ಜ್ಯೂ.ಎನ್‌ಟಿಆರ್ ನಟನೆಯ ‘ದೇವರ’ (Devara Film) ಸಿನಿಮಾದ ರೊಮ್ಯಾಂಟಿಕ್ ಸಾಂಗ್ ನೋಡಲು ಕಾಯುತ್ತಿದ್ದ ಫ್ಯಾನ್ಸ್ ಕಾತರಕ್ಕೆ ತೆರೆಬಿದ್ದಿದೆ. ‘ದೇವರ’ ಚಿತ್ರದ ಸಾಂಗ್ ರಿಲೀಸ್ ಆಗಿದೆ. ‘ಸ್ವಾತಿಮುತ್ತೇ ಸಿಕ್ಕಂಗೈತೆ’ ಎಂದು ಜ್ಯೂ.ಎನ್‌ಟಿಆರ್ (Jr.Ntr) ಜೊತೆ ಜಾನ್ವಿ (Janhvi Kapoor) ಕಪೂರ್ ಸಖತ್ ಆಗಿ ಸ್ಟೇಪ್ ಹಾಕಿದ್ದಾರೆ.
ಥೈಲ್ಯಾಂಡ್ ಕಾಡಿನ ಸುಂದರ ಜಾಗವೊಂದರಲ್ಲಿ ದೇವರ ಸಾಂಗ್ ಅನ್ನು ಶೂಟ್ ಮಾಡಿದ್ದಾರೆ. ಕನ್ನಡ ವರ್ಷನ್‌ನಲ್ಲಿ ಮೂಡಿ ಬಂದಿರುವ ‘ಸ್ವಾತಿಮುತ್ತೇ ಸಿಕ್ಕಂಗೈತೆ ಹುಡುಗನ ಹುರುಪು’ ಹಾಡಿನಲ್ಲಿ, ಸಖತ್ ಹಾಟ್ ಆಗಿ ತಾರಕ್ ಜೊತೆ ಜಾನ್ವಿ ಕುಣಿದು ಕುಪ್ಪಳಿಸಿದ್ದಾರೆ. ಈ ಹಾಡಿಗೆ ಅಭಿಮಾನಿಗಳಿಂದ ಉತ್ತಮ ರೆಸ್ಪಾನ್ಸ್ ಸಿಕ್ಕಿದೆ. ಇದನ್ನೂ ಓದಿ:ಅಮೆರಿಕದಿಂದ ಬಂದು ಉಪೇಂದ್ರ, ಶ್ರೀಮುರಳಿ, ಅನುಪ್ರಭಾಕರ್ ಮನೆಗೆ ಮಾನ್ಯಾ ಭೇಟಿ
View this post on Instagram
ಹಾಡಿನಲ್ಲಿ ಜಾನ್ವಿ ಸುಂದರವಾಗಿ ಕಾಣಿಸಿಕೊಂಡಿದ್ದಾರೆ. ಎಂದೂ ಕಾಣಿಸಿಕೊಂಡಿದ ಲುಕ್‌ನಲ್ಲಿ ಮೋಡಿ ಮಾಡಿದ್ದಾರೆ. ತಾರಕ್ ಮತ್ತು ಕೆಮಿಸ್ಟ್ರಿ ಪಡ್ಡೆಹುಡುಗರ ಮನಸ್ಸು ಗೆದ್ದಿದೆ. ಸಾಂಗ್ ರಿಲೀಸ್ ಕೆಲವೇ ಹೊತ್ತಿನಲ್ಲಿ ಮಿಲಿಯನ್ ಗಟ್ಟಲೇ ವಿವ್ಸ್ ಪಡೆದಿದೆ. ಇದೇ ಸೆ.27ರಂದು ಬಹುಭಾಷೆಯಲ್ಲಿ ಸಿನಿಮಾ ರಿಲೀಸ್ ಆಗಲಿದೆ.
ಈ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್ ಡಬಲ್ ರೋಲ್‌ನಲ್ಲಿ ನಟಿಸಿದ್ದಾರೆ. ಇವರ ಜೊತೆ ಜಾನ್ವಿ ಕಪೂರ್, ಸೈಫ್ ಅಲಿ ಖಾನ್, ಚೈತ್ರಾ ರೈ ಸೇರಿದಂತೆ ಅನೇಕರು ನಟಿಸಿದ್ದಾರೆ. ‘ಆರ್‌ಆರ್‌ಆರ್’ ಸಿನಿಮಾದ ಸಕ್ಸಸ್ ಬಳಿಕ ಬರುತ್ತಿರುವ ‘ದೇವರ’ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.