ಬಾಲಿವುಡ್ ಬ್ಯೂಟಿ ಜಾನ್ವಿ ಕಪೂರ್ ಸಾಲು ಸಾಲು ಸಿನಿಮಾಗಳಲ್ಲಿ ಬ್ಯುಸಿಯಾಗಿದ್ದಾರೆ. ಜತೆಗೆ ಟಾಲಿವುಡ್ ಸಿನಿಮಾದತ್ತ ಬರುವ ಸೂಚನೆ ಕೂಡ ಕೊಟ್ಟಿದ್ದಾರೆ.ಸಂದರ್ಶನವೊಂದರಲ್ಲಿ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ.
ಸದ್ಯ ಶ್ರೀದೇವಿ ಪುತ್ರಿ ಜಾನ್ವಿ ಕಪೂರ್ ಕೈಯಲ್ಲಿ ಸಾಕಷ್ಟು ಸಿನಿಮಾಗಳಿವೆ. ತಮ್ಮ ಸಿನಿಮಾ ಕೆರಿಯರ್ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ್ದಾರೆ. ಜತೆಗೆ ಜ್ಯೂ.ಎನ್‌ಟಿಆರ್ ಜೊತೆ ನಟಿಸುವ ಆಸೆ ಜಾನ್ವಿ ಕಪೂರ್ ವ್ಯಕ್ತಪಡಿಸಿದ್ದಾರೆ. ತಾಯಿ ಶ್ರೀದೇವಿ ಅವರು ಕೂಡ ಹಿಂದಿ ಮತ್ತು ದಕ್ಷಿಣದ ಸಿನಿಮಾಗಳಲ್ಲಿ ಮಿಂಚಿ ಮೆರೆದ ನಟಿಯಾಗಿದ್ದರು. ಇಂದಿಗೂ ಅವರ ನಟಿಸಿರುವ ಸಿನಿಮಾಗಳನ್ನ ನೋಡಿ ಫ್ಯಾನ್ಸ್ ಕಣ್ತುಂಬಿಕೊಳ್ತಿದ್ದಾರೆ. ಇದೀಗ ಅದೇ ಹಾದಿಯಲ್ಲಿ ಜಾನ್ವಿ ಹೆಜ್ಜೆ ಇಡ್ತಿದ್ದಾರೆ. ಇದನ್ನೂ ಓದಿ:ಸಿಂಪಲ್ ಸುನಿ `ಗತವೈಭವ’ದಲ್ಲಿ ದೇವಕನ್ಯೆಯಾಗಿ ಆಶಿಕಾ ರಂಗನಾಥ್



