ಬೆಂಗಳೂರು: ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ(Chalavadi Narayanswamy) ವಿರುದ್ಧ ಚಿತ್ತಾಪುರದಲ್ಲಿ ಸಚಿವ ಪ್ರಿಯಾಂಕ್ ಖರ್ಗೆ(Priyank Kharge) ಬೆಂಬಲಿಗರು ಹಲ್ಲೆಗೆ ಮುಂದಾಗಿರೋ ಪ್ರಕರಣದಲ್ಲಿ ಕೂಡಲೇ ಸಿಎಂ ಸಿದ್ದರಾಮಯ್ಯ ಅವರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆ ಪಡೆಯಬೇಕು. ತನಿಖೆ ನಡೆಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರು ಆಗ್ರಹಿಸಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗೋಷ್ಠಿ ನಡೆಸಿದ ಎಂಎಲ್‌ಸಿಗಳು ಕೂಡಲೇ ಪ್ರಿಯಾಂಕ್ ಖರ್ಗೆ ಮತ್ತು ಗೂಂಡಾ ವರ್ತನೆ ಮಾಡಿದ ಬೆಂಬಲಿಗರ ಮೇಲೆ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿದರು. ಈ ವೇಳೆ ಬಿಜೆಪಿ ಎಂಎಲ್‌ಸಿ ನವೀನ್ ಮಾತಾಡಿ, ಚಿತ್ತಾಪುರದಲ್ಲಿ ಛಲವಾದಿ ನಾರಾಯಣಸ್ವಾಮಿ ಮೇಲೆ ನಡೆದ ಹಲ್ಲೆ ಸಂಬಂಧ ಸಭಾಪತಿಗಳಿಗೆ ದೂರು ನೀಡುತ್ತೇವೆ. ಸರ್ಕಾರ, ಸಿಎಂ, ಡಿಸಿಎಂ, ಗೃಹ ಸಚಿವರು ಮತ್ತು ಪ್ರಿಯಾಂಕ್ ಖರ್ಗೆ ಮೇಲೆ ಹಕ್ಕುಚ್ಯುತಿ ಮತ್ತು ಅಟ್ರಾಸಿಟಿ ಕೇಸ್ ದಾಖಲು ಮಾಡಬೇಕು ಎಂದು ಕಿಡಿಕಾರಿದರು. ಇದನ್ನೂ ಓದಿ: ನಮ್ಮ ಜಗಳ ನಮ್ಮಲ್ಲೇ ಇರಬೇಕಿತ್ತು, ನಾನು ಸತ್ತರೂ ಯಾರೂ ಕಾರಣರಲ್ಲ: ಸಹ ಕಲಾವಿದೆ
ಈ ಸರ್ಕಾರದಲ್ಲಿ ವಿಪಕ್ಷ ನಾಯಕರು, ಶಾಸಕರಿಗೆ ರಕ್ಷಣೆ ಇಲ್ಲ. ಗೂಂಡಾ ರಾಜ್ಯವನ್ನು ಈ ಸರ್ಕಾರ ಮಾಡ್ತಿದೆ. ಛಲವಾದಿ ನಾರಾಯಣಸ್ವಾಮಿ ನಾನ್ನುಡಿಯ ಮಾತು ಹೇಳಿದ್ದಾರೆ. ಅದಕ್ಕೆ ವಿಷಾದ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಪ್ರಿಯಾಂಕ್ ಬೆಂಬಲಿಗರು ನಾರಾಯಣಸ್ವಾಮಿ ಅವರ ಮೇಲೆ ಹಲ್ಲೆಗೆ ಮುಂದಾಗಿದ್ದು ಸರಿಯಲ್ಲ. ಪೊಲೀಸರೇ ಈ ಗೂಂಡಾಗಳಿಗೆ ಸಪೋರ್ಟ್ ಮಾಡಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ರಾಮನಗರ ಹೆಸರು ಬದಲಾವಣೆ ರಿಯಲ್ ಎಸ್ಟೇಟ್‌ನ ಕರಪತ್ರದಂತೆ: ನಿಖಿಲ್ ಕುಮಾರಸ್ವಾಮಿ
ಮಲ್ಲಿಕಾರ್ಜುನ ಖರ್ಗೆ ಹಿಂದೆ ನಾಯಿ ಅನ್ನೋ ಪದ ಬಳಕೆ ಮಾಡಿದ್ರು. ಪ್ರಧಾನಿಗಳನ್ನ ವಿಷ ಸರ್ಪ ಎಂದು ಕರೆದಿದ್ದರು. ಆಗ ಯಾರು ನಮ್ಮ ಕಾರ್ಯಕರ್ತರು ಹೀಗೆ ನಡೆದುಕೊಂಡಿರಲಿಲ್ಲ. ಕರ್ನಾಟಕದಲ್ಲಿ ಪ್ರಜಾಪ್ರಭುತ್ವ ಕಗ್ಗೊಲೆ ಆಗ್ತಿದೆ. ಸಂವಿಧಾನದ ಪುಸ್ತಕ ಹಿಡಿಯೋ ರಾಹುಲ್ ಗಾಂಧಿ ಇದಕ್ಕೆ ಉತ್ತರ ಕೊಡಬೇಕು. ತನಿಖೆ ಆಗಿ ಕ್ರಮ ಆಗೋವರೆಗೂ ಸಿಎಂ ಸಿದ್ದರಾಮಯ್ಯ(Siddaramaiah) ಅವರು ಪ್ರಿಯಾಂಕ್ ಖರ್ಗೆ ಅವರನ್ನ ಸಂಪುಟದಿಂದ ತೆಗೆದು ಹಾಕಬೇಕು ಎಂದು ಒತ್ತಾಯಿಸಿದರು.