ಹಾಸನ: ಜಿಲ್ಲೆಯ ಚನ್ನರಾಯಪಟ್ಟಣದ ಕಬ್ಬಳ್ಳಿ ಬಸವೇಶ್ವರ ಉತ್ಸವ ಭಾರೀ ವಿಜ್ರಂಭಣೆಯಿಂದ ಜರುಗಿತು.
ಸೋಮವಾರ ಬೆಳಗ್ಗೆಯಿಂದಲೇ ಬಸವೇಶ್ವರ ಸ್ವಾಮಿಯ ಅಭಿಷೇಕಗಳು ಮತ್ತು ಹೋಮಗಳು ಜರುಗಿದವು. ನಂತರ ಸಂಜೆ ಬಸವೇಶ್ವರ ಮೂರ್ತಿಯನ್ನು ಎತ್ತಿನ ಗಾಡಿಯಲ್ಲಿಯೇ ಮೆರವಣಿಗೆ ನಡೆಸಲಾಯಿತು. ಆದಿಚುಂಚನಗಿರಿ ಮಠದ ಶ್ರೀಗಳಾದ ನಿರ್ಮಲಾನಂದ ಶ್ರೀಗಳಿಗೆ ಪಲ್ಲಕ್ಕಿ ಉತ್ಸವವನ್ನು ಮಾಡಲಾಯಿತು.
Advertisement
Advertisement
ಕಲ್ಯಾಣಿಯಲ್ಲಿ ನಡೆದ ತೆಪ್ಪೋತ್ಸವದಲ್ಲಿ ದಸರಿಘಟ್ಟ ಚೌಡೇಶ್ವರಿ ಮೂರ್ತಿ, ಕಬ್ಬಳ್ಳಿ ಬಸವಣ್ಣನ ಮೂರ್ತಿ ಮತ್ತು ನಿರ್ಮಲಾನಂದ ಶ್ರೀಗಳನ್ನು ಕುಳ್ಳಿರಿಸಿ ಮುತ್ತಿನ ಪಲ್ಲಕ್ಕಿ ಉತ್ಸವವನ್ನು ಮಾಡಲಾಯಿತು. ಅಸಂಖ್ಯಾತ ಭಕ್ತರು ಜಾತ್ರೋತ್ಸವದಲ್ಲಿ ಪಾಲ್ಗೊಂಡು ಭಕ್ತಿ ಮೆರೆದರು.
Advertisement
Advertisement
ಕಬ್ಬಳ್ಳಿ ದೇವಸ್ಥಾನ ದನಗಳಿಗೆ ಮೈ ಜ್ವರ ಬಂದರೆ ಹರಕೆ ಹೊತ್ತುಕೊಂಡರೆ ಪರಿಹಾರ ಸಿಗುತ್ತದೆ ಎಂಬ ನಂಬಿಕೆಯಿಂದ ರೈತಾಪಿ ವರ್ಗದವರು ಇಲ್ಲಿ ಭಕ್ತರು. ಹಾವು ಕಡಿತಕ್ಕೆ ಮತ್ತು ಬಂಜೆತನ ನಿವಾರಣೆಗೆ ಇಲ್ಲಿ ಭೇಟಿ ನೀಡಿದರೆ ಒಳ್ಳೆಯದಾಗುತ್ತದೆ ಎನ್ನುವ ಹಲವು ನಂಬಿಕೆಗಳಿಂದ ಅಪಾರ ಭಕ್ತರು ಹೊರ ಜಿಲ್ಲೆಗಳಿಂದಲೂ ಸಹ ಇಲ್ಲಿಗೆ ಬರುತ್ತಾರೆ.