ಟಾಲಿವುಡ್ ಸ್ಟಾರ್‌ಗೆ ಜೊತೆಯಾಗ್ತಾರಾ ಸಮಂತಾ, ರಶ್ಮಿಕಾ?

Public TV
1 Min Read
rashmika j.ntr samantha

ಹೈದರಾಬಾದ್: ಟಾಲಿವುಡ್ ಸ್ಟಾರ್ ನಟ ಜೂನಿಯರ್ ಎನ್‍ಟಿಆರ್ ಸದ್ಯ ಆರ್‌ಆರ್‌ಆರ್ ಸಿನಿಮಾದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಇತ್ತ ಸಮಂತಾ ಜಾನು ಸಿನಿಮಾ ನಂತರ ಫ್ರೀಯಾಗಿದ್ದಾರೆ. ಇದರ ನಡುವೆಯೇ ಜೂ.ಎನ್‍ಟಿಆರ್ ಮತ್ತೊಂದು ಸಿನಿಮಾಗೆ ಸಹಿ ಹಾಕಿದ್ದಾರೆ ಎಂಬ ಸುದ್ದಿ ಭಾರೀ ಚರ್ಚೆಯಾಗುತ್ತಿದ್ದು, ಇದಕ್ಕೆ ಹಿರೋಯಿನ್ ಯಾರೆಂಬ ಮಾತುಗಳು ಸಹ ಹರಿದಾಡುತ್ತಿವೆ. ಇದೆಲ್ಲದರ ಮಧ್ಯೆ ಟಾಲಿವುಡ್ ಕ್ಯೂಟ್ ಬೆಡಗಿ ಸಮಂತಾ ಅಕ್ಕಿನೇನಿ ಜೂನಿಯರ್ ಎನ್‍ಟಿಆರ್ ಜೊತೆ ರೊಮ್ಯಾನ್ಸ್ ಮಾಡುವುದು ಬಹುತೇಕ ಖಚಿತ ಎನ್ನಲಾಗಿದೆ.

rashmika mandanna 84471940 477711796252688 746625124559910300 n

ಜೂ.ಎನ್‍ಟಿಆರ್ ಮುಂದಿನ ಸಿನಿಮಾಗೆ ನಿರ್ದೇಶಕ ತ್ರಿವಿಕ್ರಮ್ ಶ್ರೀನಿವಾಸ್ ಆ್ಯಕ್ಷನ್ ಕಟ್ ಹೇಳುತ್ತಿದ್ದು, ಇನ್ನೂ ಟೈಟಲ್ ಫಿಕ್ಸ್ ಆಗದ ಚಿತ್ರಕ್ಕೆ ಸದ್ಯ ‘ಎನ್‍ಟಿಆರ್ 30’ ಎಂದು ಹೆಸರಿಡಲಾಗಿದೆ. ಮೇ ತಿಂಗಳಿಂದ ಚಿತ್ರದ ಶೂಟಿಂಗ್ ಪ್ರಾರಂಭವಾಗಲಿದ್ದು, 2021ರ ಬೇಸಿಗೆ ವೇಳೆಗೆ ಚಿತ್ರ ತೆರೆಗೆ ಬರಲಿದೆ ಎನ್ನಲಾಗಿದೆ. ಈ ಚಿತ್ರಕ್ಕೆ ಇಬ್ಬರು ನಾಯಕಿರು ಇರಲಿದ್ದು, ರಶ್ಮಿಕಾ ಮಂದಣ್ಣ ಈಗಾಗಲೇ ಫಿಕ್ಸ್ ಆಗಿದ್ದಾರೆ.

ಇನ್ನೊಬ್ಬ ನಾಯಕಿಯ ಪಾತ್ರದಲ್ಲಿ ನಟಿ ಪೂಜಾ ಹೆಗ್ಡೆ ಕಾಣಿಸಿಕೊಳ್ಳಲಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿತ್ತು. ಆದರೀಗ ಸಮಂತಾ ಹೆಸರು ಕೇಳಿ ಬರುತ್ತಿದೆ. ಹಾಗಾಗಿ ರಶ್ಮಿಕಾ ಮಂದಣ್ಣ ಮತ್ತು ಸಮಂತಾ ಇಬ್ಬರೂ ಎನ್‍ಟಿಆರ್ ಜೊತೆ ತೆರೆ ಹಂಚಿಕೊಳ್ಳಲಿದ್ದಾರೆ ಎನ್ನಲಾಗಿದೆ. ಈ ಸುದ್ದಿ ನಿಜವೇ ಆದಲ್ಲಿ ಎನ್‍ಟಿಆರ್ ಹಾಗೂ ಸಮಂತಾ ತೆರೆ ಹಂಚಿಕೊಳ್ಳುತ್ತಿರುವ ಐದನೇ ಚಿತ್ರ ಇದಾಗಲಿದೆ. ಈಗಾಗಲೇ ಬೃಂದಾವನ, ರಾಮಯ್ಯ ವಸ್ತಾವಯ್ಯ, ರಾಭಸ, ಹಾಗೂ ಜನತಾ ಗ್ಯಾರೇಜ್‍ನಲ್ಲಿ ಈ ಜೋಡಿ ನಟಿಸಿದೆ.

Samantha Ruth Prabhu 2

ಇತ್ತೀಚೆಗೆ ತಮಿಳಿನ 96 ಸಿನಿಮಾದ ರೀಮೇಕ್ ಜಾನು ಚಿತ್ರದ ಮೂಲಕ ಸಮಂತಾ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಚಿತ್ರ ಅಷ್ಟೇನು ಯಶಸ್ಸು ಕಾಣಲಿಲ್ಲ. ಇದೀಗ ಜೂ.ಎನ್‍ಟಿಆರ್ ಜೊತೆ ಮೋಡಿ ಮಾಡಲು ಮತ್ತೆ ಸಿದ್ಧವಾಗಿದ್ದಾರೆ ಎಂದು ವರದಿಯಾಗಿದೆ.

Share This Article
Leave a Comment

Leave a Reply

Your email address will not be published. Required fields are marked *