ಜ್ಯೂ.ಎನ್‌ಟಿಆರ್ (Jr.Ntr), ಜಾನ್ವಿ ಕಪೂರ್ (Janhvi Kapoor) ನಟನೆಯ ಬಹುನಿರೀಕ್ಷಿತ ‘ದೇವರ’ (Devara) ಸಿನಿಮಾದ ಟ್ರೈಲರ್ ಕನ್ನಡ ಸೇರಿ ಬಹುಭಾಷೆಗಳಲ್ಲಿ ರಿಲೀಸ್ ಆಗಿದೆ. ರಕ್ತದಿಂದ ಸಮುದ್ರವೇ ಕೆಂಪಾದ ಕಥೆಯನ್ನು ಹೇಳೋಕೆ ತಾರಕ್ ಮತ್ತು ಜಾನ್ವಿ ಬರುತ್ತಿದ್ದಾರೆ.
ಜಾತಿ, ಧರ್ಮ, ಭಯ ಎಲ್ಲಿಲ್ಲ ಎಂದು ಶುರವಾಗುವ ಡೈಲಾಗ್‌ಗೆ ಧೈರ್ಯ ಬಿಟ್ಟು ಬೇರೇನೂ ಗೊತ್ತಿಲ್ಲದ ಕಣ್ಣುಗಳಲ್ಲಿ ಭಯದ ಪೊರೆ ಆವರಿಸಿಕೊಂಡು ಎಂದು ಹೇಳುವಾಗ ತಾರಕ್‌ಗೆ ನೀಡಿದ ಲುಕ್ ಮಸ್ತ್ ಆಗಿದೆ. ಮನುಷ್ಯನಿಗೆ ಬದುಕುವಷ್ಟು ಧೈರ್ಯವಿದೆ ಕೊಲ್ಲಲು ಆ ಧೈರ್ಯ ಸಾಕಾಗುವುದಿಲ್ಲ ಎಂಬಂತಹ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದಾರೆ. ಇದನ್ನೂ ಓದಿ:ಬೇಬಿ ಬಂಪ್ ಫೋಟೋಶೂಟ್ ಹಂಚಿಕೊಂಡ ‘ಲಕ್ಷ್ಮಿ ಬಾರಮ್ಮ’ ನಟಿಯರು
View this post on Instagram
ದ್ವಿಪಾತ್ರಗಳಲ್ಲಿ ಜ್ಯೂ.ಎನ್‌ಟಿಆರ್ ಕಾಣಿಸಿಕೊಂಡಿರೋದು ಟ್ರೈಲರ್‌ನಿಂದ ಸ್ಪಷ್ಟವಾಗಿದೆ. ಹೇಡಿ ಮಗ ಇನ್ನೊಂದು ಕಡೆ ಹಿಂಸಾತ್ಮಕ ತಂದೆಯಾಗಿ ಬದಲಾಗಿದ್ದರ ಬಗ್ಗೆ ಟ್ರೈಲರ್‌ನಿಂದ ಚಿತ್ರದ ಕಥೆಯ ಸುಳಿವು ನೀಡಿದ್ದಾರೆ. ಜ್ಯೂ.ಎನ್‌ಟಿಆರ್ ಎದುರು ಸೈಫ್ ಅಲಿ ಖಾನ್ ನಟನೆ ನೋಡುಗರಿಗೆ ಕಿಕ್ ಕೊಟ್ಟಿದೆ. ತಾರಕ್ ಮತ್ತು ಜಾನ್ವಿ ಕಾಂಬಿನೇಷನ್ ಝಲಕ್ ಸೊಗಸಾಗಿದೆ. ಒಟ್ನಲ್ಲಿ ರಿಲೀಸ್ ಆಗಿರುವ `ದೇವರ’ ಚಿತ್ರದ ಟ್ರೈಲರ್ ಇದೀಗ ಸೋಶಿಯಲ್ ಮೀಡಿಯಾದಲ್ಲಿ ಭರ್ಜರಿ ವಿವ್ಸ್ ಪಡೆಯುತ್ತಿದೆ.
ಅಂದಹಾಗೆ, ಬಹುಭಾಷೆಗಳಲ್ಲಿ ‘ದೇವರ’ ಸಿನಿಮಾ ಸೆ.27ಕ್ಕೆ ರಿಲೀಸ್ ಆಗುತ್ತಿದೆ. ಡಬಲ್ ರೋಲ್‌ನಲ್ಲಿ ನಟಿಸಿರುವ ಜ್ಯೂ.ಎನ್‌ಟಿಆರ್ ಅವರನ್ನು ನೋಡಲು ಫ್ಯಾನ್ಸ್ ಕಾಯುತ್ತಿದ್ದಾರೆ. ಇನ್ನೂ ಚಿತ್ರದಲ್ಲಿ ತಾರಕ್ ಮತ್ತು ಜಾನ್ವಿ ಕಪೂರ್ ಜೊತೆ ಸೈಫ್ ಅಲಿ ಖಾನ್, ಪ್ರಕಾಶ್ ರಾಜ್ ಅನೇಕರು ನಟಿಸಿದ್ದಾರೆ. ಕೊರಟಾಲ ಶಿವ ಆ್ಯಕ್ಷನ್ ಕಟ್ ಹೇಳಿದ್ದಾರೆ.