ಡೆಹ್ರಾಡೂನ್: ಭೂಮಿ ಕುಸಿತದಿಂದಾಗಿ ತತ್ತರಿಸುತ್ತಿರುವ ಉತ್ತರಾಖಂಡದ (Uttarakhand) ಜೋಶಿಮಠದಲ್ಲಿ (Joshimath) ಮನೆಗಳನ್ನು ಕಳೆದುಕೊಂಡಿರುವ ಸಂತ್ರಸ್ತ ಕುಟುಂಬಗಳಿಗೆ ಅಲ್ಲಿನ ಸರ್ಕಾರ ತಲಾ 1.5 ಲಕ್ಷ ರೂ. ಪರಿಹಾರ (compensation) ನೀಡುವುದಾಗಿ ಘೋಷಿಸಿದೆ.
ಕಳೆದ ವರ್ಷ ಡಿಸೆಂಬರ್‌ನಲ್ಲಿ ಜೋಶಿಮಠದ ಕೆಲವೆಡೆ ಬಿರುಕುಗಳು ಒಂದೊಂದಾಗಿಯೇ ಕಾಣಿಸಿಕೊಳ್ಳಲು ಪ್ರಾರಂಭಿಸಿತ್ತು. ಕೆಲವು ದಿನಗಳಲ್ಲಿ ಇದರ ತೀವ್ರತೆ ಹೆಚ್ಚಾಗಿ, ದುರಂತವಾಗಿ ಮಾರ್ಪಟ್ಟಿತು. ನಗರ ಮುಳುಗಡೆಯಾಗುವ ಭೀತಿಯಲ್ಲಿ (Joshimath Sinking) ಅಲ್ಲಿನ ನಿವಾಸಿಗಳಿದ್ದು, ಅಪಾಯದ ಸ್ಥಿತಿಯಲ್ಲಿರುವ ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮುಂದಾಗಿದೆ.
Advertisement
Advertisement
ಜೋಶಿಮಠದಲ್ಲಿನ ರಸ್ತೆ, ಮನೆಗಳು ಸೇರಿದಂತೆ ಅನೇಕ ಕಡೆ ಬಿರುಕುಗಳು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಅಲ್ಲಿ ವಾಸಿಸಲು ಅಪಾಯಕಾರಿ ಎಂದು ಗುರುತಿಸಲಾಗಿರುವ 600ಕ್ಕೂ ಹೆಚ್ಚು ಕಟ್ಟಡಗಳನ್ನು ನೆಲಸಮಗೊಳಿಸಲು ಸರ್ಕಾರ ಮಂಗಳವಾರ ಮುಂದಾಗಿತ್ತು. ಆದರೆ ಸ್ಥಳಿಯರು ಈ ನಡೆಗೆ ವಿರೋಧ ವ್ಯಕ್ತಪಡಿಸಿದ್ದರಿಂದ ನೆಲಸಮ ಕಾರ್ಯವನ್ನು ಸ್ಥಗಿತಗೊಳಿಸಲಾಗಿದೆ. ಇದನ್ನೂ ಓದಿ: ಜಾನ್ಸನ್ & ಜಾನ್ಸನ್ ಬೇಬಿ ಪೌಡರ್ ಉತ್ಪಾದನೆ, ಮಾರಾಟಕ್ಕೆ ಬಾಂಬೆ ಹೈಕೋರ್ಟ್ ಅನುಮತಿ
Advertisement
ಸದ್ಯಕ್ಕೆ ನಗರದ ಮಲಾರಿ ಇನ್ ಹಾಗೂ ಮೌಂಟ್ ವ್ಯೂ ಹೆಸರಿನ 2 ಹೋಟೆಲ್‌ಗಳನ್ನು ಮಾತ್ರವೇ ನೆಲಸಮ ಮಾಡಲಾಗುತ್ತಿರುವುದಾಗಿ ವರದಿಯಾಗಿದೆ. ಸರ್ಕಾರ 1 ವಾರದೊಳಗೆ ಸ್ಥಳೀಯ ಮನೆಗಳ ಸಮೀಕ್ಷೆ ನಡೆಸಿ ಬಳಿಕ ನೆಲಸಮ ಕಾರ್ಯ ಮಾಡುವ ಬಗ್ಗೆ ತೀರ್ಮಾನ ಮಾಡಲಿದೆ ಎಂದು ವರದಿಯಾಗಿದೆ.
Advertisement
ಜೋಶಿಮಠ ಮುಳುಗಡೆಯ ಹಿನ್ನೆಲೆ ಅಲ್ಲಿ ಸಾವಿರಾರು ನಿವಾಸಿಗಳನ್ನು ಸುರಕ್ಷಿತ ಪ್ರದೇಶಗಳಿಗೆ ಸ್ಥಳಾಂತರಗೊಳಿಸಲಾಗುತ್ತಿದೆ. ಉತ್ತರಾಖಂಡ ಸರ್ಕಾರ ಸಂತ್ರಸ್ತ ಕುಟುಂಬಗಳಿಗೆ 1.5 ಲಕ್ಷ ರೂ. ಪರಿಹಾರ ಘೋಷಿಸಿದೆ. ಕೆಡವಲಾಗುತ್ತಿರುವ ಹೋಟೆಲ್‌ಗಳ ಆಸ್ತಿಯ ಬಗ್ಗೆ ಸಮೀಕ್ಷೆ ನಡೆಸಿ ಪರಿಹಾರವನ್ನು ಘೋಷಿಸಲಾಗುವುದು ಎಂದು ತಿಳಿಸಲಾಗಿದೆ. ಇದನ್ನೂ ಓದಿ: ಮೆಟ್ರೋ ದುರಂತ: ತನಿಖೆ ನಡೆಸಿ ವರದಿ ಸಲ್ಲಿಸಿಲು ಐಐಎಸ್‍ಸಿಗೆ ಮನವಿ – ಮತ್ತಷ್ಟು ಅಧಿಕಾರಿಗಳ ತಲೆದಂಡ ಸಾಧ್ಯತೆ
Live Tv
[brid partner=56869869 player=32851 video=960834 autoplay=true]
Join our Whatsapp group by clicking the below link
https://chat.whatsapp.com/E6YVEDajTzH06LOh77r25k