ಅತ್ಯಂತ ಆರೋಗ್ಯಕರ ತರಕಾರಿ ಹಾಗಲಕಾಯಿಯನ್ನು (Bitter Gourd) ಹೆಚ್ಚಿನವರು ಅದರ ಕಹಿಯಾದ ರುಚಿಯಿಂದಲೇ ಇಷ್ಟಪಡುವುದಿಲ್ಲ. ಆದರೆ ಹಾಗಲಕಾಯಿಯ ಅಡುಗೆ ಮಾಡುವುದೇ ಒಂದು ಕಲೆ. ಸರಿಯಾದ ಪದಾರ್ಥಗಳನ್ನು ಬಳಸಿ ಹಾಗಲಕಾಯಿಯ ಅಡುಗೆ ಮಾಡಿದರೆ ಅದು ಕಹಿಯಾದರೂ ರುಚಿಕರವನ್ನಾಗಿ ಮಾಡಬಹುದು. ಇಂದು ನಾವು ಸ್ಟಫ್ಡ್ ಹಾಗಲಕಾಯಿ (Stuffed Bitter Gourd) ಮಾಡುವುದು ಹೇಗೆ ಎಂದು ಹೇಳಿಕೊಡುತ್ತೇವೆ. ಇದನ್ನು ಒಮ್ಮೆ ಮಾಡಿ ನೋಡಿದರೆ, ಮತ್ತೆಂದೂ ನೀವು ಹಾಗಲಕಾಯಿಯನ್ನು ಬೇಡ ಎನ್ನಲ್ಲ.
ಬೇಕಾಗುವ ಪದಾರ್ಥಗಳು:
ಹಾಗಲಕಾಯಿ – ಅರ್ಧ ಕೆಜಿ
ಉಪ್ಪು – 1 ಟೀಸ್ಪೂನ್
ಅರಿಶಿನ – 1 ಟೀಸ್ಪೂನ್
ಎಣ್ಣೆ – 2-3 ಟೀಸ್ಪೂನ್
Advertisement
Advertisement
ಸ್ಟಫಿಂಗ್ ಮಸಾಲೆ ತಯಾರಿಸಲು:
ಎಣ್ಣೆ – 1-2 ಟೀಸ್ಪೂನ್
ಸಣ್ಣಗೆ ಹೆಚ್ಚಿದ ಈರುಳ್ಳಿ – 2
ಶುಂಠಿ ಬೆಳ್ಳುಳ್ಳಿ ಪೇಸ್ಟ್ – 1 ಟೀಸ್ಪೂನ್
ಉಪ್ಪು – ರುಚಿಗೆ ತಕ್ಕಷ್ಟು
ಕೆಂಪು ಮೆಣಸಿನ ಪುಡಿ – 1 ಟೀಸ್ಪೂನ್
ಆಮ್ಚೂರ್ ಪುಡಿ – 2 ಟೀಸ್ಪೂನ್
ಬೆಲ್ಲ – 2 ಟೀಸ್ಪೂನ್
ಹಿಂಗ್ – ಚಿಟಿಕೆ
ಕೊತ್ತಂಬರಿ ಪುಡಿ – 1 ಟೀಸ್ಪೂನ್
ಜೀರಿಗೆ ಪುಡಿ – ಅರ್ಧ ಟೀಸ್ಪೂನ್
ಹುರಿದ ಕಡಲೆಕಾಯಿ – 3-4 ಟೀಸ್ಪೂನ್ (ಸ್ವಲ್ಪ ಒರಟಾಗಿ ಪುಡಿ ಮಾಡಿ)
ಒಣ ತೆಂಗಿನ ತುರಿ – 2-3 ಟೀಸ್ಪೂನ್ ಇದನ್ನೂ ಓದಿ: ದೇಸಿ ಮಸಾಲಾ ಸ್ವೀಟ್ ಕಾರ್ನ್ ಮನೆಯಲ್ಲೇ ಮಾಡಿ ನೋಡಿ
Advertisement
Advertisement
ಮಾಡುವ ವಿಧಾನ:
* ಮೊದಲಿಗೆ ಸಣ್ಣ ಹಾಗೂ ಎಳೆಯ ಹಾಗಲಕಾಯಿಗಳನ್ನು ಆರಿಸಿ, ಅದರ ಒರಟಾದ ಸಿಪ್ಪೆಯನ್ನು ಪೀಲರ್ ಬಳಸಿ ತೆಗೆಯಿರಿ.
* ಈಗ ಹಾಗಲಕಾಯಿಯ ಮಧ್ಯ ಭಾಗದಲ್ಲಿ ಅರ್ಧದಷ್ಟು ಸೀಳಿ, ಚಮಚದ ಸಹಾಯದಿಂದ ಅದರ ಒಳಗಿನ ಬೀಜಗಳನ್ನು ಹೊರಗೆ ತೆಗೆಯಿರಿ.
* ಈಗ ಹಾಗಲಕಾಯಿಗೆ ಉಪ್ಪು ಹಾಗೂ ಅರಿಶಿನವನ್ನು ಸವರಿ, 30 ನಿಮಿಷ ಪಕ್ಕಕ್ಕಿಡಿ.
* 30 ನಿಮಿಷಗಳ ಬಳಿಕ ಹಾಗಲಕಾಯಿಯನ್ನು ನೀರಿನಿಂದ ತೊಳೆಯಿರಿ. ಇರದಿಂದ ಹಾಗಲಕಾಯಿಯ ಕಹಿ ರುಚಿ ಹೋಗುತ್ತದೆ.
* ಈಗ ಸ್ಟಫಿಂಗ್ ತಯಾರಿಸಲು ಒಂದು ಬಾಣಲೆಯನ್ನು ತೆಗೆದುಕೊಳ್ಳಿ. 2-3 ಟೀಸ್ಪೂನ್ ಎಣ್ಣೆ ಹಾಕಿ ಬಿಸಿ ಆದ ಬಳಿಕ ಈರುಳ್ಳಿ ಹಾಕಿ ಫ್ರೈ ಮಾಡಿ.
* ಈಗ ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ, ಮಧ್ಯಮ ಉರಿಯಲ್ಲಿ 2-3 ನಿಮಿಷ ಹುರಿಯಿರಿ.
* ಬಳಿಕ ಅರಿಶಿನ, ಕೆಂಪು ಮೆಣಸಿನ ಪುಡಿ, ಆಮ್ಚೂರ್ ಪುಡಿ, ಬೆಲ್ಲ, ಉಪ್ಪು, ಹಿಂಗ್, ಕೊತ್ತಂಬರಿ ಪುಡಿ, ಜೀರಿಗೆ ಪುಡಿ ಸೇರಿಸಿ, 1-2 ನಿಮಿಷ ಹುರಿಯಿರಿ.
* ಮಿಶ್ರಣ ಒಣ ಎನಿಸಿದರೆ ಸ್ವಲ್ಪ ನೀರು ಸೇರಿಸಬಹುದು.
* ಈಗ ಒರಟಾಗಿ ಪುಡಿ ಮಾಡಿದ ಹುರಿದ ಕಡಲೆಕಾಯಿ ಹಾಗೂ ಒಣ ತೆಂಗಿನ ತುರಿಯನ್ನು ಮಸಾಲೆ ಮಿಶ್ರಣಕ್ಕೆ ಸೇರಿಸಿ ಮಿಕ್ಸ್ ಮಾಡಿ.
* ಈಗ ಮಸಾಲೆಯನ್ನು ಆರಲು ಬಿಡಿ. ಬಳಿಕ ಹಾಗಲಕಾಯಿಯೊಳಗೆ 1-2 ಟೀಸ್ಪೂನ್‌ನಷ್ಟು ಹೂರಣದಂತೆ ಮಸಾಲೆಯನ್ನು ತುಂಬಿ, ಎಲ್ಲವನ್ನೂ ತಯಾರಿಸಿ ಪಕ್ಕಕ್ಕಿಡಿ.
* ಈಗ ಒಂದು ಬಾಣಲೆಯಲ್ಲಿ 2-3 ಟೀಸ್ಪೂನ್ ಎಣ್ಣೆ ಬಿಸಿ ಮಾಡಿ, ಸ್ಟಫ್ ಮಾಡಿದ ಹಾಗಲಕಾಯಿಗಳನ್ನು ಅದರ ಮೇಲಿರಿಸಿ, ಕಡಿಮೆ ಉರಿಯಲ್ಲಿ 3-4 ನಿಮಿಷ ಮುಚ್ಚಿ ಬೇಯಿಸಿ.
* ಬೇಕೆಂದರೆ ಸ್ವಲ್ಪ ನೀರು ಚುಮುಕಿಸಿ, ತಿರುವಿ ಹಾಕಿ, ಮತ್ತೊಂದು ಬದಿಯಲ್ಲಿ ಮಧ್ಯಮ ಉರಿಯಲ್ಲಿ 3-4 ನಿಮಿಷ ಬೇಯಿಸಿ.
* ಸ್ಟಫ್ ಮಸಾಲೆ ಇನ್ನಷ್ಟು ಉಳಿದಿದ್ದರೆ, ಕೊನೆಯಲ್ಲಿ ಸೇರಿಸಬಹುದು.
* ಇದೀಗ ಸ್ಟಫ್ಡ್ ಹಾಗಲಕಾಯಿ ತಯಾರಾಗಿದ್ದು, ಬಿಸಿಬಿಸಿಯಾಗಿ ಸವಿಯಿರಿ. ಇದನ್ನೂ ಓದಿ: ಸಖತ್ ಟೇಸ್ಟಿ ಆಗಿರುತ್ತೆ ಚಿಕನ್ ಸ್ಟೀಮ್ಡ್ ಮೊಮೊಸ್ – ಒಮ್ಮೆ ಮಾಡಿ ನೋಡಿ