ಮೈಸೂರು: ಜಿಲ್ಲಾ ವ್ಯಾಪ್ತಿಯ ಪ್ರತಿಷ್ಠಿತ ಕಬಿನಿ ಜಲಾಶಯದ (Kabini Dam) ನೀರಿನ ಮಟ್ಟ ಗಣನೀಯ ಪ್ರಮಾಣದಲ್ಲಿ ಕುಸಿತ ಕಂಡಿದೆ.
ಜಲಾಶಯದಲ್ಲಿ ಒಟ್ಟು 19.50 TMC ನೀರು ಸಂಗ್ರಹವಾಗುತ್ತದೆ. ಆದ್ರೆ ಸದ್ಯಕ್ಕೆ ಜಲಾಶಯದಲ್ಲಿ 4 TMC ಮಾತ್ರ ನೀರಿನ ಸಂಗ್ರಹ ಇದೆ. ಅದರಲ್ಲಿ ಡೆಡ್ ಸ್ಟೋರೆಜ್ ತೆಗೆದರೆ ಬಳಕೆಗೆ ಸಿಗುವುದು ಕೇವಲ 2 TMC ನೀರು ಮಾತ್ರ. ಇದನ್ನೂ ಓದಿ: ಮಂಡ್ಯದ ರೈತರ ಒತ್ತಡಕ್ಕೆ ಮಣಿದ ಸರ್ಕಾರ – KRSನಿಂದ ನಾಲೆ ನೀರು
Advertisement
Advertisement
ಕಬಿನಿ ಜಲಾಶಯದಿಂದ ಮೈಸೂರು, ಬೆಂಗಳೂರಿನ (Mysuru, Bengaluru) ಕೆಲ ಭಾಗ, ನಂಜನಗೂಡು, ಟಿ. ನರಸೀಪುರ, ಗುಂಡ್ಲುಪೇಟೆ, ಚಾಮರಾಜನಗರಕ್ಕೆ ಕುಡಿಯುವ ನೀರು ಒದಗಿಸಲಾಗುತ್ತದೆ. ಹೀಗಾಗಿ ಜಲಾಶಯದಲ್ಲಿ ನೀರು ಬರಿದಾಗುತ್ತಿದ್ದು ಈ ಭಾಗಗಳಲ್ಲಿ ಕುಡಿಯುವ ನೀರಿಗೆ (Drinking Water) ಹಾಹಾಕಾರ ಉಂಟಾಗುವ ಆತಂಕವಿದೆ. ಇದನ್ನೂ ಓದಿ: ಕರಾವಳಿಯಲ್ಲಿ ಬಿಪರ್ಜಾಯ್ ಅಬ್ಬರ – ತೀರಕ್ಕೆ ಅಪ್ಪಳಿಸುತ್ತಿದೆ ರಕ್ಕಸ ಅಲೆಗಳು, ಆತಂಕದಲ್ಲಿ ನಿವಾಸಿಗಳು