ಚಿಕ್ಕಬಳ್ಳಾಪುರ: ರಾಹುಲ್ ಗಾಂಧಿ ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ. ಕಾಂಗ್ರೆಸ್ ಆಡಳಿತ ರಾಜ್ಯಗಳಲ್ಲಿ ಏಕೆ ತೈಲ ಬೆಲೆ ಇಳಿಸಿಲ್ಲ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ನಗರದಲ್ಲಿ ಆರೋಗ್ಯ ಹಾಗೂ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಪ್ರಶ್ನಿಸಿದರು.
ಬೆಲೆ ಇಳಿಕೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬೈ ಎಲೆಕ್ಷನ್ ಫಲಿತಾಂಶದಿಂದ ತೈಲ ಬೆಲೆ ಇಳಿಸಿಲ್ಲ. ಎರಡು-ಮೂರು ತಿಂಗಳ ಹಿಂದೆಯೇ ಯಾವ ಪ್ರಮಾಣದಲ್ಲಿ ಪೆಟ್ರೋಲ್-ಡೀಸೆಲ್ ಬೆಲೆ ಇಳಿಕೆ ಮಾಡಬೇಕು ಎಂಬ ಚರ್ಚೆ ಮಾಡಲಾಗಿತ್ತು. ವಿರೋಧ ಪಕ್ಷದವರು ಹೇಳುವ ಹಾಗೆ ಬೈ ಎಲೆಕ್ಷನ್ ಫಲಿತಾಂಶದಿಂದ ತೈಲ ಬೆಲೆ ಇಳಕೆ ಮಾಡಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಸೂಟ್ಕೇಸ್ ತೆಗೆದು ಪರಿಶೀಲಿಸಿದ ಪೊಲೀಸರಿಗೆ ಕಾದಿತ್ತು ಅಚ್ಚರಿ!
Advertisement
Advertisement
ಕೇಂದ್ರ ಹಣಕಾಸು ಸಚಿವೆಯಾದ ನಿರ್ಮಲಾ ಸೀತಾರಾಮನ್ ಅವರು, ನಾನು ಎರಡು ತಿಂಗಳ ಹಿಂದೆ ಸಿಎಂ ಬೊಮ್ಮಾಯಿ ಜೊತೆ ದೆಹಲಿಗೆ ಹೋದಾಗ ಈ ಬಗ್ಗೆ ಲೆಕ್ಕಾಚಾರ ಮಾಡ್ತೀದ್ದೀವಿ ಎಂದು ಹೇಳಿದ್ದರು. ಐದಾರು ಬೈ ಎಲೆಕ್ಷನ್ ರಿಸಲ್ಟ್ ಬಂದ ಕೂಡಲೇ 19 ರೂ. ಕಡಿತ ಮಾಡಲು ಸಾಧ್ಯವೇ? ತೈಲ ಬೆಲೆ ಇಳಿಕೆ ಮಾಡಿ ಎಂದು ಕಾಂಗ್ರೆಸ್ ಅವರು ಬಾಯಿ ಬಾಯಿ ಬಡಿದುಕೊಳ್ಳುತ್ತಿದ್ರಲ್ಲಾ? ಏಕೆ ಕಾಂಗ್ರೆಸ್ ಅಧಿಕಾರ ಇರುವ ರಾಜ್ಯದವರು ಕಡಿಮೆ ಮಾಡಲಿಲ್ಲ? ಬರೀ ಬಿಜೆಪಿಯವರು ಅಧಿಕಾರದ ರಾಜ್ಯಗಳಲ್ಲಿ ಮಾತ್ರ ಮಾಡಿದ್ದೇವೆ. ರಾಹುಲ್ ಗಾಂಧಿ ಅವರು ಎಲ್ಲಿ ಹೋಗಿದ್ದಾರೆ ಕಾಣಿಸ್ತಿಲ್ಲ? ಏಕೆ? ಅವರು ಕಾಂಗ್ರೆಸ್ ಅಧಿಕಾರದ ರಾಜ್ಯದವರಿಗೆ ಇಳಿಕೆ ಮಾಡಿ ಎಂದು ಆದೇಶ ಮಾಡಕ್ಕಗಲ್ವಾ? ಎಂದು ವ್ಯಂಗ್ಯವಾಡಿದರು.
Advertisement
ಪಂಜಾಬ್, ಛತ್ತೀಸ್ ಘಡದಲ್ಲಿ ಏಕೆ ಮಾಡಲಿಲ್ಲ? ಕಾಂಗ್ರೆಸ್ ಇರೋ ಕಡೆ ರಾಜ್ಯಗಳಲ್ಲೂ ಸಹ ಕೇಂದ್ರ ಸರ್ಕಾರದಿಂದ ಕಡಿಮೆ ಮಾಡಲಾಗಿದೆ. ಕರ್ನಾಟಕದಲ್ಲಿ 07 ರೂ. ಮಾಡಿದ್ದೇವೆ. ಕಾಂಗ್ರೆಸ್ ಅವರು ಏಕೆ ಮಾಡ್ತಿಲ್ಲ? ಇವರು ಡಂಬಾಚಾರಕ್ಕೆ ರಾಜಕೀಯ ದುರದ್ದೇಶಕ್ಕೆ ಪ್ರತಿಭಟಿಸುತ್ತಿದ್ದಾರೆ ಎಂದು ಕಿಡಿಕಾರಿದರು.
Advertisement
ಜನರ ಹೊರೆ ಇಳಿಸೋ ಉದ್ದೇಶ ಅವರಿಗಿಲ್ಲ ಅನ್ನೋದು ಸ್ಪಷ್ಟ. ಹಾಗಾಗಿ ಚುನಾವಣೆಗೂ ಇದಕ್ಕೂ ಸಂಬಂಧವೇ ಇಲ್ಲ. ರಾಜಕಾರಣ ಮಾಡಲು ಮಾತ್ರ ಆರೋಪ ಮಾಡ್ತಿದ್ದಾರೆ. ರಾಜಕೀಯ ದಿವಾಳಿತನ ಪ್ರದರ್ಶನ ಮಾಡ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಗ್ಯಾಂಗ್ ವಾರ್‌ನಲ್ಲಿ ಸೇವಾ ಗನ್ ಬಳಸಿ ಇಬ್ಬರು ಪೊಲೀಸರು ಪರಾರಿ