ಬಾಲಿವುಡ್ (Bollywood) ನಟ ಸುನೀಲ್ ಶೆಟ್ಟಿ (Suniel Shetty) ಕುಟುಂಬದಲ್ಲಿ ಮದುವೆ ಸಂಭ್ರಮ ಕಳೆಗಟ್ಟಿದೆ. ಪುತ್ರಿ ಅಥಿಯಾ ಶೆಟ್ಟಿ ಮತ್ತು ರಾಹುಲ್ ಮದುವೆಗೆ ಈಗಾಗಲೇ ಕೌಂಟ್ಡೌನ್ ಶುರುವಾಗಿದೆ. ಮದುವೆ ನಡೆಯುವ ಸುನೀಲ್ ಶೆಟ್ಟಿ ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಈ ವೇಳೆ ಪಾಪರಾಜಿಗಳಿಗೆ ನಟ ಸುನೀಲ್ ಶೆಟ್ಟಿ ಭರವಸೆ ನೀಡಿದ್ದಾರೆ.
ಚಿತ್ರರಂಗದಲ್ಲಿ ಸದ್ಯ ಗಟ್ಟಿಮೇಳದ ಸದ್ದು ಜೋರಾಗಿದೆ. ಖಂಡಾಲದಲ್ಲಿ ಬಂಗಲೆ ಸುನೀಲ್ ಶೆಟ್ಟಿ ಪುತ್ರಿ ಅಥಿಯಾ ಶೆಟ್ಟಿ (Athiya Shetty) ಮದುವೆ (Wedding) ಕಾರ್ಯಗಳು ನಡೆಯುತ್ತಿವೆ. ಫಾರ್ಮ್ ಹೌಸ್ ಮುಂಭಾಗದಲ್ಲಿ ಅನೇಕ ಪಾಪರಾಜಿಗಳು ಕ್ಯಾಮೆರಾ ಹಿಡಿದು ನಿಂತಿದ್ದಾರೆ. ಅವರನ್ನು ನೋಡಿದ ಸುನೀಲ್ ಶೆಟ್ಟಿ ಅವರು ಕಾರಿನಿಂದ ಕೆಳಗೆ ಇಳಿದು ಬಂದು ಮಾತನಾಡಿದ್ದಾರೆ. ನಾವು ನಾಳೆ ಬರುತ್ತೇವೆ. ಮಕ್ಕಳನ್ನು ನಾನು ಕರೆದುಕೊಂಡು ಬರುತ್ತೇನೆ ಎಂದು ಪಾಪರಾಜಿಗಳಿಗೆ ವಿನಯತೆಯಿಂದ ಸುನೀಲ್ ಶೆಟ್ಟಿ ಹೇಳಿದ್ದಾರೆ. ಇದನ್ನೂ ಓದಿ: ಹುಟ್ಟುಹಬ್ಬದಂದು ಸಿಹಿಸುದ್ದಿ ಕೊಟ್ಟ ನಟ ನಿಖಿಲ್ ಕುಮಾರಸ್ವಾಮಿ
ಮಗಳ ಮದುವೆಯ ಸಂಭ್ರಮದ ನಡುವೆ ಸುನೀಲ್ ಶೆಟ್ಟಿಗೆ ಪಾಪರಾಜಿಗಳು ಧನ್ಯವಾದಗಳನ್ನ ತಿಳಿಸಿದ್ದಾರೆ. ಅವರೆಲ್ಲರಿಗೂ ಸುನೀಲ್ ಶೆಟ್ಟಿ ಧನ್ಯವಾದ ಅರ್ಪಿಸಿದ್ದಾರೆ. ನಮ್ಮ ಮೇಲೆ ನೀವೆಲ್ಲ ಪ್ರೀತಿ ತೋರಿಸಿದ್ದಕ್ಕೆ ಬಹಳ ಥ್ಯಾಂಕ್ಸ್ ಎಂದು ಅವರು ಹೇಳಿದ್ದಾರೆ. ಪಾಪರಾಜಿಗಳ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ಈ ವಿಡಿಯೋ ವೈರಲ್ ಆಗಿದೆ.
View this post on Instagram
ಕ್ರಿಕೆಟಿಗ ರಾಹುಲ್ (Kl Rahul) ಮತ್ತು ಅಥಿಯಾ ಶೆಟ್ಟಿ ಅವರು ಹಲವು ವರ್ಷಗಳಿಂದ ಡೇಟಿಂಗ್ ಮಾಡುತ್ತಿದ್ದರು. ಈಗ ಸಪ್ತಪದಿ ತುಳಿದು ತಮ್ಮ ಪ್ರೀತಿಗೆ ಅಧಿಕೃತ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜನವರಿ 23ಕ್ಕೆ ಹಸೆಮಣೆ ಏರುತ್ತಿದ್ದಾರೆ. ಆಪ್ತರ ಸಮ್ಮುಖದಲ್ಲಿ ಅದ್ದೂರಿಯಾಗಿ ಈ ಜೋಡಿಯ ಮದುವೆ ನಡೆಯಲಿದೆ.
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k