ಬಳ್ಳಾರಿ: ರಾಜ್ಯದಲ್ಲಿ ಚುನಾವಣಾ ಪರ್ವ ಆರಂಭಗೊಂಡಿದ್ದು, ಹಂಪಿಯಲ್ಲಿ ಕನ್ನಡದಲ್ಲಿ ಮಾತನಾಡುವ ಮೂಲಕ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಪ್ರಚಾರ ಆರಂಭಿಸಿದ್ದಾರೆ.
Advertisement
ನಿನ್ನೆ ಬಿಜೆಪಿ ರಾಜ್ಯಕಾರ್ಯಕಾರಿಣಿ ಹಿನ್ನೆಲೆ ಹೊಸಪೇಟೆಗೆ ಕುಟುಂಬ ಸಮೇತರಾಗಿ ನಡ್ಡಾ ಆಗಮಿಸಿದ್ದರು. ಇಂದು ನಡ್ಡಾ ಐತಿಹಾಸಿಕ ಹಂಪಿಗೆ ಕುಟುಂಬ ಸಮೇತರಾಗಿ ಭೇಟಿ ನೀಡಿದ್ದಾರೆ. ಮೊದಲು ಹಂಪಿ ಶ್ರೀವಿರೂಪಾಕ್ಷೇಶ್ವರ ದೇಗುಲಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ಇದನ್ನೂ ಓದಿ: 35 ನಿಮಿಷ ನಡ್ಡಾ ಜತೆ ಸಿಎಂ ಮಹತ್ವದ ಮಾತುಕತೆ
Advertisement
Advertisement
ಶ್ರೀವಿರೂಪಾಕ್ಷ ದೇಗುಲಕ್ಕೆ ಭೇಟಿ ನೀಡಿದ ಜೆಪಿ ನಡ್ಡಾ ಸೇರಿದಂತೆ ಕುಟುಂಬ ಸದಸ್ಯರಿಗೆ ದೇಗುಲದ ಆನೆಯಿಂದ ಪುಷ್ಪ ಮಾಲೆ ಹಾಕಿ ಸ್ವಾಗತ ಕೋರಲಾಯಿತು. ಬಳಿಕ ಸಾಸಿವೆ ಕಾಳು ಗಣಪ, ಕಡಲೇ ಕಾಳು ಗಣಪ, ಉಗ್ರ ನರಸಿಂಹ, ಕಲ್ಲಿನ ತೇರು ಸೇರಿದಂತೆ ಹಲವು ಸ್ಮಾರಕ ವೀಕ್ಷಣೆ ಮಾಡಿದರು. ಜೊತೆಗೆ ಹಂಪಿ ಇತಿಹಾಸ ಕುರಿತು ನಡ್ಡಾ ಮಾಹಿತಿ ಪಡೆದುಕೊಂಡರು. ನಡ್ಡಾಗೆ ಸಿ.ಟಿ ರವಿ, ನಳಿನ್ ಕುಮಾರ್ ಕಟೀಲ್ ಮತ್ತು ಆನಂದ್ ಸಿಂಗ್ ಅವರ ಕುಟುಂಬ ಸಾಥ್ ನೀಡಿತು. ಇದನ್ನೂ ಓದಿ: ಹುಬ್ಬಳ್ಳಿ ಹಿಂಸಾಚಾರ ಪೂರ್ವನಿಯೋಜಿತ ಸಂಚು: ಬಿರುಗಾಳಿ ಎಬ್ಬಿಸಿದ ವಾಟ್ಸಪ್ ಆಡಿಯೋ
Advertisement
I had the opportunity to accompany Our National President Shri @JPNadda and His Family to the Virupaksha Temple at Hampi.
All of them took part in the rituals in a very traditional and respectful manner.
Prayed for the prosperity and progress of Our great Nation. pic.twitter.com/sgZV0xVOCa
— C T Ravi ???????? ಸಿ ಟಿ ರವಿ (@CTRavi_BJP) April 18, 2022
ಇದೇ ಸಂದರ್ಭ ಜೆಪಿ ನಡ್ಡಾ ಅವರಿಗೆ ಸಿಟಿ ರವಿ ಕನ್ನಡ ಕಲಿಸಿದರು. ಕನ್ನಡದಲ್ಲಿ ಮಾತನಾಡುವ ಮೂಲಕ ಜೆಪಿ ನಡ್ಡಾ ಅಧಿಕೃತವಾಗಿ ಕನ್ನಡದಲ್ಲಿ ಮಾತನಾಡಿ ಮತ ಬೇಟೆ ಆರಂಭಿಸಿದರು. ಕನ್ನಡದಲ್ಲಿ ಹೋಗಿ ಬರುವೆ ಎಂದು ಸಿಟಿ ರವಿ ಹೇಳಿಕೊಟ್ಟರು. ಸಿಟಿ ರವಿ ಹೇಳಿದ ಹಾಗೆ ಕನ್ನಡದಲ್ಲಿ ಹೋಗಿ ಬರುವೆ ಎಂದು ನಡ್ಡಾ ಹೇಳಿದರು. ಬಳಿಕ ನಿಮ್ಮ ವೋಟು ಯಾರಿಗೆ ಎಂದು ಸಿಟಿ ರವಿ ಕೇಳಿದರು ನಮ್ಮ ವೋಟ್ ಮೋದಿಗೆ ಎಂದು ಸ್ಥಳೀಯರು ಕೂಗಿದಾಗ ನಡ್ಡಾ ಫುಲ್ ಖುಷ್ ಆದರು.