ಜೂ.ಎನ್‌ಟಿಆರ್ ಹಾಗೂ ಜಾಹ್ನವಿ ಕಪೂರ್ ಮುಖ್ಯ ಪಾತ್ರದಲ್ಲಿ ನಟಿಸಿದ ಸಿನಿಮಾ ದೇವರ ಪಾರ್ಟ್-1 ಕಳೆದ ವರ್ಷ ಅಂದರೆ 2024ರ ಸೆಪ್ಟಂಬರ್ 27ರಂದು ತೆರೆಕಂಡಿತ್ತು. ದೇವರ ಪಾರ್ಟ್-1 ಸಿನಿಮಾ ಬಾಕ್ಸಾಫೀಸ್‌ನಲ್ಲಿ ಉತ್ತಮ ಗಳಿಕೆಯನ್ನ ಮಾಡದೇ ಸೋತು ಸುಣ್ಣವಾಯಿತು. ಆರ್‌ಆರ್‌ಆರ್ ಸಿನಿಮಾದ ನಂತರ ಬಂದ ದೇವರ ಸಿನಿಮಾ ಮೇಲೆ ಅವರ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆಯನ್ನ ಇಟ್ಟುಕೊಂಡಿದ್ದರು. ನಿರೀಕ್ಷೆ ಹುಸಿಯಾಗಿ ಬೇಸರಪಟ್ಟುಕೊಂಡಿದ್ದರು.
ಅಂದಹಾಗೆ ದೇವರ ಪಾರ್ಟ್-1 ಸಿನಿಮಾ ತೆರೆಗೂ ಮುನ್ನವೇ ಪಾರ್ಟ್-2 ಬಗ್ಗೆ ಹಿಂಟ್ ಕೊಟ್ಟಿದ್ದ ಚಿತ್ರತಂಡ, ಚಿತ್ರ ಬಿಡುಗಡೆಯಾಗಿ ಒಂದು ವರ್ಷ ಕಳೆದರೂ ಆ ಬಗ್ಗೆ ಮತ್ತೆ ನೆನಪಿಸಿಕೊಂಡಿಲ್ಲ. ಸಿನಿಮಾ ಮಾಡಿದ ನಿರ್ಮಾಪಕ ಸೇಫ್ ಆಗಿರೋದನ್ನ ಬಿಟ್ಟರೇ ಸಿನಿಮಾದಿಂದ ಬಂಡವಾಳ ಹೂಡಿದ ನಿರ್ಮಾಪಕನಿಗೆ ಲಾಭವೇನು ಆಗಿಲ್ಲ. ಹೀಗಾಗಿ ದೇವರ ಪಾರ್ಟ್-1 ಸೋಲಿನಿಂದ ಪಾರ್ಟ್-2 ಸಿನಿಮಾ ಮಾಡಲು ಮನಸ್ಸು ಮಾಡಿಲ್ಲ ನಿರ್ಮಾಣ ಸಂಸ್ಥೆ.ಇದನ್ನೂ ಓದಿ: ಪವನ್ ಕಲ್ಯಾಣ್ ಸಿನಿಮಾಗಳು ಸಾಲು ಸಾಲು ಸೋಲು – ಓಜಿ ಪಾರ್ಟ್-2ಗೆ ಸ್ಟಾರ್ಟ್ ಆಗಲ್ವಾ?
ಕೊರಟಾಲ ಶಿವ ಹಾಗೂ ಜೂ.ಎನ್‌ಟಿಆರ್ ಕಾಂಬಿನೇಷನ್‌ನಲ್ಲಿ ಮೂಡಿಬಂದಿದ್ದ ಈ ಸಿನಿಮಾ ಟಾಲಿವುಡ್‌ನಲ್ಲಿ ಸಖತ್ ಕ್ರೇಜ್ ಕ್ರಿಯೇಟ್ ಮಾಡಿತ್ತು. ಆದರೆ ಅಭಿಮಾನಿಗಳ ಮನಸ್ಸಿಗೆ ಘಾಸಿ ಮಾಡಿದೆ. ಹೀಗಾಗಿ ಈ ಸಿನಿಮಾದ ಪಾರ್ಟ್-2ಗೆ ಹಣ ಹಾಕೋಕೆ ತಯಾರಿಲ್ಲ. ಮೊದಲ ಭಾಗವೇ ಫ್ಲಾಪ್ ಪಾರ್ಟ್-2 ಹೇಗಿರುತ್ತೋ ಅನ್ನೋ ಭಾವನೆ ಅಭಿಮಾನಿಗಳಲ್ಲಿ ಮೂಡೋದು ಸಹಜ. ಎಷ್ಟೇ ಒಳ್ಳೆ ಸಿನಿಮಾ ಮಾಡಿದರೂ ಪ್ರೇಕ್ಷರನ್ನ ಕರೆತರೋದು ಕಷ್ಟವಾಗುತ್ತೆ ಈ ನಿಟ್ಟಿನಲ್ಲಿ ಆ ಸಿನಿಮಾ ಅಲ್ಲಿಗೆ ನಿಂತಿದೆ ಎನ್ನಲಾಗ್ತಿದೆ.

