ಪ್ಯಾರಿಸ್‌ನಲ್ಲಿ ಪತಿಗೆ ಲಿಪ್‌ಲಾಕ್ ಮಾಡಿದ ‘ಕಭಿ ಖುಷಿ ಕಭಿ ಗಮ್’ ನಟಿ

Public TV
1 Min Read
Malvika Raaj

‘ಕಭಿ ಖುಷಿ ಕಭಿ ಗಮ್’ (Kabhi Khushi Kabhie Gham) ಸಿನಿಮಾ ಸೇರಿದಂತೆ ಹಲವು ಸಿನಿಮಾಗಳಲ್ಲಿ ನಟಿಸಿದ ಮಾಳವಿಕಾ ರಾಜ್ (Malavika Raaj) ಇದೀಗ ಪ್ಯಾರಿಸ್‌ಗೆ (Paris) ಹಾರಿದ್ದಾರೆ. ಪ್ಯಾರಿಸ್ ಐಫೆಲ್ ಟವರ್ ಮುಂದೆ ಪತಿ ಜೊತೆ ನಟಿ ಲಿಪ್‌ಲಾಕ್ ಮಾಡಿದ್ದಾರೆ. ಇಬ್ಬರ ರೊಮ್ಯಾಂಟಿಕ್ ಫೋಟೋಗಳನ್ನು ನಟಿ ಸಾಮಾಜಿಕ ಜಾಲತಾಣದಲ್ಲಿ ಶೇರ್ ಮಾಡಿದ್ದಾರೆ.

malavika

ಈ ವರ್ಷ ಜನವರಿಯಲ್ಲಿ ಪ್ರಣವ್ ಬಗ್ಗಾ ಜೊತೆ ಮಾಳವಿಕಾ ರಾಜ್ ಹೊಸ ಬಾಳಿಗೆ ಕಾಲಿಟ್ಟಿದ್ದು, ಗೋವಾದಲ್ಲಿ ಮದುವೆ ನೆರವೇರಿತ್ತು. ಈ ಬೆನ್ನಲೇ ಮಾಳವಿಕಾ ವೆಕೇಷನ್ ಮೂಡ್‌ಗೆ ಜಾರಿದ್ದಾರೆ. ಪ್ಯಾರಿಸ್‌ನಲ್ಲಿ ರೊಮ್ಯಾಂಟಿಕ್ ಆಗಿ ಕಾಲ ಕಳೆಯುತ್ತಿದ್ದಾರೆ. ಇದನ್ನೂ ಓದಿ:ತಮಿಳಿನಲ್ಲಿ ಸಿನಿಮಾ ಮಾಡುವುದಾಗಿ ಆಸೆ ವ್ಯಕ್ತಪಡಿಸಿದ ಶ್ರೀಲೀಲಾ

malavika 1

ಪ್ಯಾರಿಸ್‌ನಲ್ಲಿ ಪತಿ ಜೊತೆ ಲಿಪ್‌ಲಾಕ್ ಮಾಡಿರುವ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಈ ಜೋಡಿಯ ಲವ್ಲಿ ಫೋಟೋ ನೋಡಿ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ.


ಅಂದಹಾಗೆ, ಬಿಗ್‌ಬಿ, ಶಾರುಖ್ ಖಾನ್, ಹೃತಿಕ್ ರೋಷನ್ ನಟನೆಯ ‘ಕಭಿ ಖುಷಿ ಕಭಿ ಗಮ್’ ಸಿನಿಮಾದಲ್ಲಿ ನಾಯಕಿ ಕರೀನಾ ಕಪೂರ್ (Kareena Kapoor) ಅವರ ಬಾಲ್ಯದ ಪೂಜಾ ಪಾತ್ರದಲ್ಲಿ ನಟಿಸಿದ್ದರು. ಇಂದಿಗೂ ಮಾಳವಿಕಾ ಬಾಲಿವುಡ್ ಸಿನಿಮಾಗಳಲ್ಲಿ ಆ್ಯಕ್ಟೀವ್ ಆಗಿದ್ದಾರೆ.

 

Share This Article