ಮೈಸೂರು: ಬಂಡೀಪುರದ ಪ್ರಿನ್ಸ್ ಹುಲಿ ಸಾವನ್ನು ಮೈಸೂರಿನ ಜ್ಯೂ. ಪ್ರಿನ್ಸ್ ಮರೆಸುತ್ತಿದ್ದು, ನಾಗರಹೊಳೆಯಲ್ಲಿ ಪ್ರವಾಸಿಗರಿಗೆ ಜ್ಯೂ. ಪ್ರಿನ್ಸ್ ಫುಲ್ ಮನರಂಜನೆ ನೀಡುತ್ತಿದ್ದಾನೆ.
ಬಂಡೀಪುರದಲ್ಲಿ 13 ವರ್ಷದಿಂದ ಪ್ರಿನ್ಸ್ ಹವಾ ಜೋರಾಗಿತ್ತು. ಆದರೆ ಇದೀಗಾ ಜ್ಯೂ. ಪ್ರಿನ್ಸ್ ಹವಾ ಶುರುವಾಗಿದೆ. ಕಳೆದ ಒಂದೂವರೆ ವರ್ಷದಿಂದ ಜ್ಯೂ. ಪ್ರಿನ್ಸ್ ನಾಗರಹೊಳೆಯಲ್ಲಿ ಫೋಟೋಗೆ ಸಖತ್ ಪೋಸ್ ಕೊಡುತ್ತಿದ್ದಾನೆ.
Advertisement
Advertisement
ಪ್ರಾಣಿ ಪ್ರಿಯರಿಗೆ ಇಷ್ಟವಾಗಿದ್ದು, ಜ್ಯೂ. ಪ್ರಿನ್ಸ್ ಕಾಣಲೆಂದೆ ನಿತ್ಯವೂ ನೂರಾರು ಸಂಖ್ಯೆಯಲ್ಲಿ ಪ್ರವಾಸಿಗರು ನಾಗರಹೊಳೆಗೆ ಆಗಮಿಸುತ್ತಿದ್ದಾರೆ. ಜ್ಯೂ. ಪ್ರಿನ್ಸ್ ನಿಂದ ನಾಗರಹೊಳೆಯ ಸಫಾರಿಗೆ ಹೊಸ ಕಳೆ ಬಂದಿದ್ದು, ಬಂಡೀಪುರದಿಂದ ನಾಗರಹೊಳೆಯತ್ತ ಪ್ರವಾಸಿಗರ ತಮ್ಮ ಚಿತ್ತ ಹರಿಸಿದ್ದಾರೆ.
Advertisement
ಪ್ರಿನ್ಸ್ ನಿಗೂಢವಾಗಿ ಬಂಡೀಪುರ ಅಭಯಾರಣ್ಯದಲ್ಲಿ ಮೃತಪಟ್ಟಿತ್ತು. ಮೊದಲು ವಿಷಾಹಾರದಿಂದ ಹುಲಿ ಸಾವನ್ನಪ್ಪಿದ್ದು ಎಂದು ಅರಣ್ಯ ಇಲಾಖೆ ತಿಳಿಸಿತ್ತು. ಬಳಿಕ ಪ್ರಿನ್ಸ್ ಹುಲಿ ಸಿಡಿಮದ್ದಿನಿಂದ ಮೃತಪಟ್ಟಿತ್ತು ಎನ್ನುವ ವಿಚಾರ ತಿಳಿದುಬಂದಿತ್ತು. ಕಾಡಿನ ಸುತ್ತಮುತ್ತಲಿನ ಜನ ಸಾಮಾನ್ಯವಾಗಿ ಹಂದಿ ಹಿಡಿಯಲು ಕೋಳಿಯ ಕೊರಳಿಗೆ ಸಿಡಿಮದ್ದು ಕಟ್ಟಿರುತ್ತಾರೆ. ಈ ಕೋಳಿಯನ್ನು ತಿನ್ನಲು ಹೋದಾಗ ಪ್ರಿನ್ಸ್ ಬಾಯಲ್ಲಿ ಸಿಡಿಮದ್ದು ಸ್ಫೋಟವಾಗಿ ಸ್ಥಳದಲ್ಲೇ ಮೃತಪಟ್ಟಿತ್ತು.