– ಒಂಟಿತನಕ್ಕೆ ಬೇಸತ್ತು ವಿದ್ಯಾರ್ಥಿನಿ ಆತ್ಮಹತ್ಯೆ
– ಹಾಸ್ಟೆಲಿನಲ್ಲಿ ಡೆತ್‍ನೋಟ್ ಬರೆದಿಟ್ಟ ವಿದ್ಯಾರ್ಥಿನಿ
ಬೆಂಗಳೂರು: ಪತ್ರಿಕೋದ್ಯಮ ವಿದ್ಯಾರ್ಥಿನಿಯೊಬ್ಬಳು ನಿಗೂಢವಾಗಿ ಮೃತಪಟ್ಟ ಪ್ರಕರಣಕ್ಕೆ ಈಗ ಟ್ವಿಸ್ಟ್ ಸಿಕ್ಕಿದ್ದು, ಆತ್ಮಹತ್ಯೆಗೆ ಒಂಟಿತನನೇ ಕಾರಣ ಎನ್ನುವ ವಿಚಾರ ತಿಳಿದು ಬಂದಿದೆ.
Advertisement
ಮುಂಬೈ ಮೂಲದ ಸೋಫಿಯಾ ದಮನಿ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಳು. ನಗರದ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ಓದುತ್ತಿದ್ದ ವಿದ್ಯಾರ್ಥಿನಿ ಸೋಫಿಯಾ ಶವ ಹಾಸ್ಟೆಲಿನ ಕೋಣೆಯ ಬೆಡ್ ಮೇಲೆ ಬುಧವಾರ ಸಂಜೆ ಮಲಗಿದ್ದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಇದನ್ನೂ ಓದಿ: ಬೆಂಗಳೂರಿನಲ್ಲಿ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಾಸ್ಪದ ಸಾವು!
Advertisement
Advertisement
ಕಳೆದ ಎರಡು ವರ್ಷದಿಂದ ಬೆಂಗಳೂರಿನಲ್ಲಿ ನೆಲೆಸಿದ್ದ ಸೋಫಿಯಾ ಒಂಟಿತನಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಸೋಫಿಯಾ ಹಾಸಿಗೆ ಬದಿಯಲ್ಲಿ ನಿದ್ದೆ ಮಾತ್ರೆಗಳ ಖಾಲಿ ಡಬ್ಬಿ ಪತ್ತೆಯಾಗಿದ್ದು, ಜೊತೆಗೆ ಆಕೆಯ ಮೃತದೇಹದ ಪಕ್ಕದಲ್ಲಿ ಡೆತ್‍ನೋಟ್ ದೊರೆತಿದೆ.
Advertisement
ಡೆತ್‍ನೋಟ್‍ನಲ್ಲಿ ಏನಿದೆ?
ನನ್ನ ಆತ್ಮಹತ್ಯೆಗೆ ಒಂಟಿತನ ಕಾರಣ. ನನ್ನ ತಂದೆ- ತಾಯಿ ದುಬೈನಲ್ಲಿ ವಾಸಿಸುತ್ತಿದ್ದಾರೆ. ನನಗೆ ಹಣ ಕಳುಹಿಸುತ್ತಿದ್ದ ಅಪ್ಪ- ಅಮ್ಮ ಇದೂವರೆಗೂ ನೀನು ಹೇಗಿದ್ದೀಯಾ ಎಂದು ನನ್ನನ್ನು ವಿಚಾರಿಸುತ್ತಿರಲಿಲ್ಲ. ನನಗೆ ಅಪ್ಪ-ಅಮ್ಮನ ಪ್ರೀತಿ ಇಲ್ಲದಂತಾಗಿದೆ. ನಾನು ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಎಂದು ಸೋಫಿಯಾ ಬರೆದಿದ್ದಾಳೆ.
ಸೋಫಿಯಾ ಆತ್ಮಹತ್ಯೆ ಮಾಡಿಕೊಳ್ಳುವ ಮೊದಲು ಆ ದಿನ ಬೆಳಗ್ಗೆ ಸಹಪಾಠಿಗಳ ಜೊತೆ ಮಾತಾಡಿದ್ದಾಳೆ. ನೀವು ಕಾಲೇಜಿಗೆ ಹೋಗಿ ನಾನು ಬರುವುದಿಲ್ಲ ಎಂದು ತಿಳಿಸಿದ್ದಾಳೆ. ಬಳಿಕ ಸಂಜೆ ಸಹಪಾಠಿಗಳು ಹಾಸ್ಟೆಲ್ ವಾಪಸ್ ಬಂದಾಗ ಸೋಫಿಯಾ ಶವವಾಗಿ ಪತ್ತೆಯಾಗಿದ್ದಳು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv