ಜ್ಯೂ.ಎನ್‌ಟಿಆರ್ (Jr.Ntr) ನಟನೆಯ ‘ದೇವರ’ (Devara) ಸಿನಿಮಾದ ಸಾಂಗ್ ರಿಲೀಸ್ ಆಗಿ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ. ತಾರಕ್ ರಾಮ್ ಜೊತೆಯಾಗಿ ಜಾನ್ವಿ ಕಪೂರ್ ಸೊಂಟ ಬಳುಕಿಸಿರುವ ರೀತಿ ಕಂಡು ಅಭಿಮಾನಿಗಳು ಫಿದಾ ಆಗಿದ್ದಾರೆ.
‘ದೇವರ’ ಸಿನಿಮಾದ ಮತ್ತೊಂದು ಸಾಂಗ್ ಬಿಡುಗಡೆಯಾಗಿದೆ. ‘ದಾವೂದಿ’ ಎಂಬ ಸಾಂಗ್‌ಗೆ ಮಸ್ತ್ ಆಗಿರೋ ಹಾಡಿಗೆ ಜಬರ್‌ದಸ್ತ್ ಆಗಿ ತಾರಕ್ ಮತ್ತು ಜಾನ್ವಿ ಡ್ಯಾನ್ಸ್ ಮಾಡಿದ್ದಾರೆ. ಮಿಲಿಯನ್‌ಗಟ್ಟಲೇ ವಿವ್ಸ್ ಪಡೆದು ಸಾಂಗ್‌ಗೆ ಅದ್ಭುತ ರೆಸ್ಪಾನ್ಸ್ ಸಿಕ್ಕಿದೆ. ಇಬ್ಬರ ಡ್ಯಾನ್ಸ್ ಧಮಾಕಾ ನೋಡಿ ಅಭಿಮಾನಿಗಳಿಗೆ ಸಿನಿಮಾ ಮೇಲಿನ ನಿರೀಕ್ಷೆ ಹೆಚ್ಚಿಸಿದೆ. ಇದನ್ನೂ ಓದಿ:ಎಷ್ಟು ಜನರ ಜೊತೆ ಮಲಗಿದ್ದೀ?- ಬಾಲಕನ ಅಸಭ್ಯ ಪ್ರಶ್ನೆಗೆ ಉರ್ಫಿ ಜಾವೇದ್ ಶಾಕ್
View this post on Instagram
ಇನ್ನೂ ಇತ್ತೀಚೆಗೆ ‘ದೇವರ’ ಸಿನಿಮಾದ ರೊಮ್ಯಾಂಟಿಕ್ ಸಾಂಗ್‌ವೊಂದು ರಿಲೀಸ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಲಾಗಿದೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಹುಡುಗನ ಹುರುಪು ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದರು. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿತ್ತು.
ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಅವರ ಜೊತೆಗೆ ಜಾನ್ವಿ ಕಪೂರ್ (Janhvi Kapoor), ಸೈಫ್ ಅಲಿ ಖಾನ್ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರ ನೋಡಲು ಅಭಿಮಾನಿಗಳು ಕಾಯುತ್ತಿದ್ದಾರೆ. ಇದೇ ಸೆ.27ಕ್ಕೆ ಬಹುಭಾಷೆಗಳಲ್ಲಿ ಸಿನಿಮಾ ರಿಲೀಸ್ ಆಗಲಿದೆ.