ಮೈಸೂರು: ಪಿತೂರಿ ಮಾಡಿ ಸ್ವಾಮಿ ವಿವೇಕಾನಂದ ಮತ್ತು ಬಸವಣ್ಣರನ್ನು ಕೊಲೆ ಮಾಡಲಾಗಿದೆ ಎಂದು ಎಂದು ಪ್ರಗತಿಪರ ಚಿಂತಕ ಕೆ.ಎಸ್.ಭಗವಾನ್ ವಿವಾದಾತ್ಮಕ ಹೇಳಿಕೆಯನ್ನು ನೀಡಿದ್ದಾರೆ.
ಬಸವಣ್ಣವರು ಸಾಯುವ ಹಿಂದಿನ ದಿನ ತುಂಬಾ ಆರೋಗ್ಯಕರವಾಗಿದ್ದರು. ಹಾಗಾಗಿ ಬಸವಣ್ಣವರ ಕೊಲೆ ಮಾಡಲಾಗಿದೆ ಎಂಬುವುದು ನನ್ನ ಅಭಿಪ್ರಾಯ. ಬಸವಣ್ಣವರು ಹಿಂದೂ ಧರ್ಮಗಳನ್ನು ಬಲು ಕಟುವಾಗಿ ಟೀಕಿಸಿದ್ದಾರೆ. ಬಸವಣ್ಣವರು ಬೌದ್ಧ ಧರ್ಮದ ಬಗ್ಗೆ ಹಲವು ಮೆಚ್ಚುಗೆ ಸೂಚಿಸಿದ್ದಾರೆ ಎಂದು ಕೆಲವು ವಚನಗಳನ್ನು ಉದಾಹರಣೆಯಾಗಿ ನೀಡಿದರು. ಬಸವಣ್ಣವರ ಚಳುವಳಿಯನ್ನು ಸಹಿಸದವರೇ ಅವರ ಕೊಲೆ ಮಾಡಿದ್ದು, ಐಕ್ಯರಾಗಿದ್ದಾರೆ ಎಂಬುವುದು ಶುದ್ಧ ಸುಳ್ಳು ಎಂದು ವಾದಿಸಿದ್ದಾರೆ.
Advertisement
ಸ್ವಾಮಿ ವಿವೇಕಾನಂದರನ್ನು ಪಿತೂರಿ ಮಾಡಿ ಕೊಲೆ ಮಾಡಲಾಗಿದೆ. ಸ್ವಾಮಿ ವಿವೇಕಾನಂದರು ನಿಜವಾದ ಸನ್ಯಾಸಿಗಳು. ಎಲ್ಲವನ್ನು ಅರಿತಿರೋ ವಿವೇಕಾನಂದರು ಎರಡನೇ ಗೌತಮ ಬುದ್ಧ. ರಾತ್ರಿ ಎಲ್ಲ ಚೆನ್ನಾಗಿದ್ದ ವಿವೇಕಾನಂದರು ಬೆಳಗ್ಗೆ ನೋಡುವಾಗ ಕುಳಿತಲ್ಲೇ ಪ್ರಾಣ ಬಿಟ್ಟರು ಅಂದ್ರೆ ನಂಬೋದಕ್ಕೆ ಆಗಲ್ಲ. ದೇಶದಲ್ಲಿ ಬಡವರಿಗಾಗಿ ಕೆಲಸ ಮಾಡಬೇಕು ಎಂದು ಚಿಂತಿಸುತ್ತಿದ್ದ ವಿವೇಕಾನಂದರನ್ನು ಕತ್ತು ಹಿಸುಕಿ ಕೊಲೆ ಮಾಡಲಾಗಿದೆ ಎಂದು ಕೆ.ಎಸ್.ಭಗವಾನ್ ಸಂಶಯ ವ್ಯಕ್ತಪಡಿಸಿದ್ದಾರೆ.
Advertisement
Advertisement
ಈ ಕುರಿತು ಪ್ರತಿಕ್ರಿಯಿಸಿರುವ ಬಸವ ಪೀಠಾಧ್ಯಕ್ಷೆ ಮಾತೆ ಮಹಾದೇವಿ, ಬಸವಣ್ಣವರ ಕೊಲೆ ಆಗಿದೆ ಎಂಬುವುದನ್ನು ನಾವು ಒಪ್ಪೊದಿಲ್ಲ. ಬಸವಣ್ಣವರು ಯೋಗಪಟುವಾಗಿದ್ದರು ಅಲ್ಲದೇ ಐಕ್ಯ ಹೊಂದುವ ಇಚ್ಛಾಶಕ್ತಿಯನ್ನು ಹೊಂದಿದ್ದರು. ಬಸವಣ್ಣವರ ಕೊಲೆ ಆಗಿದೆ ಎಂಬುದರ ಬಗ್ಗೆ ಎಲ್ಲಿಯೂ ಉಲ್ಲೇಖವಾಗಿಲ್ಲ. ಇತಿಹಾಸವನ್ನು ಸರಿಯಾಗಿ ಓದಬೇಕು. ಹಾಗಾಗಿ ಈ ರೀತಿಯ ಹೇಳಿಕೆಗಳನ್ನ ನೀಡುವುದು ತಪ್ಪಾಗುತ್ತದೆ. ಇತಿಹಾಸ ವಸ್ತುನಿಷ್ಟವಾಗಿದ್ದು, ಅದಕ್ಕೆ ಸಂಬಂಧಿಸಿದ ದಾಖಲೆಗಳಿವೆ. ಬಸವಣ್ಣವರು ಹಿಂದೂ ಧರ್ಮದಲ್ಲಿ ಬದಲಾವಣೆ ತರಲು ಪ್ರಯತ್ನಿಸಿದ್ದು ನಿಜ, ಆದ್ರೆ ಕೊಲೆಯಾಗಿದೆ ಎಂಬುವುದು ಸುಳ್ಳು ಎಂದು ಹೇಳಿದರು.
Advertisement
ಮಾತೆ ಮಹಾದೇವಿಯವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಕೆ.ಎಸ್.ಭಗವಾನ್. ಅದು ಅವರ ವೈಯಕ್ತಿಯ ಅಭಿಪ್ರಾಯ. ಹಾಗಾಗಿ ಮಾತೆ ಮಹಾದೇವಿಯವರ ಮಾತುಗಳಿಗೆ ಪ್ರತಿಕ್ರಿಯೆ ನೀಡಲ್ಲ ಎಂದು ಸ್ಪಷ್ಟಪಡಿಸಿದ್ರು.