Saturday, 14th December 2019

ಗದ್ದುಗೆ ಪ್ರವೇಶಿಸಲು ಶಲ್ಯ, ಪಂಚೆ ತೊಟ್ಟ 8 ಜನ ಪೊಲೀಸರು

ತುಮಕೂರು: ನಡೆದಾಡುವ ದೇವರು, ಶಿವಕುಮಾರ ಶ್ರೀಗಳ ಕ್ರಿಯಾ ವಿಧಿವಿಧಾನ ಸಮಾಧಿಯ ಬಳಿ ಭದ್ರತೆ ನೀಡುವುದಕ್ಕಾಗಿ 8 ಜನ ಪೊಲೀಸರು ಸಮವಸ್ತ್ರ ಬಿಚ್ಚಿ ಪಂಚೆ ಹಾಗೂ ಶಲ್ಯ ಧರಿಸಿದ್ದಾರೆ.

ಗದ್ದುಗೆ ಬಳಿ ಹೋಗುವಾಗ ಪೊಲೀಸರ ಸಮವಸ್ತ್ರ ಬದಲಾಗಬೇಕಾಗುತ್ತದೆ. ಹೀಗಾಗಿ ಭದ್ರತೆ ಹಾಗೂ ಶ್ರೀ ಮಠದ ಶಿಷ್ಠಾಚಾರದಂತೆ ಪೊಲೀಸರು ಶಲ್ಯ ಹಾಗೂ ಪಂಚೆ ಧರಿಸಿ ಗದ್ದುಗೆಯನ್ನು ಪ್ರವೇಶಿಸಿದ್ದಾರೆ. ಇದನ್ನೂ ಓದಿ: 70ರ ದಶಕದಲ್ಲೇ ಗದ್ದುಗೆ ನಿರ್ಮಾಣಕ್ಕೆ ಜಾಗ ಸೂಚಿಸಿದ್ದ ಶ್ರೀ: ಭವನದ ವಿಶೇಷತೆ ಏನು?

ಸಮಾಧಿ ಸ್ಥಳಕ್ಕೆ ಅನೇಕ ರಾಜಕಾರಣಿಗಳು, ಗಣ್ಯರು, ಸ್ವಾಮೀಜಿಗಳು ಬಂದಿರುತ್ತಾರೆ. ಅವರಿಗೆ ಭದ್ರತೆ ನೀಡುವ ಉದ್ದೇಶದಿಂದ ಸದ್ಯ 8 ಜನ ಪೊಲೀಸರನ್ನು ನೇಮಿಸಲಾಗಿದೆ. ಜೊತೆಗೆ ಮಠದ ಆವರಣದಲ್ಲಿ, ಅಂತಿಮ ಯಾತ್ರೆ ಮಾರ್ಗದಲ್ಲಿ ನೂರಾರು ಪೊಲೀಸರನ್ನು ನಿಯೋಜನೆ ಮಾಡಲಾಗಿದೆ.

ಸಾರ್ವಜನಿಕರಿಗೆ ನಿಗಧಿಯಾಗಿದ್ದ ಅಂತಿಮ ದರ್ಶನದ ಸಮಯವನ್ನು 4.30 ಗಂಟೆಗೆ ವಿಸ್ತರಿಸಲಾಗಿದೆ. ಸಾವಿರಾರು ಸಂಖ್ಯೆಯಲ್ಲಿ ಭಕ್ತರು ಶ್ರೀಗಳ ದರ್ಶನ ಪಡೆಯಲು ಬರುತ್ತಿದ್ದಾರೆ. ಇದರಿಂದಾಗಿ ಮತ್ತೆ 30 ನಿಮಿಷ ಅವಕಾಶ ಮಾಡಿಕೊಡಲಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Leave a Reply

Your email address will not be published. Required fields are marked *