ಹಾಸನ: ಸಚಿವ ಕೆ.ಹೆಚ್. ಮುನಿಯಪ್ಪ (K.H Muniyappa) ಅವರ ಕಾರಿಗೆ (Car) ಮತ್ತೊಂದು ಕಾರು ಡಿಕ್ಕಿಯಾದ (Accident) ಘಟನೆ ಹಾಸನದ ಶಾಂತಿ ಗ್ರಾಮದ ಬಳಿಯ ಬೆಂಗಳೂರು-ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರಲ್ಲಿ ನಡೆದಿದೆ.
ನಗರದಲ್ಲಿ (Hassan) ಆಯೋಜನೆಗೊಂಡಿದ್ದ ಜನಕಲ್ಯಾಣ ಸಮಾವೇಶಕ್ಕೆ ಸಚಿವರು ಆಗಮಿಸುತ್ತಿದ್ದರು. ಈ ವೇಳೆ ಶಾಂತಿ ಗ್ರಾಮದ ಶುಲ್ಕ ವಸೂಲಿ ಕೇಂದ್ರದ ಹತ್ತಿರ ಸಚಿವರ ಕಾರು ನಿಧಾನ ಆದಾಗ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಡಿಕ್ಕಿ ಹೊಡೆದಿದೆ. ಅದೃಷ್ಟವಶಾತ್ ಯಾವುದೇ ಹಾನಿ ಆಗಿಲ್ಲ.
ಸಚಿವರ ಕಾರಿಗೆ ಗುದ್ದಿದ ಇನ್ನೋವಾ ಕಾರಿನ ಮುಂಭಾಗ ಭಾಗಶಃ ಜಖಂಗೊಂಡಿದೆ. ಸಚಿವರ ಕಾರಿಗೂ ಸಣ್ಣ ಪ್ರಮಾಣದಲ್ಲಿ ಹಾನಿಯಾಗಿದೆ. ನಂತರ ಸಚಿವರು ಬದಲಿ ಕಾರಿನಲ್ಲಿ ಸಮಾವೇಶಕ್ಕೆ ತೆರಳಿದ್ದಾರೆ.