ಕನ್ನಡದ ನಟಿ ಜ್ಯೋತಿ ರೈ (Jyothi Rai) ಇದೀಗ ಟಾಲಿವುಡ್‌ಗೆ ನಾಯಕಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಇದೀಗ ರಿಲೀಸ್ ಆಗಿರುವ ‘ಎ ಮಾಸ್ಟರ್ ಪೀಸ್’ ಚಿತ್ರದ ಟೀಸರ್‌ಗೆ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಈ ಚಿತ್ರದ ಟೀಸರ್ ಕಾರ್ಯಕ್ರಮದಲ್ಲಿ ನಿರ್ದೇಶಕ ಸುಕು ಪೂರ್ವಜ್ (Suku Purvaj) ಜೊತೆ ಮದುವೆಯಾಗಿದೆ (Wedding) ಎಂದು ಜ್ಯೋತಿ ರೈ ಅಧಿಕೃತವಾಗಿ ಹೇಳಿದ್ದಾರೆ.
20ರ ವಯಸ್ಸಿನಲ್ಲೇ ಪದ್ಮನಾಭ್ ರೈ ಜೊತೆ ಜ್ಯೋತಿ ರೈ ಮದುವೆಯಾಗಿತ್ತು. ಅವರ ಸಂಬಂಧಕ್ಕೆ ಮಗ ಕೂಡ ಸಾಕ್ಷಿಯಾಗಿದ್ದಾನೆ. ಆದರೆ ಈ ಮದುವೆ ಕೆಲವೇ ವರ್ಷಗಳಲ್ಲಿ ಮುರಿದು ಬಿದ್ದಿತ್ತು. ನಂತರ ತಮ್ಮ 2ನೇ ಮದುವೆ ಬಗ್ಗೆ ನಟಿ ಎಲ್ಲೂ ಮಾತನಾಡಿರಲಿಲ್ಲ. ಈಗ ಮೊದಲ ಬಾರಿಗೆ 2ನೇ ಮದುವೆ ಬಗ್ಗೆ ಜ್ಯೋತಿ ರೈ ಮಾತನಾಡಿದ್ದಾರೆ. ಇದನ್ನೂ ಓದಿ:Exclusive: ‘ಕಾಟೇರ’ ಡೈರೆಕ್ಟರ್‌ಗೆ ದರ್ಶನ್ ಸಾಥ್- ‘ವೀರ ಸಿಂಧೂರ ಲಕ್ಷ್ಮಣ’ ಬರೋದು ಕನ್ಫರ್ಮ್
‘ಎ ಮಾಸ್ಟರ್ ಪೀಸ್’ ಸಿನಿಮಾದ ಕಾರ್ಯಕ್ರಮದಲ್ಲಿ ನಟಿ ಮಾತನಾಡುತ್ತಾ, ಈ ಚಿತ್ರದ ಮೂಲಕ ನನ್ನ ಬದುಕಿನ ದಿಕ್ಕು ಬದಲಾಯಿತು ಎಂದಿದ್ದಾರೆ. ಸುಕು ಪೂರ್ವಜ್‌ರನ್ನು ನನ್ನ ಪತಿಯಾಗಿ ಪಡೆಯಲು ನಾನು ಪುಣ್ಯ ಮಾಡಿದ್ದೇ ಎಂದು ಜ್ಯೋತಿ ರೈ ಓಪನ್ ಆಗಿ ಮಾತನಾಡಿದ್ದಾರೆ.
ಈ ವೇಳೆ, ಹೆಚ್ಚೆಚ್ಚು ತೆಲುಗು ಸಿನಿಮಾಗಳಲ್ಲಿ ನಟಿಸೋದಾಗಿ ಜ್ಯೋತಿ ರೈ ಹೇಳಿದ್ದಾರೆ. ಇದು ನಾನು ನಾಯಕಿಯಾಗಿ ನಟಿಸುತ್ತಿರುವ ಮೊದಲು ಸಿನಿಮಾ. ಆಂಧ್ರದ ಜನರ ಹಾರೈಕೆ ನನ್ನ ಮೇಲಿರಲಿ ಎಂದು ನಟಿ ಮನವಿ ಮಾಡಿದ್ದಾರೆ.