ನವದೆಹಲಿ: ದೇಶಾದ್ಯಂತ 75 ಸಮುದ್ರ ತೀರಗಳಲ್ಲಿ 75 ದಿನಗಳ ಕಾಲ ಕರಾವಳಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ತಿಳಿಸಿದರು.
ಭೂ ವಿಜ್ಞಾನ ಸಚಿವಾಲಯದ ಪ್ರಧಾನ ಕಚೇರಿಯ ಪೃಥ್ವಿ ಭವನದಲ್ಲಿ ಮುಂಬರುವ ಅಂತಾರಾಷ್ಟ್ರೀಯ ಕರಾವಳಿ ಸ್ವಚ್ಛತಾ ದಿನದ ಸಿದ್ಧತೆಗಳನ್ನು ಪರಿಶೀಲಿಸಿದ ಅವರು, ಈ ವರ್ಷ ಜು. 3 ರಿಂದ ಸೆ. 17ರವರೆಗೆ ಸಮುದ್ರ ತೀರದಲ್ಲಿ ಸ್ವಚ್ಛತಾ ಅಭಿಯಾನವನ್ನು ಕೈಗೊಳ್ಳಲಾಗಿದೆ. ಪ್ರತಿವರ್ಷ ಸೆ. 3ನೇ ಶನಿವಾರದಂದು ಆಯೋಜಿಸಲಾಗುವ ವಾರ್ಷಿಕ ಕಾರ್ಯಕ್ರಮವು ಈ ವರ್ಷ ಸೆ. 17ರಂದು ಬಂದಿದೆ ಎಂದು ಹೇಳಿದರು.
Advertisement
Advertisement
ಇದು ಕಾಕತಾಳೀಯ ಎನ್ನುವಂತೆ ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನವೂ ಅಂದೇ ಆಗಿದೆ. ಅಂದು ಸಮುದ್ರದ ಬೀಚ್ ರಕ್ಷಣೆ, ಪರಿಸರ ಮತ್ತು ಹವಾಮಾನ ರಕ್ಷಣೆಯ ನಿಟ್ಟಿನಲ್ಲಿ ಸ್ವಚ್ಛಗೊಳಿಸಲಾಗುವುದು ಎಂದು ತಿಳಿಸಿದರು.
Advertisement
ಈ ವರ್ಷದ ಕಾರ್ಯಕ್ರಮವನ್ನು ದೇಶದ ಸ್ವಾತಂತ್ರ್ಯದ 75ನೇ ವರ್ಷದಲ್ಲಿ ಆಜಾದಿ ಕಾ ಅಮೃತ್ ಮಹೋತ್ಸವದ ಜೊತೆಗೆ ಆಚರಿಸಲಾಗುತ್ತದೆ. ಈ ಅಭಿಯಾನದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಭಾಗವಹಿಸುತ್ತಾರೆ ಎಂದು ಮಾಹಿತಿ ನೀಡಿದರು. ಇದನ್ನೂ ಓದಿ: ಮದುವೆಗೆ ಅಡ್ಡಿಯಾಯ್ತು ಕುಜ ದೋಷ – ಮಹಿಳಾ ಪೊಲೀಸ್ ಬಲಿ
Advertisement
ಕರಾವಳಿ ಭಾಗ ಮಾತ್ರವಲ್ಲದೆ ದೇಶದ ಇತರ ಭಾಗಗಳ ಏಳಿಗೆಗಾಗಿ ಸ್ವಚ್ಛ ಸಾಗರ, ಸುರಕ್ಷಿತ ಸಾಗರ ಎಂಬ ಸಂದೇಶ ಸಾರಲು ಸಾರ್ವಜನಿಕರ ಸಹಭಾಗಿತ್ವವೂ ಅತ್ಯಗತ್ಯವಾಗಿದೆ ಎಂದರು. ಇದನ್ನೂ ಓದಿ: ರೈತರನ್ನು ಬಲಿ ಕೊಟ್ಟಾಯಿತು, ಈಗ ಸೈನಿಕರ ಸರದಿಯೇ?: ಅಗ್ನಿಪಥ್ ಯೋಜನೆಗೆ ಸಿದ್ದು ವಿರೋಧ