ನವದೆಹಲಿ: ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ(Pahalgam Terror Attack) ಪ್ರತೀಕಾರವಾಗಿ ಭಾರತೀಯ ಸೇನೆಯು ತಡರಾತ್ರಿ ಪಾಕಿಸ್ತಾನದ ಉಗ್ರರ ಅಡಗುತಾಣಗಳ ಮೇಲೆ ದಾಳಿ ನಡೆಸಿದೆ. ಇದೀಗ ಎಡಿಜಿಪಿಐ ಇಂಡಿಯನ್ ಆರ್ಮಿ Justice is Served (ನ್ಯಾಯ ಒದಗಿಸಿದೆ) ಎಂದು ಪೋಸ್ಟ್ ಹಾಕಿದೆ.
Justice is Served.
Jai Hind! pic.twitter.com/Aruatj6OfA
— ADG PI – INDIAN ARMY (@adgpi) May 6, 2025
ಪಹಲ್ಗಾಮ್ ಉಗ್ರರ ದಾಳಿಗೆ ನ್ಯಾಯ ಒದಗಿಸಲಾಗಿದೆ. ಜೈ ಹಿಂದ್ ಎಂದು ಭಾರತೀಯ ಸೇನೆ ತನ್ನ ಎಕ್ಸ್‌ನಲ್ಲಿ ಪೋಸ್ಟ್ ಹಾಕಿ ಪತ್ರೀಕಾರದ ಸಂದೇಶವನ್ನು ನೀಡಿದೆ. ಇದನ್ನೂ ಓದಿ: 9 ಉಗ್ರರ ನೆಲೆಗಳು ಉಡೀಸ್- ಗಡಿಯಿಂದ ಎಷ್ಟು ದೂರ ಇದೆ? ಎಲ್ಲೆಲ್ಲಿ ದಾಳಿ?
ಏ. 22ರಂದು ಪಾಕಿಸ್ತಾನದ ಉಗ್ರರರು ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದಾಳಿ ಮಾಡಿ, 1 ವಿದೇಶಿ ಸೇರಿ 26 ಮಂದಿಯನ್ನು ಹತ್ಯೆ ಮಾಡಿದ್ದರು. ಈ ಹತ್ಯೆಯ ಪ್ರತೀಕಾರಕ್ಕೆ ಹವಣಿಸುತ್ತಿದ್ದ ಭಾರತ ಇಂದು `ಆಪರೇಷನ್ ಸಿಂಧೂರ'(Operation Sindoor) ಹೆಸರಿನಲ್ಲಿ ಪಾಕಿಸ್ತಾನದ(Pakistan) 9 ಉಗ್ರರ ಅಡುತಾಣಗಳ ಮೇಲೆ ದಾಳಿ ಮಾಡುವ ಮೂಲಕ ಪ್ರತೀಕಾರ ತೀರಿಸಿಕೊಂಡಿದೆ.