-ಚಿಕ್ಕಬಳ್ಳಾಪುರ ಹೆದ್ದಾರಿ ಯೋಜನೆಗಳಿಗೆ ಸಚಿವ ನಿತಿನ್ ಗಡ್ಕರಿಗೆ ಮನವಿ
ಚಿಕ್ಕಬಳ್ಳಾಪುರ: ದೊಡ್ಡಬಳ್ಳಾಪುರ – ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ರೈಲ್ವೇ ಖಾತೆಯ ರಾಜ್ಯ ಸಚಿವ ವಿ.ಸೋಮಣ್ಣ (V.Somanna) ಅವರಿಗೆ ಸಂಸದ ಡಾ.ಕೆ ಸುಧಾಕರ್ (Dr.K Sudhakar) ಮನವಿ ಮಾಡಿದ್ದಾರೆ.
Advertisement
ಬೆಂಗಳೂರು ಉಪನಗರ ರೈಲು ಯೋಜನೆಯಲ್ಲಿ ಎಫ್‍ಎಲ್‍ಎಸ್ ನಿರ್ಣಾಯಕವಾಗಿದ್ದು, ಕಾರಿಡಾರ್ 1 ಮತ್ತು 4 ರಲ್ಲಿ ಈ ಕಾರ್ಯವನ್ನು ಆದಷ್ಟು ಬೇಗ ಪೂರ್ಣಗೊಳಿಸಲು ಆದ್ಯತೆ ನೀಡಬೇಕು. ಇದರಿಂದ ಪ್ರಯಾಣಿಕರಿಗೆ ಹೆಚ್ಚು ಅನುಕೂಲವಾಗಲಿದೆ ಎಂದು ಅವರು ಪತ್ರದಲ್ಲಿ ಕೋರಿದ್ದಾರೆ. ಇದನ್ನೂ ಓದಿ: ಮಗುವಿಗೆ ಔಷಧಿ ತರಲು ತೆರಳಿದ್ದ ಮಹಿಳೆಯನ್ನು ನುಂಗಿದ ಹೆಬ್ಬಾವು!
Advertisement
ಅಮೃತ ಭಾರತ ಯೋಜನೆಯಡಿ ನಡೆಯುತ್ತಿರುವ ದೊಡ್ಡಬಳ್ಳಾಪುರ ಮತ್ತು ಚನ್ನಸಂದ್ರ ರೈಲು ನಿಲ್ದಾಣ ಮೇಲ್ದರ್ಜೆಗೇರಿಸುವ ಕಾಮಗಾರಿಯನ್ನು ಕಾಲಮಿತಿ ಹಾಕಿಕೊಂಡು ಶೀಘ್ರ ಪೂರ್ಣಗೊಳಿಸಬೇಕು. ಹೊಸ ರೈಲು ಮಾರ್ಗ ಯೋಜನೆಗಳಾದ ಚಿಕ್ಕಬಳ್ಳಾಪುರ-ಗೌರಿಬಿದನೂರು (44 ಕಿ.ಮೀ.), ಚಿಕ್ಕಬಳ್ಳಾಪುರ-ಶ್ರೀ ಸತ್ಯ ಸಾಯಿ ಪ್ರಶಾಂತಿ ನಿಲಯಂ (103 ಕಿ.ಮೀ.), ಶ್ರೀನಿವಾಸಪುರ-ಮದನಪಲ್ಲಿ (75 ಕಿ.ಮೀ.) ಮಾರಿಕುಪ್ಪಂ-ಕುಪ್ಪಂ (23.7 ಕಿ.ಮೀ.) ಯೋಜನೆಯನ್ನು ಶೀಘ್ರ ಪೂರ್ಣಗೊಳಿಸಬೇಕು. ಬೆಂಗಳೂರು ಉಪನಗರ ರೈಲು ಯೋಜನೆಯ ಕಾರಿಡಾರ್ 1: ದೇವನಹಳ್ಳಿ-ಯಲಹಂಕ ಮತ್ತು ಕಾರಿಡಾರ್ 4: ರಾಜಾನುಕುಂಟೆ-ಯಲಹಂಕ ಮಾರ್ಗಗಳನ್ನು ಶೀಘ್ರ ಪೂರ್ಣಗೊಳಿಸಬೇಕೆಂದು ಅವರು ಕೋರಿದ್ದಾರೆ.
Advertisement
Advertisement
ಹೆದ್ದಾರಿ ಯೋಜನೆಗಳಿಗೆ ಮನವಿ
ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಹೆದ್ದಾರಿ ಯೋಜನೆಗಳನ್ನು ಜಾರಿ ಮಾಡಿ ಪ್ರಯಾಣಿಕರಿಗೆ ಅನುಕೂಲ ಕಲ್ಪಿಸುವಂತೆ ಅವರು ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಅವರಿಗೆ ಮನವಿ ಪತ್ರ ಸಲ್ಲಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ NH-44 ಮತ್ತು NH-69 ರ ನಡುವೆ ಚತುಷ್ಫಥ ಹೊರವರ್ತುಲ ರಸ್ತೆ ನಿರ್ಮಿಸಲು ಕಾರ್ಯಸಾಧ್ಯತಾ ವರದಿ/ವಿಸ್ತೃತ ಯೋಜನಾ ವರದಿ ರೂಪಿಸಲು ಒಪ್ಪಿಗೆ ನೀಡಬೇಕು. ಚಿಕ್ಕಬಳ್ಳಾಪುರದಲ್ಲಿ NH-7 ನ ಎಲ್‍ಸಿ ನಂ. 39 ರಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 40 ಕೋಟಿ ರೂ. ಹೆಚ್ಚುವರಿ ಅನುದಾನ ನೀಡಬೇಕು. ಗೌರಿಬಿದನೂರಿನಲ್ಲಿ SH-9 ನಲ್ಲಿ ಚತುಷ್ಪಥ ರೈಲು ಮೇಲ್ಸೇತುವೆ ನಿರ್ಮಿಸಲು 75 ಕೋಟಿ ರೂ. ಅನುದಾನ ನೀಡಬೇಕು. NH-234 ರ ಅಗಲೀಕರಣದಿಂದ ಪ್ರಯಾಣದ ಅವಧಿ ಹಾಗೂ ದಟ್ಟಣೆ ಕಡಿಮೆಯಾಗಲಿದ್ದು, ಈ ಕುರಿತು ಕ್ರಮ ವಹಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ. ಇದನ್ನೂ ಓದಿ: ಚನ್ನಪಟ್ಟಣ ಶೀಘ್ರದಲ್ಲೇ ಬೆಂಗಳೂರಿಗೆ ಸೇರುತ್ತೆ, ನನ್ನ ಕೈ ಬಲಪಡಿಸಿ: ಡಿಕೆಶಿ ಮನವಿ