ಮಾಸ್ಕೋ: ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ಪತ್ನಿ ಜಿಲ್ ಬೈಡನ್ ಹಾಗೂ ಮಗಳು ಆಶ್ಲೇ ಬ್ಲೇಜರ್ ಬೈಡನ್ ಸೇರಿದಂತೆ 23 ಅಮೆರಿಕನ್ನರಿಗೆ ನಿಷೇಧ ಹೇರಲಾಗಿದೆ ಎಂದು ರಷ್ಯಾ ವಿದೇಶಾಂಗ ಸಚಿವಾಲಯ ಮಂಗಳವಾರ ತಿಳಿಸಿದೆ.
ರಷ್ಯಾದ ರಾಜಕೀಯ ಹಾಗೂ ಸಾರ್ವಜನಿಕರ ವಿರುದ್ಧ ಅಮೆರಿಕ ನಿರಂತರವಾಗಿ ನಿರ್ಬಂಧಗಳನ್ನು ವಿಧಿಸುತ್ತಿದ್ದು, ಈ ಹಿನ್ನೆಲೆ 25 ಅಮೆರಿಕನ್ನರನ್ನು ಸ್ಟಾಪ್ ಲಿಸ್ಟ್(stop list)ಗೆ ಸೇರಿಸಲಾಗಿದೆ ಎಂದು ಸಚಿವಾಲಯ ತಿಳಿಸಿದೆ. ಇದನ್ನೂ ಓದಿ: ನೇಪಾಳದಲ್ಲಿ ಪಾನಿಪುರಿ ಮಾರಾಟ ನಿಷೇಧ
ಮೈನೆನ ಸುಸಾನ್ ಕಾಲಿನ್ಸ್, ಕೆಂಟುಕಿಯ ಮಿಚ್ ಮೆಕ್‌ಕಾನ್ನೆಲ್, ಅಯೋವಾದ ಚಾರ್ಲ್ಸ್ ಗ್ರಾಸ್ಲೆ, ನ್ಯೂಯಾರ್ಕ್ನ ಕರ್ಸ್ಟನ್ ಗಿಲ್ಲಿಬ್ರಾಂಡ್ ಸೇರಿದಂತೆ ಹಲವಾರು ಅಮೆರಿಕದ ಸೆನೆಟರ್‌ಗಳು ಈ ಪಟ್ಟಿಯಲ್ಲಿ ಸೇರಿದ್ದಾರೆ. ಹಲವು ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರು, ಸಂಶೋಧಕರು ಹಾಗೂ ಅಮೆರಿಕದ ಮಾಜಿ ಸರ್ಕಾರಿ ಅಧಿಕಾರಿಗಳೂ ಒಳಗೊಂಡಿದ್ದಾರೆ ಎಂದು ಹೇಳಿದೆ. ಇದನ್ನೂ ಓದಿ: ಕಾಶ್ಮೀರದಲ್ಲಿ ಸರಣಿ ಸ್ಫೋಟ- ಇಬ್ಬರು ಲಷ್ಕರ್ ಉಗ್ರರು ಅರೆಸ್ಟ್
ಈ ಮೊದಲು ಅಮೆರಿಕ ಮತ್ತು ಯುರೋಪ್ ರಾಷ್ಟ್ರಗಳು ರಷ್ಯಾ ಅಧ್ಯಕ್ಷ ಪುಟಿನ್ ಮತ್ತು ಮಿಲಿಟರಿ ಅಧಿಕಾರಿಗಳಿಗೆ ನಿರ್ಬಂಧ ಹೇರಿತ್ತು.