ಬಿಜೆಪಿ ಅಧ್ಯಕ್ಷ ಜೆ.ಪಿ ನಡ್ಡಾ ಟ್ವಿಟರ್ ಖಾತೆ ಹ್ಯಾಕ್ – ರಷ್ಯಾ ಜನತೆಯೊಂದಿಗೆ ನಿಲ್ಲುವಂತೆ ಪೋಸ್ಟ್

Public TV
1 Min Read
jp nadda

ನವದೆಹಲಿ: ಬಿಜೆಪಿ ಅಧ್ಯಕ್ಷ ಜೆಪಿ ನಡ್ಡಾ ಅವರ ಟ್ವಿಟರ್ ಖಾತೆಯನ್ನು ಭಾನುವಾರ ಬೆಳಗ್ಗೆ ಹ್ಯಾಕ್ ಮಾಡಲಾಗಿದೆ. ಅಲ್ಲದೇ ಖಾತೆಯ ಹೆಸರನ್ನು ಐಸಿಜಿ ಓನ್ಸ್ ಇಂಡಿಯಾ ಎಂದು ಹ್ಯಾಕರ್ಸ್ ಬದಲಾಯಿಸಿದ್ದಾರೆ.

jp nadda 2

ನಡ್ಡಾ ಅವರ ಟ್ವಿಟ್ಟರ್ ಖಾತೆಯಲ್ಲಿ ರಷ್ಯಾದ ಜನರೊಂದಿಗೆ ನಿಂತು ಸಹಾಯ ಮಾಡುವಂತೆ ಕೆಲವು ಪೋಸ್ಟ್‌ಗಳನ್ನು ಮಾಡಲಾಗಿದೆ. ಉಕ್ರೇನ್ ಸಹಾಯಕ್ಕಾಗಿ ಕ್ರಿಪ್ಟೋ ಕರೆನ್ಸಿ ದೇಣಿಗೆ ನೀಡುವಂತೆ ಹಿಂದಿಯಲ್ಲಿ ಕೆಲವು ಪೋಸ್ಟ್ ಮಾಡಿ ಕೇಳಲಾಗಿದೆ. ಇದನ್ನೂ ಓದಿ: ಅಲಿಯಾಗೆ ನನ್ನ ಮೇಲೆ ಕೈ ಮಾಡಲು 20 ಟೇಕ್ ತೆಗೆದುಕೊಂಡಿದ್ರು: ‘ಗಂಗೂಬಾಯಿ’ನಲ್ಲಿ ಶಂತನು

jp nadda 1

ನಡ್ಡಾ ಅವರ ಟ್ವಿಟ್ಟರ್ ಖಾತೆಯನ್ನು ಮರಳಿ ಪಡೆದಿರುವುದರಿಂದ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರ ಖಾತೆಯಲ್ಲಿ ಹ್ಯಾಕರ್ಸ್ ಮಾಡಿದ್ದಂತಹ ಟ್ವೀಟ್‍ಗಳನ್ನು ಇದೀಗ ಅಳಿಸಿ ಹಾಕಲಾಗಿದೆ. ಇದನ್ನೂ ಓದಿ: ಮೇಕೆದಾಟು ಹೋರಾಟವಲ್ಲ, ಅದು ರಾಜಕೀಯ ಪಾದಯಾತ್ರೆ : ಸಿಎಂ ವ್ಯಂಗ್ಯ

Share This Article
Leave a Comment

Leave a Reply

Your email address will not be published. Required fields are marked *