ಅಹಮ್ಮದಾಬಾದ್: ಅಹ್ಮದಾಬಾದ್- ಜೋಧ್‌ಪುರಗೆ (Ahmedabad-Jodhpur) ಹೋಗುವ ವಂದೇ ಭಾರತ್ ರೈಲು ಹಳಿಗಳ ಮೇಲಿದ್ದ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿರುವ ಘಟನೆ ರಾಜಸ್ತಾನದ ಪಾಲಿ ಎಂಬಲ್ಲಿ ಆಗಸ್ಟ್ 23ಕ್ಕೆ ನಡೆದಿದೆ.
ರೈಲ್ವೇ ಅಧಿಕಾರಿಗಳ ಪ್ರಕಾರ, ಜವಾಯಿ ಹಾಗೂ ಬಿರೋಲಿಯಾ ನಡುವೆ ರೈಲು ಚಲಿಸುತ್ತಿರುವಾಗ ಎಂಜಿನ್ ಸಿಮೆಂಟ್ ಸ್ಲ್ಯಾಬ್‌ಗೆ ಡಿಕ್ಕಿ ಹೊಡೆದಿದೆ. ಇದನ್ನೂ ಓದಿ: ಉಗ್ರ ಸಂಘಟನೆ ಜೊತೆ ನಂಟು ಹೊಂದಿದ್ದ ಅಫ್ಸರ್ ಪಾಷಾ ಹಿಂಡಲಗಾ ಜೈಲಿಗೆ ಶಿಫ್ಟ್
Advertisement
ಘಟನೆಯ ಬಗ್ಗೆ ವಾಯುವ್ಯ ಅಧಿಕಾರಿ (ಸಿಪಿಆರ್‌ಒ) ಶಶಿಕಿರಣ್ ಮಾತನಾಡಿ, ಘಟನೆಯಿಂದ ರೈಲು ಬರುವಾಗ 8 ನಿಮಿಷ ತಡವಾಗಿ ಬಂದಿದೆ. ಇದರ ಹೊರತಾಗಿ ಯಾವ ಪ್ರಯಾಣಿಕರಿಗೂ ಸಮಸ್ಯೆ ಆಗಿಲ್ಲ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಜೋಗ ವೀಕ್ಷಿಸಲು 2 ಗಂಟೆ ಸಮಯ ನಿಗದಿ – ಶುಲ್ಕ ಹೆಚ್ಚಳಕ್ಕೆ ಪ್ರವಾಸಿಗರು ಆಕ್ರೋಶ
Advertisement
ಫಲ್ನಾ ಪ್ರದೇಶದ ಹಿರಿಯ ಎಂಜಿನಿಯರ್ (ಎಸ್‌ಎಸ್‌ಇ) ದೂರಿನ ಮೇರೆಗೆ ಅಪರಿಚಿತ ವ್ಯಕ್ತಿಗಳ ವಿರುದ್ಧ ದೂರು ದಾಖಲಾಗಿದೆ. ಫುಟ್‌ಪಾತ್ ನಿರ್ಮಿಸಲು ಬಳಸುವ ಸಿಮೆಂಟ್ ಸ್ಲ್ಯಾಬ್ ರೈಲು ಹಳಿಯ ಮೇಲೆ ಇಟ್ಟಿರುವುದು ಕಂಡುಬಂದಿದೆ ಎಂದು ಶಶಿಕಿರಣ್ ಹೇಳಿದರು. ಇದನ್ನೂ ಓದಿ: ಆ.30 ರಂದು ಬಿಜೆಪಿ ಸೇರಲಿದ್ದಾರೆ ಜಾರ್ಖಂಡ್ ಮಾಜಿ ಸಿಎಂ ಚಂಪೈ ಸೊರೆನ್
Advertisement
ಈ ರೈಲು ಅಹ್ಮದಾಬಾದ್- ಜೋಧ್‌ಪುರಕ್ಕೆ ಮಂಗಳವಾರ ಹೊರತುಪಡಿಸಿ ವಾರದ 6 ದಿನ ಚಲಿಸುತ್ತದೆ. ಸಬರಮತಿ ನಿಲ್ದಾಣಕ್ಕೆ ಸಂಜೆ 4.45ಕ್ಕೆ ತಲುಪುತ್ತದೆ. ಇದನ್ನೂ ಓದಿ: ಅತ್ತ ದರ್ಶನ್‌ಗೆ ರಾಜಾತಿಥ್ಯ – ಇತ್ತ ಎ5 ಆರೋಪಿ ನಂದೀಶ್ ಕುಟುಂಬ ಜೀವನ ಸಾಗಿಸಲು ಪರದಾಟ
Advertisement
ಕಳೆದ ಬಾರಿ ಅಕ್ಟೋಬರ್‌ನಲ್ಲಿ ಇಂತಹದ್ದೇ ಒಂದು ಘಟನೆ ನಡೆದಿದೆ. ಆಗ ರೈಲ್ವೆ ಅಧಿಕಾರಿಗಳು ತುರ್ತು ನಿರ್ಗಮನ ಬ್ರೇಕ್ ಹಾಕಿ ಅನಾಹುತ ತಪ್ಪಿಸಿದ್ದಾರೆ. ಮಕ್ಕಳು ಆಟವಾಡುವ ಸಂದರ್ಭದಲ್ಲಿ ಕಲ್ಲು ಹಾಗು ಕಬ್ಬಿಣದ ಅದಿರುಗಳನ್ನು ಹಾಕಿದ್ದರಿಂದ ಈ ಘಟನೆ ನಡೆದಿದೆ ಎಂದು ರಾಜಸ್ತಾನದ ಪೊಲೀಸ್ ಅಧಿಕಾರಿಗಳು ತಿಳಿಸಿದ್ದರು. ಇದನ್ನೂ ಓದಿ: ಮದ್ಯ ಪ್ರಿಯರಿಗೆ ಗುಡ್ ನ್ಯೂಸ್ – ಇಂದಿನಿಂದ ಮದ್ಯದ ದರ ಇಳಿಕೆ