ಚಿತ್ರರಂಗದ ಸೆನ್ಸೆಷನಲ್ ಡೈರೆಕ್ಟರ್ ಪ್ರಶಾಂತ್ ನೀಲ್ `ಕೆಜಿಎಫ್ 2′ ಸೂಪರ್ ಸಕ್ಸಸ್ ನಂತರ ಈಗ ಜ್ಯೂ.ಎನ್ಟಿಆರ್ಗೆ ಆ್ಯಕ್ಷನ್ ಕಟ್ ಹೇಳೋದಕ್ಕೆ ಸಜ್ಜಾಗಿದ್ದಾರೆ. ಇತ್ತೀಚೆಗಷ್ಟೇ ಜ್ಯೂ.ಎನ್ಟಿಆರ್ ರಗಡ್ ಪೋಸ್ಟರ್ ರಿಲೀಸ್ ಮಾಡಿ, ಬರ್ತಡೇ ವಿಶ್ ಮಾಡಿದ್ದರು. ಈಗ ಜ್ಯೂ.ಎನ್ಟಿಆರ್ ಮತ್ತು ಪ್ರಶಾಂತ್ ನೀಲ್ ಕಾಂಬಿನೇಷನ್ ಚಿತ್ರಕ್ಕೆ ಟೈಟಲ್ ಕೂಡ ಫಿಕ್ಸ್ ಆಗಿದೆ.
ಕನ್ನಡ ಚಿತ್ರರಂಗದ ಮಾಸ್ಟರ್ ಮೈಂಡ್ `ಕೆಜಿಎಫ್ 2′ ಭರ್ಜರಿ ಸಕ್ಸಸ್ ನಂತರ ಪ್ರಭಾಸ್ ನಟನೆಯ `ಸಲಾರ್’ ಮತ್ತು ಜ್ಯೂ.ಎನ್ಟಿಆರ್ ಚಿತ್ರಕ್ಕೆ ನಿರ್ದೇಶನ ಮಾಡೋದ್ರಲ್ಲಿ ಬ್ಯುಸಿಯಾಗಿದ್ದಾರೆ. ಇತ್ತೀಚೆಗಷ್ಟೇ ಜ್ಯೂ.ಎನ್ಟಿಆರ್ ಬರ್ತಡೇಯಂದು ಹೊಸ ಚಿತ್ರ ಅನೌನ್ಸ್ ಮಾಡಿದ್ದ ಪ್ರಶಾಂತ್ನೀಲ್ ಈಗ ಈ ಚಿತ್ರಕ್ಕೆ ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ ನಟಿಸಿರುವ ಚಿತ್ರದ ಟೈಟಲ್ ಅನ್ನೇ ಈ ಚಿತ್ರಕ್ಕೆ ಇಡಲಾಗಿದೆ.
Advertisement
Advertisement
ಪ್ರಶಾಂತ್ ನೀಲ್ ಜ್ಯೂ.ಎನ್ಟಿಆರ್ ಬರ್ತಡೇಗೆ ರಿಲೀಸ್ ಮಾಡಿರುವ ಪೋಸ್ಟರ್ನಲ್ಲಿ ಕಪ್ಪು ಬಣ್ಣದಲ್ಲಿ ಭಯಾನಕವಾಗಿ ರಗಡ್ ಲುಕ್ನಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಸ್ತುತ ಈ ಸಿನಿಮಾವನ್ನು `ಎನ್ಟಿಆರ್ ೩೧’ ಎಂದಷ್ಟೆ ಕರೆಯಲಾಗುತ್ತಿದೆ. ಆದರೆ ಈಗ ಪವರ್ಫುಲ್ ಹೆಸರೊಂದನ್ನು ಪ್ರಶಾಂತ್ ನೀಲ್ ನಿಶ್ಚಯಿಸಿ ರಿಜಿಸ್ಟರ್ ಸಹ ಮಾಡಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ: ತೆಲುಗಿನತ್ತ ಹೊರಟ ಕ್ರೇಜಿಸ್ಟಾರ್ ರವಿಚಂದ್ರನ್
Advertisement
Advertisement
ಈ ಸಿನಿಮಾಕ್ಕೆ `ಅಸುರ’ ಎಂಬ ಹೆಸರು ರಿಜಿಸ್ಟರ್ ಮಾಡಿಸಿದ್ದಾರೆ ಪ್ರಶಾಂತ್ ನೀಲ್ ಎನ್ನಲಾಗುತ್ತಿದೆ. ಈಗ ಬಿಡುಗಡೆ ಮಾಡಿರುವ ಪೋಸ್ಟರ್ಗೂ `ಅಸುರ’ ಹೆಸರಿಗೂ ಚೆನ್ನಾಗಿ ಹೊಂದಿಕೆ ಆಗುತ್ತಿದೆ. ಅಲ್ಲದೆ, ಇದೇ ಹೆಸರಿನಲ್ಲಿ ಶಿವರಾಜ್ ಕುಮಾರ್ ಸಿನಿಮಾ ಒಂದನ್ನು ಸಹ ಮಾಡಿದ್ದರು. 2001ರಲ್ಲಿ ತೆರೆಕಂಡಿದ್ದ `ಅಸುರ’ ಸಿನಿಮಾ ಸೂಪರ್ ಹಿಟ್ ಆಗಿತ್ತು. ಈಗ ಇದೇ ಹೆಸರು ಇಟ್ಟುಕೊಂಡು ಪ್ರಶಾಂತ್ ನೀಲ್ ಹಾಗೂ ಜ್ಯೂ.ಎನ್ಟಿಆರ್ ಸಿನಿಮಾ ಮಾಡುತ್ತಿದ್ದಾರೆ. ಒಟ್ನಲ್ಲಿ ಶಿವಣ್ಣನ ಟೈಟಲ್ ಈ ಸಿನಿಮಾಗೆ ಇಡಲಾಗಿದೆ ಅಂತಾ ಕೇಳಿರೋ ಅಭಿಮಾನಿಗಳು ಥ್ರಿಲ್ ಆಗಿದ್ದಾರೆ.