ಕಿರುತೆರೆಯ ಜನಪ್ರಿಯ ಲಕ್ಷ್ಮಿ ಬಾರಮ್ಮ ಸೀರಿಯಲ್ ನಟಿಯರಾದ ನೇಹಾ ಗೌಡ (Neha Gowda) ಮತ್ತು ಕವಿತಾ (Kavitha Gowda) ಇಬ್ಬರೂ ಚೊಚ್ಚಲ ಮಗುವಿನ ನಿರೀಕ್ಷೆಯಲ್ಲಿದ್ದಾರೆ. ಬೇಬಿ ಬಂಪ್ ತೋರಿಸಿ ಪರಸ್ಪರ ಶುಭಾಶಯಗಳನ್ನು ಹೇಳಿದ್ದಾರೆ. ಪ್ರೆಗ್ನೆನ್ಸಿ ಫೋಟೋಶೂಟ್ ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.
Advertisement
ಒಂದೇ ಧಾರಾವಾಹಿಯಲ್ಲಿ ನಟಿಸಿದ ಇಬ್ಬರೂ ನಟಿಯರು ಪ್ರೆಗ್ನೆಂಟ್ ಆಗಿದ್ದಾರೆ. ನೇಹಾ, ಕವಿತಾ ಗೌಡ ಮನೆಗೆ ಹೊಸ ಅತಿಥಿ ಆಗಮಿಸುತ್ತಿರುವ ಖುಷಿಯಲ್ಲಿದ್ದಾರೆ. ಹ್ಯಾಪಿ ಡೆಲಿವರಿ ಎಂದು ಈ ನಟಿಯರು ಪರಸ್ಪರ ಶುಭಹಾರೈಸಿದ್ದಾರೆ. ಸೀರಿಯಲ್‌ನಲ್ಲಿ ಸಹೋದರಿಯರಾಗಿ ನಟಿಸಿದ್ದ ಚಿನ್ನು ಮತ್ತು ಗೊಂಬೆ ರಿಯಲ್ ಲೈಫ್‌ನಲ್ಲಿಯೂ ಉತ್ತಮ ಒಡನಾಟ ಹೊಂದಿದ್ದಾರೆ. ಒಟ್ಟಿಗೆ ತಾಯಿಯಾಗುತ್ತಿರುವ ಸಂಭ್ರಮವನ್ನು ನಟಿಯರು ಹಂಚಿಕೊಂಡಿದ್ದಾರೆ.
Advertisement
View this post on Instagram
Advertisement
ಇತ್ತೀಚೆಗೆ ನೇಹಾ ಗೌಡ ಸೀಮಂತ ಶಾಸ್ತ್ರ ಅದ್ಧೂರಿಯಾಗಿ ಮಾಡಲಾಗಿತ್ತು. ಅದಷ್ಟೇ ಅಲ್ಲ, ವೆಸ್ಟ್‌ರ್ನ್ ಸ್ಟೈಲಿನಲ್ಲಿ ಬೇಬಿ ಶವರ್ ಕೂಡ ಆಚರಿಸಿದ್ದರು. ಇದನ್ನೂ ಓದಿ:ರಶ್ಮಿಕಾ ಮಂದಣ್ಣಗೆ ಅಪಘಾತ: ಜೀವನ ಕ್ಷಣಿಕ ಎಂದ ‘ಪುಷ್ಪ’ ನಟಿ
Advertisement
ಹಾಗೆಯೇ ಪತಿ ಚಂದನ್ ಜೊತೆ ಕವಿತಾ ಗೌಡ ಪ್ರೆಗ್ನೆನ್ಸಿ ಫೋಟೋಶೂಟ್ ಹಂಚಿಕೊಂಡು ಸಂಭ್ರಮಿಸಿದ್ದರು. ಒಟ್ನಲ್ಲಿ ಸ್ಯಾಂಡಲ್‌ವುಡ್‌ನಲ್ಲಿ ನಟಿಮಣಿಯರು ತಾಯಿಯಾಗುತ್ತಿರುವ ಗುಡ್ ನ್ಯೂಸ್ ಕೊಡುತ್ತಾ ಸದ್ದು ಮಾಡ್ತಿದ್ದಾರೆ.