ಕಲಬುರಗಿ: 2023ರ ವಿಧಾನಸಭೆ ಚುನಾವಣೆ (Vidhanasabha Election 2023) ಹತ್ತಿರ ಆಗ್ತಿದ್ದಂಗೆ ಕಲಬುರಗಿಯಲ್ಲಿ ರಾಜಕೀಯ ಮೇಲಾಟಗಳು ಶುರುವಾಗಿವೆ. ರಾಜಕೀಯ ನಾಯಕರು, ಮುಖಂಡರು ತಮ್ಮ ರಾಜಕೀಯ ಭವಿಷ್ಯದ ಲೆಕ್ಕಾಚಾರ ಹಾಕಿಕೊಂಡು ಜಂಪಿಂಗ್ ಪಾಲಿಟಿಕ್ಸ್ ಶುರು ಮಾಡಿದ್ದಾರೆ.
Advertisement
ಬಿಎಸ್‍ವೈ (BS Yediyurappa) ನೇತೃತ್ವದ ಬಿಜೆಪಿ ಸರ್ಕಾರದಲ್ಲಿ ಪಶುಸಂಗೋಪನೆ ಸಚಿವರಾಗಿದ್ದ ರೇವುನಾಯಕ್ ಬೆಳಮಗಿ, ಬಿಜೆಪಿ ಕೈಕೊಟ್ಟಿರೋದ್ರಿಂದ ಜೆಡಿಎಸ್ (JDS) ತೆನೆ ಹೊತ್ತಿದ್ದರು. ಇದೀಗ ಜೆಡಿಎಸ್ ನಲ್ಲಿ ಭವಿಷ್ಯ ಇಲ್ಲ ಅಂತಾ ಅರಿತು ರೇವು ನಾಯಕ್ ಬೆಳಮಗಿ (Revu Naik Belamgi) ಕಾಂಗ್ರೆಸ್ (Congress) ನತ್ತ ಮುಖ ಮಾಡಿ ಕೈವಶ ಆಗಿದ್ದಾರೆ. ಇದನ್ನೂ ಓದಿ: ಪ್ರಾದೇಶಿಕ ಪಕ್ಷ ಜೆಡಿಎಸ್ ಅಧಿಕಾರಕ್ಕೆ ಬಂದ್ರೆ ಕೆಜಿಎಫ್ ಗತ ವೈಭವ: ಹೆಚ್‌ಡಿಕೆ ಘೋಷಣೆ
Advertisement
Advertisement
ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ ಖಂಡ್ರೆ (Eshwar Khandre), ಶಾಸಕ ಪ್ರಿಯಾಂಕ್ ಖರ್ಗೆ (Priyank Kharge) ನೇತೃತ್ವದಲ್ಲಿ ಕಲಬುರಗಿ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಬೆಳಮಗಿ ಕಾಂಗ್ರೆಸ್ ಪಕ್ಷ ಸೇರ್ಪಡೆಯಾಗಿದ್ದಾರೆ. ಈ ವೇಳೆ ಮಾತನಾಡಿದ ರೇವು ನಾಯಕ್ ಬೆಳಮಗಿ, ಟಿಕೆಟ್ ಸಿಗುವ ಭರವಸೆ ವ್ಯಕ್ತಪಡಿಸಿದ್ರು. ಜೆಡಿಎಸ್ ಮತ್ತು ಬಿಜೆಪಿಯ ಹಲವು ಮುಖಂಡರು ಕೈಗೆ ಜೈ ಎಂದಿದ್ದಾರೆ.
Advertisement
ಚಿಂಚೋಳಿ ಕ್ಷೇತ್ರದ ಬಿಜೆಪಿ ಮುಖಂಡ ಬಾಬುರಾವ್ ಪಾಟೀಲ್ ಚಿಂಚೋಳಿ ಕಮಲ ಬಿಸಾಕಿ ಕಾಂಗ್ರೆಸ್ ಸೇರ್ಪಡೆ ಆಗಿದ್ದಾರೆ. ಅಲ್ಲದೆ ಎಎಮ್ ಐಎಮ್ ಪಕ್ಷದ ಮುಖಂಡ ಮೋದಿನ್ ಪಟೇಲ್ ಸೇರಿದಂತೆ ಬಿಜೆಪಿ ಹಾಗೂ ಜೆಡಿಎಸ್ ನ ಹಲವರು ಕಾಂಗ್ರೆಸ್ ಸೇರ್ಪಡೆಯಾಗಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಯಾವತ್ತು ಕೂಡ ಸತ್ಯ ಒಪ್ಪಿಕೊಳ್ಳಲ್ಲ : ಆರಗ ಜ್ಞಾನೇಂದ್ರ