ಬೆಂಗಳೂರು: ಸರ್ವರಿಗೂ ಸಮಾನ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ (Judiciary) ಪಾತ್ರ ದೊಡ್ಡದು ಎಂದು ಹೈಕೋರ್ಟ್ (High Cout) ಮುಖ್ಯ ನ್ಯಾಯಮೂರ್ತಿ ಎನ್.ವಿ.ಅಂಜಾರಿಯಾ (NV Anjaria) ತಿಳಿಸಿದರು.
ಕರ್ನಾಟಕ ಹೈಕೋರ್ಟ್‌ನಲ್ಲಿ (Karnataka High Court) ಹಮ್ಮಿಕೊಳ್ಳಲಾದ 78ನೇ ಸ್ವಾತಂತ್ರೋತ್ಸವದ (Independence Day) ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ಇದನ್ನೂ ಓದಿ: 8 ದಿನದ ಬಳಿಕ ಕಾಳಿ ನದಿಯಿಂದ ದಡ ಸೇರಿದ ಲಾರಿ – ಹೇಗಿತ್ತು ಕಾರ್ಯಾಚರಣೆ?
Advertisement
Advertisement
ದೇಶಕ್ಕಾಗಿ ಹೋರಾಡಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನವನ್ನು ಇಂದು ನಾವು ಸ್ಮರಿಸಬೇಕು. ಹಾಗೆಯೇ ದೊರೆತ ಸ್ವಾತಂತ್ರ್ಯ ನಮ್ಮ ಮೇಲಿನ ಜವಾಬ್ದಾರಿ ಹೆಚ್ಚಿಸಿದೆ. ಜನರಿಗೆ ಸಾಮಾಜಿಕ ನ್ಯಾಯ ದೊರಕಿಸುವಲ್ಲಿ ನ್ಯಾಯಾಂಗದ ಪಾತ್ರ ಮಹತ್ವದ್ದು. ಇಂದು ತ್ವರಿತವಾಗಿ ಜನರಿಗೆ ನ್ಯಾಯ ಕೊಡಿಸುವಲ್ಲಿ ಲೋಕ್ ಅದಾಲತ್, ಮಧ್ಯಸ್ಥಿಕೆ ಮುಂತಾದ ನ್ಯಾಯಾಂಗದ ಕಾರ್ಯಕ್ರಮಗಳು ಯಶಸ್ಸುಗಳಿಸಿದೆ. ತಂತ್ರಜ್ಞಾನದ ಕ್ರಾಂತಿಯಿಂದಾಗಿ ಇ- ಸೇವಾ ಕೇಂದ್ರ ಮತ್ತು ವರ್ಚುವಲ್ ಕೋರ್ಟ್ ಗಳನ್ನು ಸ್ಥಾಪಿಸಲಾಗಿದ್ದು, ಇವು ಹೆಚ್ಚು ಜನಸ್ನೇಹಿಯಾಗಿವೆ. ಮುಂದುವರೆದು ಕಾಗದ ಮುಕ್ತ ನ್ಯಾಯಾಲಯ ಮಾಡುವ ಗುರಿ ಹೊಂದಲಾಗಿದೆ ಎಂದು ಹೇಳಿದರು. ಇದನ್ನೂ ಓದಿ: ಸ್ವಾತಂತ್ರ್ಯೋತ್ಸವದಂದು ರಾಹುಲ್‍ಗೆ ಸರ್ಕಾರದಿಂದ ಅವಮಾನ – ಕೇಂದ್ರದ ವಿರುದ್ಧ ಕಾಂಗ್ರೆಸ್ ಕಿಡಿ
Advertisement
ರಾಜ್ಯದಲ್ಲಿ ನಡೆಸಲಾಗುತ್ತಿರುವ ಲೋಕ್ ಅದಾಲತ್‌ನಲ್ಲಿ ಅತಿ ಹೆಚ್ಚು ಪ್ರಕರಣಗಳು ಇತ್ಯರ್ಥಗೊಂಡಿದ್ದು, ನ್ಯಾಯಾಲಯದ ಸಮಯ ಉಳಿತಾಯದ ಜೊತೆಗೆ ತ್ವರಿತವಾಗಿ ಜನರಿಗೆ ನ್ಯಾಯ ದೊರಕಿಸಿದಂತಾಗಿದೆ. ನ್ಯಾಯಾಲಯದಲ್ಲಿ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಕಾಲಕಾಲಕ್ಕೆ ಮುಂಬಡ್ತಿ ನೀಡಲಾಗುತ್ತಿದೆ. ಕರ್ನಾಟಕ ನ್ಯಾಯಾಂಗ ಅಕಾಡೆಮಿ ಹಲವು ಕಾರ್ಯಕ್ರಮ ತರಬೇತಿಗಳನ್ನು ಆಯೋಜಿಸುತ್ತಿದೆ. ನಗರದ ಕಾವೇರಿ ಭವನದಲ್ಲಿ ಕರ್ನಾಟಕ ಉಚ್ಚನ್ಯಾಯಾಲಯಕ್ಕೆ ಹೆಚ್ಚುವರಿ ಕಾರ್ಯಚಟುವಟಿಕೆಗಳಿಗೆ ಅನುಕೂಲವಾಗುವಂತೆ ಸ್ಥಳಾವಕಾಶ ದೊರೆಯುತ್ತಿದೆ. ರಾಷ್ಟ್ರ ನಿರ್ಮಾಣದಲ್ಲಿ ನ್ಯಾಯಾಂಗದ ಪಾತ್ರ ಹಿರಿದಾಗಿದ್ದು, ಆ ನಿಟ್ಟಿನಲ್ಲಿ ಪರಸ್ಪರ ನಂಬಿಕೆ, ಹೊಸ ಆಲೋಚನೆ ಹಾಗೂ ದೂರದೃಷ್ಟಿಕೋನದಿಂದ ನ್ಯಾಯಾಂಗ ಮುಂದೆ ಸಾಗಬೇಕಿದೆ ಎಂದರು.
Advertisement
ಸಮಾರಂಭದಲ್ಲಿ ಉಚ್ಚನ್ಯಾಯಾಲಯದ ಇತರ ನ್ಯಾಯಮೂರ್ತಿಗಳು, ಹೆಚ್ಚುವರಿ ಸಾಲಿಸಿಟರ್ ಜನರಲ್, ಅಡ್ವಕೋಟ್ ಜನರಲ್, ವಕೀಲರ ಸಂಘದ ಅಧ್ಯಕ್ಷರು, ಹಿರಿಯ ವಕೀಲರು ಸೇರಿದಂತೆ ಇನ್ನಿತರ ಗಣ್ಯರು ಉಪಸ್ಥಿತರಿದ್ದರು.