ಉಡುಪಿ: ಟಾಲಿವುಡ್ ಸ್ಟಾರ್ ಜೂನಿಯರ್ ಎನ್‌ಟಿಆರ್ (JrNTR) ರಾವಳಿಯ ಸಸ್ಯ ಕಾಶಿ..ಬೆಟ್ಟ ಗುಡ್ಡಗಳು ನದಿ ದೊರೆ ಸಮುದ್ರ ದೇಗುಲಗಳಿಗೆ ಮನಸುತಿದ್ದಾರೆ. ಎರಡು ದಿನಗಳ ಕಾಲ ಉಡುಪಿಯ (Udupi) ದೇವಸ್ಥಾನಗಳಿಗೆ ಭೇಟಿಕೊಟ್ಟು ಗೆಳೆಯರ ಜೊತೆ ಸುತ್ತಾಡುತ್ತಿದ್ದಾರೆ.
ಉಡುಪಿ ಜಿಲ್ಲೆಯಲ್ಲಿ ಧಾರ್ಮಿಕ ಪ್ರವಾಸದಲ್ಲಿರುವ ಜೂನಿಯರ್ ಎನ್‌ಟಿಆರ್, ಕೃಷ್ಣಮಠ, ಕೊಲ್ಲೂರು ಮೂಕಾಂಬಿಕಾ ದೇವಸ್ಥಾನಕ್ಕೆ (Kollur mookambika Temple) ಭೇಟಿಕೊಟ್ಟು ಪೂಜೆ ಸಲ್ಲಿಸಿದ್ದರು. ಇದೀಗ ಅಮ್ಮನ ಆಸೆ ತೀರಿಸಲು ಕುಂದಾಪುರದ ಕೆರಾಡಿ ಗ್ರಾಮದ ಮೂಡುಗಲ್ಲು ಕೇಶವನಾಥೇಶ್ವರ ಗುಹಾಂತರ ದೇವಸ್ಥಾನಕ್ಕೆ (Mudugallu Keshavanatheshwara Temple) ಭೇಟಿ ನೀಡಿದ್ದಾರೆ.
Advertisement
Advertisement
ಕಾಡು, ಬಂಡೆ ನಡುವೆ ಇರುವ ಪ್ರಾಕೃತಿಕ ರಮಣೀಯತೆಗೆ ತಾರಕ್ ರಾಮ್ ಮಾರುಹೋಗಿದ್ದಾರೆ. ನಟ ರಿಷಬ್ ಶೆಟ್ಟಿ ಊರಾಗಿರುವ ಕೆರಾಡಿಗೆ ಭೇಟಿಯಾಗಿದ್ದರು. ನಿರ್ದೇಶಕ ಪ್ರಶಾಂತ್ ನೀಲ್ ಕುಟುಂಬ ಕೂಡಾ ಈ ವೇಳೆ ಜೊತೆಗಿದ್ದರು. ರಿಷಬ್ ಶೆಟ್ಟಿ ಊರಾಗಿರುವ ಕಿರಾಡಿಗೆ ಜೂ. ಎನ್‍ಟಿಆರ್ ಪ್ರಶಾಂತ್ ನೀಲ್ ಕುಟುಂಬವನ್ನ ರಿಶಬ್ ಶೆಟ್ಟಿ ಬರಮಾಡಿದ್ದರು. ತಮ್ಮ ಊರನ್ನು ಸುತ್ತಿಸುತ್ತಾ ಕೇಶವನಾಥೇಶ್ವರ ದೇವಸ್ಥಾನಕ್ಕೆ ಕರೆದುಕೊಂಡು ಹೋಗಿದ್ದಾರೆ.
Advertisement
ಬೆಟ್ಟದ ಕೆಳಗೆ, ಕಾಡಿನ ನಡುವೆ ಇರುವ ಈ ವಿಶಿಷ್ಟ ದೇವಸ್ಥಾನ ಸುತ್ತಲೂ ಬಂಡೆಯೇ ಆವರಿಸಿಕೊಂಡಿದೆ. ಶಿವಲಿಂಗದ ಸುತ್ತ ಭಾರೀ ಗಾತ್ರದ ಬಂಡೆ ಆವರಿಸಿಕೊಂಡಿದೆ. ಬಂಡೆಯ ಬುಡದಲ್ಲಿ ಗುಹೆಯಿದೆ. ಗುಹೆಯ ಒಳಗೆ ಸುಮಾರು 30 ಅಡಿಯಷ್ಟು ವಿಶಾಲವಾದ ಜಾಗವಿದೆ. ಪ್ರಾಂಗಣದ ಮಾದರಿಯ ಜಾಗದಲ್ಲಿ ನೀರು ಹರಡಿಕೊಂಡಿರುತ್ತದೆ. ದೇಗುಲಕ್ಕೆ ಭೇಟಿಕೊಡುವ ಭಕ್ತರು ನೀರಿನಲ್ಲಿ ನಿಂತು ದೇವರಿಗೆ ಕೈ ಮುಗಿಯುತ್ತಾರೆ.
Advertisement
ಮಳೆಗಾಲದಲ್ಲಂತೂ ಬಹಳ ತಂಪಾದ ವಾತಾವರಣ ಅನುಭವವಾಗುತ್ತದೆ. ಒಳಗೆ ಯಾವುದೇ ಬೆಳಕಿನ ವ್ಯವಸ್ಥೆಗಳು ಇರುವುದಿಲ್ಲ. ಮೂಡುಗಲ್ಲು ಕೇಶವನಾಥೇಶ್ವರ ಲಿಂಗಕ್ಕೆ ಬೆಳಗುವ ದೀಪದಲ್ಲಿ ದೇವರ ದರ್ಶನವಾಗುತ್ತದೆ. ಸ್ಟಾರ್ ನಟರು ಈ ವಿಶಿಷ್ಟ ಅನುಭವವನ್ನು ಪಡೆದು ಖುಷಿಪಟ್ಟಿದ್ದಾರೆ.