ. ಜನರೆಲ್ಲಾ ಪ್ರಾಣಭೀತಿಯಿಂದ ದೇಶ ತೊರೆಯುತ್ತಿರುವ ಹಿನ್ನೆಲೆಯಲ್ಲಿ ಶಾಂತಿಮಂತ್ರ ಪಠಿಸಿದ್ದಾರೆ.

TALIBAN 3

ನಾವು ಈ ಹಿಂದಿನ ತಾಲಿಬಾನಿಗಳಲ್ಲ, ನಾವು ಬದಲಾಗಿದ್ದೇವೆ ಎಂದು ತೋರಿಸಿಕೊಳ್ಳಲು ಮುಂದಾಗಿದ್ದಾರೆ. ದೇಶದ ಜನತೆಗೆ ಸಾಮೂಹಿಕವಾಗಿ ಕ್ಷಮಾಭಿಕ್ಷೆ ನೀಡುತ್ತಿರುವುದಾಗಿ ಪ್ರಕಟಿಸಿದ್ದಾರೆ. ಸರ್ಕಾರಿ ಉದ್ಯೋಗಿಗಳೆಲ್ಲಾ ಮತ್ತೆ ಸೇವೆಗೆ ಹಾಜರಾಗಬೇಕೆಂದು ಆದೇಶ ಹೊರಡಿಸಿದ್ದಾರೆ. ಪ್ರತಿಯೊಬ್ಬರನ್ನು ಕ್ಷಮಿಸಲಾಗಿದೆ. ಹೀಗಾಗಿ ಎಲ್ಲರೂ ಸಂಪೂರ್ಣ ವಿಶ್ವಾಸ, ಭರವಸೆಯೊಂದಿಗೆ ಜೀವನ ಸಾಗಿಸಿ.. ಷರಿಯತ್ ಕಾನೂನನ್ನು ಪಾಲಿಸಿ.. ಎಂದಿನಂತೆ ದೈನಂದಿನ ಚಟುವಟಿಕೆಗಳಲ್ಲಿ ತೊಡಗಿಕೊಳ್ಳಿ ಎಂದು ತಾಲಿಬಾನ್ ಮುಖಂಡರು ಹೇಳಿದ್ದಾರೆ. ಇದನ್ನೂ ಓದಿ: ಉಗ್ರರಿಗೆ ಆಟ, ಮಹಿಳೆಯರಿಗೆ ಪ್ರಾಣ ಸಂಕಟ – ಷರಿಯತ್ ಏನು ಹೇಳುತ್ತದೆ? ತಾಲಿಬಾನ್ ಕಾನೂನು ಏನು?

TALIBAN 2

ಅನುಮತಿ ಇಲ್ಲದೇ ಯಾರ ಮನೆಗೂ ನುಗ್ಗುವಂತಿಲ್ಲ. ಲೂಟಿ ಮಾಡುವಂತಿಲ್ಲ, ಪ್ರಜೆಗಳ ಆಸ್ತಿ, ಮಾನ, ಪ್ರಾಣ, ಗೌರವಕ್ಕೆ ಧಕ್ಕೆ ಮಾಡುವಂತಿಲ್ಲ ಎಂದು ತಮ್ಮ ಫೈಟರ್‍ಗಳಿಗೆ ತಾಲಿಬಾನ್ ಉಗ್ರರು ಆದೇಶ ನೀಡಿದ್ದಾರೆ. ಅಮೆರಿಕ ಸೈನ್ಯವನ್ನು ಬೆಂಬಲಿಸಿದ್ದವರ ಮೇಲೆ ಯಾವುದೇ ಪ್ರತೀಕಾರ ತೆಗೆದುಕೊಳ್ಳಲ್ಲ ಎಂದು ಭರವಸೆಯನ್ನು ಆಡಳಿತದ ಚುಕ್ಕಾಣಿ ಹಿಡಿಯಲಿರುವ ಅಬ್ದುಲ್ ಘನಿ ಬರಾದರ್ ನೀಡಿದ್ದಾರೆ. ಆದರೆ ಇದನ್ನು ನಂಬೋಕೆ ಅಲ್ಲಿನ ಪ್ರಜೆಗಳು ತಯಾರಿಲ್ಲ. ಇದುವರೆಗೂ ಆಂತರಿಕ ಸಂಘರ್ಷದಲ್ಲಿ 550 ಮಕ್ಕಳು ಸಾವನ್ನಪ್ಪಿವೆ. ಹೀಗಾಗಿ ಈಗಲೂ ಕಾಬೂಲ್ ಸೇರಿ ಎಲ್ಲೆಡೆ ಆತಂಕ ಮನೆ ಮಾಡಿದೆ. ಆದಷ್ಟು ಬೇಗ ಅಫ್ಘಾನ್‍ನಿಂದ ಕಾಲ್ತೆಗೆಯಲು ಪ್ರಯತ್ನ ಮಾಡ್ತಿದ್ದರೆ ಇಲ್ಲಿ ಗಮನಿಸಬೇಕಾದ ಒಂದು ಅಂಶ ಇದೆ. 1996ರಲ್ಲಿ ಮಾಡಿದಂತೆ ಈ ಬಾರಿ ತಾಲಿಬಾನಿಗಳು ವಿಧ್ವಂಸಕ ಕೃತ್ಯಗಳಿಗೆ ಮುಂದಾಗಿಲ್ಲ.  ಇದನ್ನೂ ಓದಿ: ತಾಲಿಬಾನ್ ಉಗ್ರರ ಸರ್ಕಾರಕ್ಕೆ ಪಾಕಿಸ್ತಾನ, ಚೀನಾ, ಇರಾನ್ ಬೆಂಬಲ

Share This Article
Leave a Comment

Leave a Reply

Your email address will not be published. Required fields are marked *