– ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ
ಕೋಲಾರ: ಕೊರೊನಾ ರೂಪಾಂತರಿ ಬಗ್ಗೆ ಭಯ ಬೇಡ, ಸರ್ಕಾರದಿಂದ ಮುನ್ನಚ್ಚರಿಕಾ ಕ್ರಮ ಕೈಗೊಳ್ಳಲಾಗುತ್ತಿದೆ. ಸೌತ್ ಆಫ್ರಿಕಾದಿಂದ ಬಂದವರ ಕ್ವಾರಂಟೈನ್ ಮಾಡಲಾಗುತ್ತಿದೆ ಎಂದು ಆರೋಗ್ಯ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.
ಕೋಲಾರದ ಕೋಗಿಲಹಳ್ಳಿ ಮಾಜಿ ಸಚಿವ ವರ್ತೂರು ಪ್ರಕಾಶ್ ಮನೆ ಬಳಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇಷ್ಟು ದಿನ ಡೆಲ್ಟಾ ರೂಪಾಂತರ ವೈರಸ್ ಅದರ ಪ್ರಾಬಲ್ಯ ಮೆರೆದಿತ್ತು, ಸೌತ್ ಆಫ್ರಿಕಾದಲ್ಲಿ ಡಿ-11523 ಎಂಬ ವೈರಸ್ ಪತ್ತೆಯಾಗಿದೆ. ರಾಜ್ಯದಲ್ಲಿ ಕೋವಿಡ್ ಪ್ರಕರಣಗಳು ಮತ್ತೆ ಹೆಚ್ಚಳವಾದ ಹಿನ್ನೆಲೆ ರಾಜ್ಯದಲ್ಲಿ ಕೂಡ ಎಚ್ಚರ ವಹಿಸಲಾಗುತ್ತಿದೆ ಎಂದಿದ್ದಾರೆ. ಇದನ್ನೂ ಓದಿ: ನಡು ರಸ್ತೆಯಲ್ಲೇ ಶಿಶುವಿನ ತಲೆ ಕಂಡು ಭಯಭೀತರಾದ ಜನ
ಕೋವಿಡ್ 3ನೇ ಅಲೆ ಆರಂಭವಾಗಿದೆ ಎಂದು ಹೇಳಕಾಗಲ್ಲ, ಇಷ್ಟು ದಿನ ಡೆಲ್ಟಾ ರೂಪಾಂತರ ವೈರಸ್ ಅದರ ಪ್ರಾಬಲ್ಯ ಮೆರೆದಿದೆ. ಇನ್ನೂ ಸೌತ್ ಆಫ್ರಿಕಾದಲ್ಲಿ ಡಿ 11523 ಎಂಬ ವೈರಸ್ ಪತ್ತೆಯಾಗಿದ್ದು, ಹೊಸ ವೈರಸ್ ಬೇಗ ಹರಡುವ ಸಾಧ್ಯತೆಯಿದೆ ಎಂದು ವಿಶ್ವ ಸಂಸ್ಥೆ ಅಭಿಪ್ರಾಯ ಪಟ್ಟಿದೆ. ಹೀಗಾಗಿ ಇನ್ನೊಂದು ವಾರದಲ್ಲಿ ಹೊಸ ವೈರಸ್‍ನ ತೀವ್ರತೆ ತಿಳಿಯಲಿದೆ. ರಾಜ್ಯ ಸರ್ಕಾರದಿಂದ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಇದುವರೆಗೆ ಯಾವುದೇ ಪಾಸಿಟಿವ್ ಪ್ರಕರಣ ಪತ್ತೆಯಾಗಿಲ್ಲ, ವೈರಸ್ ಇರುವ ದೇಶದಿಂದ ಬಂದವರನ್ನ ಹೋಮ್ ಕ್ವಾರೆಂಟೈನ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ