ನಟಿ ಮೇಘಾ ಶೆಟ್ಟಿ (Megha Shetty) ಅವರು ಸದ್ಯ ವರ್ಕೌಟ್ ಮೂಡ್‌ನಲ್ಲಿದ್ದಾರೆ. ಜನಪ್ರಿಯ ‘ಜೊತೆ ಜೊತೆಯಲಿ’ (Jothe Jotheyali) ಸೀರಿಯಲ್ ಮುಗಿದ ಮೇಲೆ ತಮ್ಮ ಫಿಟ್‌ನೆಸ್ ಕಡೆ ಹೆಚ್ಚು ಗಮನ ನೀಡುತ್ತಿದ್ದಾರೆ. ಸದ್ಯ ಈ ಕುರಿತ ಫೋಟೋ ಸಾಮಾಜಿಕ ಜಾಲತಾಣದಲ್ಲಿ ನಟಿ ಹಂಚಿಕೊಂಡಿದ್ದಾರೆ.
‘ಜೊತೆ ಜೊತೆಯಲಿ’ ಸೀರಿಯಲ್ ಮೂಲಕ ಟಿವಿ ಕಿರುತೆರೆಗೆ ಲಗ್ಗೆಯಿಟ್ಟ ನಟಿ ಮೇಘಾ ಅವರು ಸೀರಿಯಲ್ ಜೊತೆ ಸಿನಿಮಾಗಳನ್ನು ಮಾಡುತ್ತಾ ನಾಲ್ಕು ವರ್ಷ ಕಿರುತೆರೆಯಲ್ಲಿ ರಂಜಿಸಿದ್ದರು. ಅಭಿಮಾನಿಗಳ ನೆಚ್ಚಿನ ಸೀರಿಯಲ್‌ಗೆ ಬ್ರೇಕ್ ಬಿದ್ದಿದೆ. ಅನು ಸಿರಿಮನೆ (Anu Sirimane) ಪಾತ್ರಕ್ಕೂ ಕೂಡ ತೆರೆ ಬಿದ್ದಿದೆ.
ಸೀರಿಯಲ್ ಮುಗಿದ ಬಳಿಕ ತಮ್ಮ ಮುಂದಿನ ಸಿನಿಮಾಗಳ ಕಡೆ ಗಮನ ನೀಡುತ್ತಿದ್ದಾರೆ. ಸದ್ಯ ವೆಕೇಷನ್ ಮೂಡ್‌ನಲ್ಲಿರುವ ನಟಿ ಮೈಸೂರಿನಲ್ಲಿ ಬೀಡು ಬಿಟ್ಟಿದ್ದಾರೆ. ಡೈಲಿ ಜಿಮ್ ವರ್ಕೌಟ್ ಮಾಡುತ್ತಾ ಬೆವರಿಳಿಸುತ್ತಿದ್ದಾರೆ. ಮೇಘಾ ಲುಕ್‌ಗೆ ಪಡ್ಡೆಹುಡುಗರು ಫಿದಾ ಆಗಿದ್ದಾರೆ. ಮೇಕಪ್ ಇಲ್ಲದೇ ಕೂಡ ನಟಿ ಮುದ್ದಾಗಿ ಕಾಣಿಸುತ್ತಿದ್ದಾರೆ. ಇದನ್ನೂ ಓದಿ:‘ಕಡ್ಡಿಪುಡಿ’ ಚಂದ್ರು ವಿರುದ್ಧ ಠಾಣೆ ಮೆಟ್ಟಿಲೇರಿದ ‘ರೊಮಿಯೋ’ ಖ್ಯಾತಿಯ ಪಿಸಿ ಶೇಖರ್
View this post on Instagram
ಮೇಘಾ ಶೆಟ್ಟಿ ಅವರು ತ್ರಿಬಲ್ ರೈಡಿಂಗ್, ದಿಲ್ ಪಸಂದ್ ಚಿತ್ರಗಳಲ್ಲಿ ಈಗಾಗಲೇ ನಟಿಸಿ ಸೈ ಎನಿಸಿಕೊಂಡಿದ್ದಾರೆ. ‘ಕೈವ’ ಮತ್ತು ‘ಆಪರೇಷನ್ ಲಂಡನ್ ಕೆಫೆ’ ಚಿತ್ರಗಳು ಈ ವರ್ಷ ತೆರೆಗೆ ಬರಲಿದೆ.