ಬೆಂಗಳೂರು: ಭದ್ರತಾ ಪಡೆಗಳು ಸೋಮವಾರ ನಿರ್ಲಕ್ಷ್ಯ ವಹಿಸಿದ್ದರೆ ಅಲ್ಲೊಂದು ರಕ್ತಪಾತ ನಡೆದು ಹೋಗುತ್ತಿತ್ತು. ಕರುನಾಡು ಮರೆಯದ ಅನಾಹುತ ಕ್ಕೆ ಸಾಕ್ಷಿಯಾಗುತಿತ್ತು. ಹೌದು ಮಂಗಳೂರಿನ ವಿಮಾನ ನಿಲ್ದಾಣದಲ್ಲಿ ಸಿಕ್ಕಿದ್ದು ಮೋಸ್ಟ್ ಡೇಂಜರಸ್ ಬಾಂಬ್. ಭರ್ತಿ ಐನೂರು ಮೀಟರ್ ಪ್ರದೇಶದಲ್ಲಿ ಹಾನಿ ಉಂಟು ಮಾಡಬಲ್ಲ ಬೆಂಕಿಯುಂಡೆ.
ಸ್ಫೋಟವಾಗಿದ್ದರೆ ಏನಾಗುತಿತ್ತು?
1. ಇದು ಕರ್ನಾಟಕದ ಇತಿಹಾಸದಲ್ಲಿ ಸಿಕ್ಕ ಅತ್ಯಂತ ದೊಡ್ಡ ಸುಧಾರಿತ ಜೀವಂತ ಬಾಂಬ್. 10 ಕೆಜಿ ತೂಕದ ಬಾಂಬ್ ಸ್ಫೋಟವಾಗಿದ್ದರೆ ದೊಡ್ಡ ಮಟ್ಟದ ಅನಾಹುತವಾಗುತ್ತಿತ್ತು.
Advertisement
Advertisement
2. ಈ ಬಾಂಬ್ ಅನ್ನು ಹೇಗೆ ತಯಾರು ಮಾಡಿದ್ದಾರೆ ಎಂದರೆ ಸ್ಫೋಟವಾದ ತಕ್ಷಣ ದೊಡ್ಡ ಮಟ್ಟದ ಅನಾಹುತ ಸಂಭವಿಸಬೇಕು ಅನ್ನುವ ಉದ್ದೇಶ ಇಟ್ಟುಕೊಂಡೇ ತಯಾರು ಮಾಡಿದ್ದಾರೆ. ಭರ್ತಿ ಹತ್ತು ಕೆಜಿ ಬಾಂಬ್ ಬರೋಬ್ಬರಿ ಐನೂರು ಮೀಟರ್ ವ್ಯಾಪ್ತಿಯ ಪ್ರದೇಶದಲ್ಲಿ ಹಾನಿ ಉಂಟುಮಾಡಬಲ್ಲ ಸಾಮರ್ಥ್ಯ ಹೊಂದಿತ್ತು. ಟಿಕೆಟ್ ಕೌಂಟರ್ ಬಳಿ ಇದನ್ನು ಇಟ್ಟ ಕಾರಣ ಸಾಕಷ್ಟು ಪ್ರಾಣ ಹಾನಿಯಾಗುತಿತ್ತು, ಜನರನ್ನೇ ಮುಖ್ಯವಾಗಿ ವಿವಿಐಪಿ ಗೇಟ್ ಟಾರ್ಗೆಟ್ ಮಾಡಲಾಗಿತ್ತು.
Advertisement
3. ನಾಣ್ಯ ಸಂಗ್ರಹಕ್ಕೆ ಬಳಸುವ ಲೋಹದ ಡಬ್ಬಿಯಲ್ಲಿ ಬಾಂಬ್ ಇಡಲಾಗಿತ್ತು. ಸ್ಫೋಟಕ್ಕೆ ಬಳಸುವ ರಾಸಾಯನಿಕ ಪುಡಿ, ಲೋಹದ ತಂತಿ, ಲೋಹದ ತುಣುಕುಗಳು, ಟೈಮರ್ ಬಳಸಿ ಬಾಂಬ್ ತಯಾರಿಸಲಾಗಿತ್ತು. ಬಳಸಿದ್ದ ಟೈಮರ್ ಸ್ಥಗಿತಗೊಂಡಿತ್ತು. ಇದು ಸ್ಫೋಟಗೊಂಡಿದ್ದರೇ ಮನುಷ್ಯರ ದೇಹ ಸುಟ್ಟು ಕರಕಲು ಮಾತ್ರವಲ್ಲ ಛಿದ್ರ ಛಿದ್ರವಾಗುತ್ತಿತ್ತು. ಇದನ್ನೂ ಓದಿ: ಮಂಗ್ಳೂರಲ್ಲಿ ಬಾಂಬ್ ಪತ್ತೆ – ರಿಕ್ಷಾದಲ್ಲಿ 19 ಕಿ.ಮೀ ಪ್ರಯಾಣ, ಮತ್ತೊಂದು ಬ್ಯಾಗ್‍ನಲ್ಲಿ ಏನಿತ್ತು?
Advertisement
4. ಇದು ಉಗ್ರ ಸಂಘಟನೆಯ ಸದಸ್ಯರು ಮಾತ್ರ ಬಳಸಬಹುದಾದ ಬಾಂಬ್ ಆಗಿದೆ. ಇದು ಬಾಂಬ್ ತಯಾರಿಕೆಯ ಯಾವುದೇ ನಿಯಮಗಳನ್ನು ಪಾಲಿಸದೇ ಕುಕೃತ್ಯ ನಡೆಸುವ ಉದ್ದೇಶದಿಂದಲೇ ತಯಾರು ಮಾಡಲಾಗಿದೆ.
5. ವಿಚಿತ್ರ ಅಂದ್ರೆ ಈ ಬಾಂಬ್ ನೊಳಗೆ ಇರುವ ಸ್ಫೋಟಕವನ್ನು ಪತ್ತೆ ಹಚ್ಚುವುದು ಸಹ ಅಷ್ಟೇ ಕಷ್ಟ. ಕೆಟ್ಟ ಉದ್ದೇಶ ಸಾಕಷ್ಟು ಪ್ರಾಣಹಾನಿಯಾಗುವ ಉದ್ದೇಶವಿಟ್ಟೇ ಈ ಬಾಂಬ್ ನಿರ್ಮಾಣವಾಗಿದೆ. ಮುಂದೆ ವಿಧಿ ವಿಜ್ಞಾನ ಪ್ರಯೋಗಾಲಯದ ವಿಜ್ಞಾನಿಗಳು ಅಧ್ಯಯನ ನಡೆಸಿ ರಾಸಾಯನಿಕವನ್ನು ಪತ್ತೆ ಹಚ್ಚಲಿದ್ದಾರೆ.
6. ಸಾಮಾನ್ಯವಾಗಿ ದೊಡ್ಡ ಬಂಡೆಗಳನ್ನು ಸ್ಫೋಟಗೊಳಿಸಲು ಬಳಸುವ ಸ್ಫೋಟಕಗಳಿಗಿಂತಲೂ ತೀವ್ರ ಶಕ್ತಿಶಾಲಿ ಬಾಂಬ್ ಇದು. ಇದ್ರಿಂದ ದೊಡ್ಡ ಮಟ್ಟದ ಅನಾಹುತವೇ ವಿಮಾನ ನಿಲ್ದಾಣದಲ್ಲಿ ನಡೆದುಹೋಗುತ್ತಿತ್ತು.