ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ರಷ್ಯಾ ದಾಳಿ ವಿರುದ್ಧ ಉಕ್ರೇನ್ ಅವರನ್ನು ಬೆಂಬಲಿಸಿ ಮಾತನಾಡುವಾಗ ಉಕ್ರೇನ್‍ನ ಜನರನ್ನು ತಪ್ಪಾಗಿ ಇರಾನ್‍ನ ಜನರು ಎಂದು ಉಲ್ಲೇಖಿಸಿದ್ದರು. ಇದೀಗ ಇದು ಟ್ವಿಟ್ಟರ್‌ನಲ್ಲಿ ಟ್ರೆಂಡಿಂಗ್ ಆಗುತ್ತಿದೆ.
ಪುಟಿನ್ ಕೀವ್‍ನ್ನು ಟ್ಯಾಂಕ್‍ಗಳೊಂದಿಗೆ ಸುತ್ತಬಹುದು. ಆದರೆ ಅವರು ಎಂದಿಗೂ ಇರಾನ್ ಜನರ ಮನಸನ್ನು ಗೆಲ್ಲಲು ಸಾಧ್ಯವಿಲ್ಲ ಎಂದು ಬೈಡನ್ ಅವರು ಹೇಳಿದ್ದರು. ಇದು ರಷ್ಯಾದ ಆಕ್ರಮಣದ ವಿರುದ್ಧ ಒಗ್ಗಟ್ಟನ್ನು ಪ್ರದರ್ಶಿಸುವ ಭಾಷಣವಾಗಿತ್ತು.
Advertisement
LMFAO Kamala appears to mouth “Ukrainian” when Joe Biden said Iranian.
pic.twitter.com/E28NEmiPOv
— Greg Price (@greg_price11) March 2, 2022
Advertisement
ಈ ಹೇಳಿಕೆಯಲ್ಲಿ ಉಕ್ರೇನ್‍ನ ಜನ ಎನ್ನುವ ಬದಲು ಇರಾನ್‍ನ ಜನರೆಂದು ಉಲ್ಲೇಖಿಸಿದ್ದು, ತಕ್ಷಣವೇ ಟ್ವಿಟ್ಟರ್‌ನಲ್ಲಿ ಟ್ರೇಂಡಿಂಗ್ ಆಗಿದೆ. ಟ್ವಿಟ್ಟರ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣದಲ್ಲಿ ಇರಾನಿಯನ್ ಹ್ಯಾಶ್‍ಟ್ಯಾಗ್ ಸದ್ದು ಮಾಡುತ್ತಿದೆ. ಇದನ್ನೂ ಓದಿ: ಪುಟಿನ್ ವಿರುದ್ಧ ಅಮೆರಿಕ ಅಧ್ಯಕ್ಷ ಜೋ ಬೈಡನ್ ಕಿಡಿ
Advertisement
BIDEN: “Putin may circle Kiev with tanks, but he’ll never gain the hearts and souls of the IRANIAN people” pic.twitter.com/lISqbFyH1V
— RNC Research (@RNCResearch) March 2, 2022
Advertisement
ಬೈಡನ್ ಭಾಷಣ ಮಾಡುವಾಗ ಇದೇ ಮೊದಲ ಬಾರಿಗೆ ಎಡವಟ್ಟು ಮಾಡಿಕೊಂಡಿಲ್ಲ. ಈ ರೀತಿ ಹಲವು ಬಾರಿ ಆಗಿದೆ. ಕಳೆದ ವರ್ಷ ಅವರು ತಮ್ಮ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್ ಅವರನ್ನು ಅಧ್ಯಕ್ಷೆ ಹ್ಯಾರಿಸ್ ಎಂದು ತಪ್ಪಾಗಿ ಕರೆದಿದ್ದರು. ಇದನ್ನೂ ಓದಿ: ರಷ್ಯಾ ದಾಳಿಗೆ ಮೃತಪಟ್ಟ ಕನ್ನಡಿಗ ನವೀನ್ ಮೃತದೇಹ ಪತ್ತೆ