ಟಾಲಿವುಡ್ ಬಹುನಿರೀಕ್ಷಿತ ‘ದೇವರ’ ಸಿನಿಮಾಗಾಗಿ ಅಭಿಮಾನಿಗಳು ಎದುರು ನೋಡ್ತಿದ್ದಾರೆ. ಆರ್‌ಆರ್‌ಆರ್ ಸಕ್ಸಸ್ ನಂತರ ಜ್ಯೂ.ಎನ್‌ಟಿಆರ್ (Jr.ntr) ದೇವರ ಚಿತ್ರದ ಮೂಲಕ ಸೌಂಡ್ ಮಾಡ್ತಿದ್ದಾರೆ. ಈ ಚಿತ್ರದ ಬಗ್ಗೆ ಹೊಸ ಸುದ್ದಿಯೊಂದು ಹೊರಬಿದ್ದಿದೆ. ಅಂದು ತಾರಕ್‌ಗೆ ನಾಯಕಿಯಾಗಿದ್ದ ಪ್ರಿಯಾಮಣಿ (Priyamani) ಈಗ ತಾಯಿ ಪಾತ್ರದಲ್ಲಿ ನಟಿಸಲು ಓಕೆ ಎಂದಿದ್ದಾರೆ ಎಂಬ ಸುದ್ದಿ ವೈರಲ್ ಆಗಿದೆ.
ಬಹುಭಾಷಾ ನಟಿಯಾಗಿ ಪ್ರಿಯಾಮಣಿಗೆ (Priyamani) ಇಂದಿಗೂ ಡಿಮ್ಯಾಂಡ್ ಇದೆ. ಸ್ಟಾರ್ ನಟರ ಸಿನಿಮಾಗಳಲ್ಲಿ ನಾಯಕಿಯಾಗಿ ನಟಿಸಿ ಸೈ ಎನಿಸಿಕೊಂಡಿದ್ದಾರೆ. ಹೀಗಿರುವಾಗ ‘ದೇವರ’ ಚಿತ್ರದಲ್ಲಿ ಜ್ಯೂ.ಎನ್‌ಟಿಆರ್-ಪ್ರಿಯಾಮಣಿ ತಾಯಿ ಮತ್ತು ಮಗನಾಗಿ ಕಾಣಿಸಿಕೊಳ್ತಿದ್ದಾರೆ ಎನ್ನಲಾಗುತ್ತಿದೆ. ಇದನ್ನೂ ಓದಿ:ಸಮಂತಾ ಔಟ್, ರಶ್ಮಿಕಾ ಮಂದಣ್ಣಗೆ ಸಿಕ್ತು ಬಿಗ್ ಚಾನ್ಸ್
ಕೊರಟಾಲ ಶಿವ-ಜ್ಯೂ.ಎನ್‌ಟಿಆರ್ ಕಾಂಬೋದಲ್ಲಿ ‘ದೇವರ’ (Devara) ಸಿನಿಮಾ ಮೂಡಿ ಬರುತ್ತಿದೆ. ಜ್ಯೂ.ಎನ್‌ಟಿಆರ್ ದ್ವಿಪಾತ್ರದಲ್ಲಿ ನಟಿಸುತ್ತಿದ್ದಾರೆ. ಯಂಗ್ ಹೀರೋಗೆ ಜಾನ್ವಿ ಕಪೂರ್ (Janhavi Kapoor) ನಾಯಕಿಯಾಗಿದ್ದಾರೆ. ಪ್ರಿಯಾಮಣಿ ಪಾತ್ರಕ್ಕೆ ಪ್ರಾಮುಖ್ಯತೆ ಇದ್ದು, ಜ್ಯೂ.ಎನ್‌ಟಿಆರ್ ತಾಯಿಯ ಪಾತ್ರ ಎಂದೇ ಹೇಳಲಾಗುತ್ತಿದೆ. ಅಷ್ಟಕ್ಕೂ ಈ ಸುದ್ದಿ ನಿಜಾನಾ? ಎಂಬುದನ್ನ ಚಿತ್ರತಂಡವೇ ಅಧಿಕೃತವಾಗಿ ತಿಳಿಸಬೇಕಿದೆ.
‘ದೇವರ’ ಚಿತ್ರದ ಬಳಿಕ ಪ್ರಶಾಂತ್ ನೀಲ್ (Prashanth Neel) ಜೊತೆ ಜ್ಯೂ.ಎನ್‌ಟಿಆರ್ ಕೈಜೋಡಿಸಿದ್ದಾರೆ. ದೇವರ ಸಿನಿಮಾ ರಿಲೀಸ್ ಬಳಿಕ ಕೆಜಿಎಫ್ ನಿರ್ದೇಶಕನ ಸಿನಿಮಾದಲ್ಲಿ ಕಾಣಿಸಿಕೊಳ್ಳುವ ಸಾಧ್ಯತೆಯಿದೆ.
[web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]