ಬೆಂಗಳೂರು: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ನಟ ದರ್ಶನ್ (Darshan) ಮತ್ತು ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ಮತ್ತೆ ವಿಸ್ತರಿಸಲಾಗಿದೆ. 14 ದಿನಗಳವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ 24ನೇ ಎಸಿಎಂಎಂ ಕೋರ್ಟ್ ಆದೇಶ ಹೊರಡಿಸಿದೆ.
ದರ್ಶನ್, ಪವಿತ್ರಗೌಡ ಸೇರಿದಂತೆ ಎಲ್ಲಾ ಆರೋಪಿಗಳನ್ನ ಮಂಗಳವಾರ ನ್ಯಾಯಾಧೀಶರ ಮುಂದೆ ಹಾಜರುಪಡಿಸಲಾಗಿತ್ತು. ಈ ವೇಳೆ ತನಿಖಾಧಿಕಾರಿಗಳು ನ್ಯಾಯಾಧೀಶರಿಗೆ ಟೆಕ್ನಿಕಲ್ ಸಾಕ್ಷ್ಯಗಳನ್ನು ಸಲ್ಲಿಸಿದರು. ಹಾರ್ಡ್ ಡಿಸ್ಕ್‌ನಲ್ಲಿ ಟೆಕ್ನಿಕಲ್ ಎವಿಡೆನ್ಸನ್ನು ನ್ಯಾಯಾಧೀಶರಿಗೆ ಸಲ್ಲಿಕೆ ಮಾಡಿದರು. ಇದನ್ನೂ ಓದಿ: ಕೊಲೆ ಆರೋಪಿ ದರ್ಶನ್ ಸೆಲ್‌ಗೆ ಬರಲಿದೆ 32 ಇಂಚಿನ ಟಿವಿ
Advertisement
Advertisement
ದರ್ಶನ್‌ಗೆ ಬ್ಯಾಕ್‌ಪೇನ್ ಇದೆ. ಚೇರ್ ಕೊಡುವಂತೆ ಕೇಳಿದ್ದು, ಚೇರ್ ಕೊಟ್ಟಿಲ್ಲ ಅಂತಾ ದರ್ಶನ್ ಪರ ವಕೀಲರು, ನ್ಯಾಯಾಧೀಶರ ಗಮನಕ್ಕೆ ತಂದರು. ಅಲ್ಲದೇ ಕುಟುಂಬ, ಸ್ನೇಹಿತರ ಭೇಟಿಗೆ ಅವಕಾಶ ಕೊಡುತ್ತಿಲ್ಲ ಎಂದು ಸಹ ದೂರಿದರು. ಭೇಟಿಗೆ ಸಮಯ ಕೊಡಬೇಕು ಎಂದು ನ್ಯಾಯಾಧೀಶರು ಆದೇಶಿಸಿದರು.
Advertisement
ಯಾವ ಆಧಾರದಲ್ಲಿ ಕಾನೂನು ಮಾಡ್ಕೊಂಡ್ರು ಇವರು? ಬೆಳಗಾವಿ ಜೈಲು ನಿಯಮಗಳ ಪ್ರಕಾರ ರೂಲ್ಸ್ ಮಾಡಿಕೊಂಡಿದ್ದಾರೆ. ಕೋರ್ಟ್ ಪರ್ಮಿಷನ್ ಇಲ್ದೆ ಹೇಗೆ ನಿಯಮ ಮಾಡ್ಕೊಂಡ್ರು ಇವ್ರು? ಸ್ನೇಹಿತರು, ಕುಟುಂಬದವರು ಭೇಟಿಯಾಗೋದು ತಪ್ಪಾ? ಯಾರನ್ನೂ ಬಿಡ್ತಿಲ್ಲ ಅವರು. ಯಾವ ಪ್ರೊಸೀಜರ್ ಫಾಲೋ ಮಾಡ್ತಿದ್ದಾರೆ ಅವ್ರು? ದರ್ಶನ್ ಏನು ಕೋಕಾ ಅಪರಾಧಿನಾ? ಅವರು ಕೊಲೆ ಆರೋಪಿ ಅಷ್ಟೆ. ಕುಳಿತುಕೊಳ್ಳೋಕೆ ಒಂದು ಚೇರ್ ಕೊಡಲ್ಲ ಅಂದ್ರೆ ಹೇಗೆ ಎಂದು ದರ್ಶನ್ ಪರ ವಕೀಲರು ವಾದಿಸಿದರು. ಅಗತ್ಯ ವಸ್ತುಗಳನ್ನ ನಿಯಮದಡಿಯಲ್ಲಿ ನೀಡುವಂತೆ ಜಡ್ಜ್, ಬಳ್ಳಾರಿ ಜೈಲಾಧಿಕಾರಿಗೆ ಆದೇಶ ನೀಡಿದರು. ಇದನ್ನೂ ಓದಿ: ಕಾನೂನು ಹೋರಾಟಕ್ಕೆ ತೊಡಕಾಗುವ ಆತಂಕ – ಜೈಲಲ್ಲಿ ಕಿರಿಕ್ ಮಾಡದಂತೆ ದರ್ಶನ್‍ಗೆ ಲಾಯರ್ ಪತ್ರ?
Advertisement
ಸಿಎಸ್ ಎಫ್‌ಎಲ್ ರಿಪೋರ್ಟ್ ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇವೆ. ನೀವು ಅನುಮತಿ ಕೊಟ್ರೆ 17 ಆರೋಪಿಗಳಿಗೂ ಸೀಲ್ ಓಪನ್ ಮಾಡಿ ಜೆರಾಕ್ಸ್ ನೀಡಿ ಕೊಡ್ತೀವಿ. ಆರ್ಡರ್ ಪಾಸ್ ಮಾಡಿಕೊಟ್ರೆ ಜೆರಾಕ್ಸ್ ಮಾಡಿ ಕೊಡ್ತೀವಿ ಎಂದ ಪಬ್ಲಿಕ್ ಪ್ರಾಸಿಕ್ಯೂಟರ್ ವಾದಿಸಿದರು.
ಎಷ್ಟು ದಿನದಲ್ಲಿ ಕೊಡ್ತೀರಾ ಜಡ್ಜ್ ಕೇಳಿದರು. ಒಂದು ವಾರದಲ್ಲಿ ಕೊಡ್ತೀವಿ ಎಂದು ತನಿಖಾಧಿಕಾರಿ ಪ್ರತ್ಯುತ್ತರ ನೀಡಿದರು. ಸೆ.30 ರ ವರಗೆ ದರ್ಶನ್ & ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಅವಧಿ ವಿಸ್ತರಿಸಿ ಕೋರ್ಟ್ ಆದೇಶಿಸಿತು. ಮುಂದಿನ ವಿಚಾರಣೆಯ ಒಳಗೆ ಸಿಎಸ್‌ಎಫ್‌ಎಲ್ ಜೆರಾಕ್ಸ್ ಪ್ರತಿ ನೀಡುವಂತೆ ನ್ಯಾಯಾಧೀಶರಿಂದ ಇದೇ ವೇಳೆ ಆದೇಶಿಸಿದರು.