ಬೆಂಗಳೂರು: ಮಲ್ಲಿಕಾರ್ಜುನ ಖರ್ಗೆ 50 ವರ್ಷಗಳಿಂದ ರಾಜಕೀಯದಲ್ಲಿ, ಸಾರ್ವಜನಿಕ ಜೀವನ ಮಾಡಿದ್ದಾರೆ. ಅವರ ಉತ್ಸವ ಮಾಡುವುದರಿಂದ ಪಕ್ಷಕ್ಕೆ ಲಾಭ ಆಗುತ್ತದೆ. ಅವರನ್ನು ವೈಭವಿಕರಿಸುತ್ತೇವೆ ಎಂದಲ್ಲ, ಪಕ್ಷದ ಸಂಘಟನೆ ಆಗುತ್ತದೆ. ಚುನಾವಣೆ ವರ್ಷ ಇದು, ಏನೇ ಮಾಡಿದ್ರು ಪಕ್ಷಕ್ಕೆ ಲಾಭ. ಭವಿಷ್ಯದ ಬಗ್ಗೆ ಗಮನದಲ್ಲಿಟ್ಟುಕೊಂಡು ಕಾರ್ಯಕ್ರಮ ಮಾಡುತ್ತೇವೆ ಎಂದು ಸಿದ್ದರಾಮಯ್ಯ ಅಮೃತ ಮಹೋತ್ಸವ ಸಮಿತಿ ಗೌರವ ಅಧ್ಯಕ್ಷ ಕೆ.ಎನ್.ರಾಜಣ್ಣ ಹೇಳಿದರು.
Advertisement
ಸುದ್ದಿಗಾರರೊಂದಿಗೆ ಮಾತನಾಡುತ್ತಾ ಬಾಯಿ ಮುಚ್ಚಿಕೊಂಡು ಕೆಲಸ ಮಾಡಬೇಕು ಎಂಬ ಡಿಕೆಶಿ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿ, ಬಾಯಿಮುಚ್ಚಿಕೊಂಡು ಕೆಲಸ ಮಾಡಿ ಅಂದ್ರೆ, ಗೊಂದಲ ಸೃಷ್ಟಿ ಮಾಡದೇ ಕೆಲಸ ಮಾಡಿ ಅಂತಾ ಅಷ್ಟೇ. ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯ ಇಲ್ಲ. ಗೊಂದಲ ಸೃಷ್ಟಿ ಮಾಡೋದು ಬೇಡ. ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಪಕ್ಷ ಅಧಿಕಾರಕ್ಕೆ ತರೋಣ ಎನ್ನುವ ಅರ್ಥ ಹೇಳಿದ್ದಾರೆ. ಏನು ಗೊಂದಲ ಮಾಡೋದು ಬೇಡ ಎಂದು ಹೇಳಿದ್ದಾರೆ ಎಂದು ಅರ್ಥ ಮಾಡಿಕೊಳ್ಳಬೇಕು. ಸಿದ್ದರಾಮಯ್ಯ ಹುಟ್ಟುಹಬ್ಬ ಕಾರ್ಯಕ್ರಮದಿಂದ ಡಿಕೆಶಿ ಕಸಿವಿಸಿ ಆಗಿಲ್ಲ ಎಂದು ಹೇಳಿದರು. ಇದನ್ನೂ ಓದಿ: ಅಲ್ಪಸಂಖ್ಯಾತರು ಸಿದ್ದರಾಮಯ್ಯ ಋಣ ತೀರಿಸಬೇಕಿದೆ, ಅದಕ್ಕೆ ನಾನು ಹೆಚ್ಚು ಓಡಾಡ್ತಿದ್ದೀನಿ: ಜಮೀರ್
Advertisement
Advertisement
ಡಿ.ಕೆ ಶಿವಕುಮಾರ್ ಉತ್ಸವ ಮಾಡುವಂತೆ ಪತ್ರ ಬರೆದ ವಿಚಾರ ಸಂಬಂಧ ಮಾತನಾಡಿ, ಶಿವಕುಮಾರ್ ಉತ್ಸವ ಮಾಡಲಿ ಯಾರು ಬೇಡ ಅಂದರು. ನಮಗೂ ಹೇಳಲಿ, ನಾವೇ ಮುಂದೆ ನಿಂತು ಕಾರ್ಯಕ್ರಮ ಮಾಡುತ್ತೇವೆ. ಸಂದರ್ಭದ ಬಂದಾಗ ಡಿಕೆಶಿ ಉತ್ಸವ ಮಾಡೋಣ. ಆದರೆ ಇದು ಸಂದರ್ಭ ಅಲ್ಲ ಎಂದು ತಿಳಿಸಿದರು. ಇದನ್ನೂ ಓದಿ: ಸಾಬ್ರು ವೋಟ್ ಹಾಕಿದ್ರೆ ಮಾತ್ರ ಅಧಿಕಾರ ಹೆದರಿಸೋ ಕಾಲ ಹೋಗಿ ಬಹಳ ದಿನವಾಗಿದೆ ಜಮೀರ್ ಭಾಯ್: ಸಿ.ಟಿ ರವಿ
Advertisement
ಇದೊಂದು ಕಾಂಗ್ರೆಸ್ ಸಮಾವೇಶ ಅಂದರೂ ತಪ್ಪಾಗಲ್ಲ. ರಾಹುಲ್ ಗಾಂಧಿ ಬರುತ್ತಾರೆ, ಕಾಂಗ್ರೆಸ್ ನಾಯಕರು ಬರ್ತಾರೆ. ಜಮೀರ್ ಏನ್ ಕೆರಳಿಸಿದ್ದಾರೆ. ವ್ಯಕ್ತಿಗಳು ವೈಯಕ್ತಿಕ ಹೇಳಿಕೆಗೆ ಮಹತ್ವ ಕೊಡಬೇಕಿಲ್ಲ. ಕಾಂಗ್ರೆಸ್‍ಗೆ ಬಹುಮತ ಬಂದ ನಂತರ ತಾನೇ ಸಿಎಂ ಆಯ್ಕೆ ಆಗೋದು. ಸಿದ್ದರಾಮಯ್ಯ ಅವರ ಅಮೃತ ಮಹೋತ್ಸವ ಕಾರ್ಯಕ್ರಮ ದಾವಣಗೆರೆಯಲ್ಲಿ ನಡೆಯಲಿದೆ. ಭರ್ಜರಿ ತಯಾರಿ ನಡೆಯುತ್ತಿದೆ. ರಾಹುಲ್ ಗಾಂಧಿ, ನಮ್ಮ ಕೆಪಿಸಿಸಿ ಅಧ್ಯಕ್ಷರು, ಸೇರಿದಂತೆ ಅನೇಕ ನಾಯಕರು ಭಾಗವಹಿಸುತ್ತಾರೆ. ನಾಳೆ ದೆಹಲಿಗೆ ಹೋಗಿ ರಾಹುಲ್ ಗಾಂಧಿ ಅವರಿಗೆ ಅಧಿಕೃತ ಆಹ್ವಾನ ನೀಡುತ್ತೇನೆ. ಊಟ, ಸಂಚಾರಕ್ಕೆ ವ್ಯವಸ್ಥೆ ಎಲ್ಲವನ್ನೂ ಅಭಿಮಾನಿಗಳು ಸ್ವಯಂಪ್ರೇರಿತರಾಗಿ ಮಾಡಿಕೊಳ್ಳಲಿದ್ದಾರೆ ಎಂದರು.
ನಾವು ಯಾವುದೇ ವ್ಯವಸ್ಥೆ ಮಾಡಿಲ್ಲ. ಸಿದ್ದರಾಮಯ್ಯ ಹುಟ್ಟು ಹಬ್ಬ ಪರೋಕ್ಷವಾಗಿ ಅಹಿಂದ ಸಮಾವೇಶನಾ ಎಂಬ ಪ್ರಶ್ನೆಗೆ ಉತ್ತರಿಸಿ, ಅವರು ಮೊದಲಿನಿಂದಲೂ ಅಹಿಂದ ಪರವಾಗಿಯೇ ಇದ್ದಾರೆ. ಅದನ್ನು ಮತ್ತೆ ಹೇಳಬೇಕಾಗಿಲ್ಲ. ಅವರಿಗೆ ಹುಟ್ಟಿದ ಹಬ್ಬದ ಆಚರಣೆ ಇಷ್ಟವಿಲ್ಲ. ಆದರೆ ಇದೊಂದು ಕಾರ್ಯಕರ್ತರ ಸಮಾವೇಶ ಎಂದು ಹೇಳಬಹುದು. ಬಿಜೆಪಿ ಅವರ ಆಡಳಿತ ಕುಸಿದು ಹೋಗಿದೆ. ನಮ್ಮ ಬಗ್ಗೆ ಮಾತನಾಡುವ ನೈತಿಕತೆ ಅವರಿಗೆ ಇಲ್ಲ. ನಾನು ಯಾರನ್ನೂ ಓಲೈಸುವ ಅಗತ್ಯ ಇಲ್ಲ. ನಾನು ಯಾರನ್ನೂ ತೃಪ್ತಿ ಪಡಿಸಬೇಕು ಅಂತೇನಿಲ್ಲ. ನಾನು ಸಂತೋಷವಾಗಿ ಸಿದ್ದರಾಮೋತ್ಸವ ಸಮಿತಿ ಅಧ್ಯಕ್ಷ ಆಗಿದ್ದೇನೆ ಎಂದು ತಿಳಿಸಿದರು.