ಮಂಡ್ಯ: ಹಾಸನ, ಮಂಡ್ಯ ಜನರ ಋಣ ನನ್ನ ಮೇಲಿದೆ. ಮಂಡ್ಯ (Mandya), ಹಾಸನ (Hassan) ಜಿಲ್ಲೆಯ ಜನರು ಯಾರ ಬರಲಿ ಅವರಿಗೆ ಸ್ಪಂದಿಸುತ್ತೇನೆ ಎಂದು ಸಚಿವ ಕೆ. ಗೋಪಾಲಯ್ಯ (K Gopalaiah) ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮತ್ತೆ ಉಸ್ತುವಾರಿ ವಹಿಸಿಕೊಳ್ಳಲು ನಕಾರ ಮಾಡಿದರು. ಮುಖ್ಯಮಂತ್ರಿಗಳು ಕೊಟ್ಟ ಜವಾಬ್ದಾರಿಯನ್ನು ಮಾಡಿದ್ದೇನೆ. ಮತ್ತೆ ಉಸ್ತುವಾರಿ ಹೊಣೆ ವಹಿಸಿಕೊಳ್ಳುವ ಬಗ್ಗೆ ನಾನು ಮಾತನಾಡಲ್ಲ. ನಮ್ಮ ಸರ್ಕಾರ, ಸಿಎಂ, ಪಕ್ಷದ ಅಧ್ಯಕ್ಷರು ಕೊಡುವ ಜವಾಬ್ದಾರಿ ನಿರ್ವಹಿಸುವುದು ನನ್ನ ಕರ್ತವ್ಯ. ಮಂಡ್ಯ ಉಸ್ತುವಾರಿ ವಿಚಾರ ನಾನು ಮಾತನಾಡಲ್ಲ ಎಂದು ಹೇಳಿದರು.
Advertisement
Advertisement
ಕೆ.ಗೋಪಾಲಯ್ಯರಿಗೆ ಉಸ್ತುವಾರಿ ಕೊಡಲಿ ಎಂಬ ನಾರಾಯಣಗೌಡರ (Narayana Gowda) ಹೇಳಿಕೆಗೂ ಪ್ರತಿಕ್ರಿಯೆ ನೀಡಲು ಹಿಂದೇಟು ಹಾಕಿದ ಅವರು, ಮಂಡ್ಯ, ಹಾಸನ ಜಿಲ್ಲೆಯ ಜನರು ಯಾರ ಬರಲಿ ಅವರಿಗೆ ಸ್ಪಂದಿಸುತ್ತೇನೆ. ಉಸ್ತುವಾರಿ ವಿಚಾರವಾಗಿ ನಾನು ಏನನ್ನು ಮಾತನಾಡಲ್ಲ. ಉಸ್ತುವಾರಿ ಗೊಂದಲದಿಂದ ಪಕ್ಷಕ್ಕೆ ಡ್ಯಾಮೇಜ್ ಆಗಿಲ್ಲ. ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಬಲಿಷ್ಠವಾಗಿದೆ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
Advertisement
Advertisement
ಗೊಂದಲ ಏನಿಲ್ಲ, ಕಂದಾಯ ಸಚಿವರ ಅಶೋಕರನ್ನೇ (R Ashok) ಮೊದಲು ಮುಖ್ಯಮಂತ್ರಿಗಳು ನೇಮಕ ಮಾಡಿದರು. ಅವರ ಕಾರ್ಯ ಒತ್ತಡದಿಂದ ಅವರು ಹೋಗಿರಲಿಲ್ಲ. ನನ್ನನ್ನು ಕೆಲವು ದಿನ ಇರಲು ಹೇಳಿದ್ದರು. ನಾನಿದ್ದಂತಹ ಸಂದರ್ಭದಲ್ಲಿ ಹಾಸನ ಜಿಲ್ಲೆಯಲ್ಲಿ ಯಾವ ರೀತಿ ಎಲ್ಲರ ಜೊತೆ ಬೆರೆತಿದ್ದೆ, ಅಲ್ಲಿಯೂ ಸಹ ಬೆರಿತಿದ್ದೆ. ನಮ್ಮಲ್ಲಿ ಇರುವಂತಹ ಎಲ್ಲರೂ ಸಮರ್ಥರೇ ಎಂದರು. ಇದನ್ನೂ ಓದಿ: ಸ್ವಂತ ಅಳಿಯನನ್ನೇ ಕಿಡ್ನ್ಯಾಪ್ ಮಾಡಿದ ಆರೋಪ – ಕಾಂಗ್ರೆಸ್ ನಾಯಕಿ ವಿರುದ್ಧ FIR
ಹಿಂದೆ ನಾರಾಯಣಗೌಡರು ಇದ್ದರು, ಸಮರ್ಥರೇ. ಅಶೋಕ್ ಅವರು ಬಿಜೆಪಿಯಲ್ಲಿ ಹಿರಿಯರು, ನಮಗಿಂತ ದೊಡ್ಡವರು, ದೊಡ್ಡದಾದ ಕಂದಾಯ ಖಾತೆಯನ್ನು ನಿರ್ವಹಣೆ ಮಾಡುತ್ತಿದ್ದಾರೆ. ಕಳೆದ ಮೂರು ವರ್ಷದಲ್ಲಿ ಕಂದಾಯ ಇಲಾಖೆಯಲ್ಲಿ ಹಲವಾರು ಬದಲಾವಣೆ ತಂದಿದ್ದಾರೆ. ನಾನಲ್ಲ, ಪಕ್ಷದಲ್ಲಿ ಪ್ರತಿಯೊಬ್ಬರು ಸಮರ್ಥರಾಗಿದ್ದಾರೆ. ನಾನೇ ಸ್ವತಃ ಒಂದು ಜಿಲ್ಲೆ ಸಾಕು ಅಂತ ಕೇಳಿದ್ದೆ. ನಾನು ಹಾಸನ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿದ್ದೇನೆ. ಅಲ್ಲಿ ಯಾರು ಬೇಕಾದರೂ ನಿರ್ವಹಿಸಬೇಕಾದ ಶಕ್ತಿಯಿದೆ. ನಮ್ಮ ಪಕ್ಷದಲ್ಲಿ ಸಚಿವ ಸಂಪುಟದ ಎಲ್ಲಾ ಸಚಿವರು ಸಮರ್ಥರಿದ್ದಾರೆ ಎಂದು ಹೇಳಿದರು. ಇದನ್ನೂ ಓದಿ: ಕ್ರಿಕೆಟ್ ಟೂರ್ನಿ ವೇಳೆ ಕಿರಿಕ್ ಮಾಡಿ ಇಬ್ಬರ ಹತ್ಯೆ ಪ್ರಕರಣ – ಆರೋಪಿತರ ಕಾಲಿಗೆ ಪೊಲೀಸರ ಗುಂಡೇಟು
LIVE TV
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k