DistrictsKarnatakaLatestMain PostYadgir

ನಾಗರಹಾವಿನೊಂದಿಗೆ ಹುಡುಗಾಟವಾಡಿ ಮಸಣ ಸೇರಿದ ವೃದ್ಧ

Advertisements

ಯಾದಗಿರಿ: ನಾಗರಹಾವಿನೊಂದಿಗೆ ಹುಡುಗಾಟವಾಡಿದ ವೃದ್ಧನೋರ್ವ ಅದೇ ಹಾವಿನಿಂದ ಐದಕ್ಕೂ ಹೆಚ್ಚು ಬಾರಿ ಕಚ್ಚಿಸಿಕೊಂಡು, ಮಸಣ ಸೇರಿದ ಘಟನೆ ಯಾದಗಿರಿಯಲ್ಲಿ ನಡೆದಿದೆ.

ಯಾದಗಿರಿ ಜಿಲ್ಲೆಯ ವಡಗೇರಾ ತಾಲೂಕಿನ ಗೋಡಿಹಾಳ ಗ್ರಾಮದಲ್ಲಿ ಘಟನೆ ನಡೆದಿದ್ದು ಹಾವು ಕಚ್ಚಿ ಸಾವನ್ನಪ್ಪಿದವರನ್ನು ಬಸವರಾಜ್ ಪೂಜಾರಿ ಎಂದು ಗುರುತಿಸಲಾಗಿದೆ. ವೃದ್ಧನನ್ನು ಸಾಯಿಸಿದ ನಾಗರಹಾವು ತಾನು ಕೂಡ ಸಾವನ್ನಪ್ಪಿದೆ. ಇದನ್ನೂ ಓದಿ: ಲಸಿಕೆ ಪಡೆದವರಲ್ಲಿಯೂ ಒಮಿಕ್ರಾನ್ ಹೊಸ ತಳಿ ಪತ್ತೆ – ಆತಂಕ ಯಾಕೆ?

6 ಅಡಿ ಉದ್ದವಿದ್ದ ನಾಗರಹಾವು ಮನೆಯೊಂದಕ್ಕೆ ಹೊಕ್ಕಿತ್ತು, ಅದನ್ನು ಹಿಡಿಯಲು ಬಸವರಾಜ್ ಮುಂದಾಗಿದ್ದರು. ಹಿಡಿದ ಬಳಿಕ ಅದರ ಜೊತೆಗೆ ಒಂದು ಗಂಟೆಗೂ ಅಧಿಕ ಹೊತ್ತು ಚೆಲ್ಲಾಟವಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ಹಾವು ಸಿಕ್ಕ, ಸಿಕ್ಕ ಕಡೆ ಐದು ಬಾರಿ ಕಚ್ಚಿ ವೃದ್ಧನನ್ನು ಸಾಯಿಸಿ ತಾನು ಸಹ ಸಾವನ್ನಪ್ಪಿದೆ. ಮೃತಪಟ್ಟ ಬಸವರಾಜ್ ಈ ಹಿಂದೆ ಗ್ರಾಮದಲ್ಲಿ ಹಾವುಗಳನ್ನು ಹಿಡಿಯುತ್ತಿದರು. ಇದುವರೆಗೆ 300 ಕ್ಕೂ ಅಧಿಕ ಹಾವುಗಳನ್ನು ಹಿಡಿದಿದ್ದರು. ಇದನ್ನೂ ಓದಿ: ಬೆಳ್ಳಂಬೆಳಗ್ಗೆ ಮನೆಮುಂದೆ ಬಂದು ನಿಂತ ಒಂಟಿ ಸಲಗ

Leave a Reply

Your email address will not be published.

Back to top button