ನವದೆಹಲಿ: ಭಾರತದ ದಾಳಿಗೆ ಜಮ್ಮು-ಕಾಶ್ಮೀರದ ನೌಶೇರಾ ಸೆಕ್ಟರ್ ನಲ್ಲಿ ಪ್ರತಿದಾಳಿ ನಡೆಸಿ ಅಲ್ಲಿನ ಸೇನಾ ನೆಲೆಗಳನ್ನು ಧ್ವಂಸಗೊಳಿಸಿದ್ದೇವೆ ಅಂತಾ ಪಾಕಿಸ್ತಾನ ವಿಡಿಯೋವೊಂದನ್ನು ಬಿಡುಗಡೆ ಮಾಡಿದೆ.
ಸುಮಾರು 87 ಸೆಕೆಂಡ್ ಇರೋ ಈ ವಿಡಿಯೋವನ್ನು ಮೇ 23ರಂದು ಪಾಕಿಸ್ತಾನಿ ವಕ್ತಾರರೊಬ್ಬರು ಟ್ವಿಟ್ಟರ್‍ನಲ್ಲಿ ಪೋಸ್ಟ್ ಮಾಡಿ, ಪಾಕಿಸ್ತಾನದ ಮುಗ್ಧ ನಾಗರಿಕರ ಮೇಲೆ ದಾಳಿ ನಡೆಸಿದ ಪ್ರತೀಕಾರವಾಗಿ ನಾವು ಮೇ 13ರಂದು ಭಾರತದ ಸೇನಾ ನೆಲೆಗಳ ಮೇಲೆ ದಾಳಿ ಮಾಡಿದ್ದೇವೆ ಎಂದು ಬರೆದುಕೊಂಡಿದ್ದಾರೆ.
Advertisement
ಪಾಕಿಸ್ತಾನದ ಸೇನಾ ಬಂಕರ್ ಗಳ ಮೇಲೆ ದಾಳಿ ನಡೆಸಿದ ವಿಡಿಯೋವನ್ನು ಭಾರತ ಬಹಿರಂಗಪಡಿಸಿದ ಮರುದಿನವೇ ಪಾಕಿಸ್ತಾನ ಈ ವಿಡಿಯೋವನ್ನು ಬಹಿರಂಗಪಡಿಸಿದೆ. ಆದ್ರೆ ಇದೊಂದು ನಕಲಿ ವಿಡಿಯೋ ಅಂತಾ ಭಾರತದ ಸೇನಾ ಮೂಲಗಳು ತಿಳಿಸಿವೆ.
Advertisement
ಇದನ್ನೂ ಓದಿ: ಭಾರತೀಯ ಸೇನೆಯಿಂದ ಪಾಕ್ ಸೇನಾ ಪೋಸ್ಟ್ ಗಳ ಧ್ವಂಸ: ವಿಡಿಯೋ ನೋಡಿ
Advertisement
ಭಾರತದ ಸೇನಾ ನೆಲೆಗಳು ಅತ್ಯಂತ ಧೃಡವಾದ ಗೋಡೆಗಳನ್ನ ಹೊಂದಿದ್ದು, ಗನ್ ಗಳ ದಾಳಿಯನ್ನು ಕೂಡ ತಡೆದುಕೊಳ್ಳುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಇಷ್ಟೊಂದು ಪ್ರಮಾಣದ ದಾಳಿಯಾದರೆ ಅದು ಮೇಲ್ಭಾಗದಲ್ಲೇ ಸ್ಫೋಟವಾಗುತ್ತದೆ. ಈ ವಿಡಿಯೋವನ್ನು ಸರಿಯಾಗಿ ಗಮನಿಸಿದಾಗ ಅದರಲ್ಲಿ ಎಡಿಟ್ ಮಾಡಿರೋ ಮಾರ್ಕ್‍ಗಳು ಕಂಡುಬರುತ್ತದೆ. ಐಇಡಿ ದಾಳಿ ಆದರೆ ಮಾತ್ರ ರೀತಿಯ ಸ್ಫೋಟವಾಗುತ್ತದೆ. ಆರ್ಟಿಲರಿ ಗನ್ ಮೂಲಕ ದಾಳಿ ಎಸಗಿದರೆ ಆ ರೀತಿಯ ಸ್ಫೋಟ ಕಂಡು ಆಗುವುದಿಲ್ಲ ಎಂದು ಸೇನಾ ಮೂಲಗಳನ್ನು ಆಧರಿಸಿ ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
Advertisement
On 13 May 2017, India targeted innocent civilians. In befitting response Pak Army destroyed Indian posts in Nowshera Sec. 2/2. pic.twitter.com/jHLZVOoHSa
— Maj Gen Asif Ghafoor (@OfficialDGISPR) May 23, 2017