ನವದೆಹಲಿ: 4ಜಿ ಡೌನ್‍ಲೋಡ್ ವೇಗಕ್ಕೆ ಸಂಬಂಧಿಸಿದಂತೆ ‘ಟ್ರಾಯ್’ ಪ್ರಕಟಿಸಿರುವ ಡೇಟಾದಲ್ಲಿ ಜಿಯೋ ಮೊದಲ ಸ್ಥಾನದಲ್ಲಿದೆ.
Advertisement
ಅಕ್ಟೋಬರ್ ಡೇಟಾವನ್ನು ಟ್ರಾಯ್ ಪ್ರಕಟಿಸಿದ್ದು, ಅದರಲ್ಲಿ ಜಿಯೋ ಮುಂಚೂಣಿಯಲ್ಲಿದೆ. ಇದರ ಡೌನ್‍ಲೋಡ್ ವೇಗವು 21.9 ಮೆಗಾ ಬೈಟ್ ಪರ್ ಸೆಕೆಂಡ್ (ಎಂಬಿಪಿಎಸ್) ಇದೆ. ಭಾರ್ತಿ ಏರ್‌ಟೆಲ್ ಮತ್ತು ವೊಡಾಫೋನ್ ಐಡಿಯಾ (ವಿಐಎಲ್) ಡೌನ್‍ಲೋಡ್ ವೇಗವೂ ಹೆಚ್ಚಾಗುತ್ತಿದೆ. ಇದರಿಂದ ಜಿಯೊ ಕಂಪೆನಿಯೊಂದಿಗೆ ಡೌನ್‍ಲೋಡ್ ವೇಗದ ಅಂತರ ಕಡಿಮೆಯಾಗಿದೆ. ಇದನ್ನೂ ಓದಿ: ಎಲ್ಲೂ ವೀಕ್ ಆಗದ ನಾನು, ಅಪ್ಪು ನೋಡಲು ಹೋದಾಗ ತುಂಬಾ ವೀಕ್ ಆದೆ: ರವಿಚಂದ್ರನ್ ಭಾವುಕ
Advertisement
ಏರ್‌ಟೆಲ್ 4ಜಿ ಡೌನ್‍ಲೋಡ್ ವೇಗವೂ ಹೆಚ್ಚಾಗಿದೆ. ಜೂನ್‍ನಲ್ಲಿ 5 ಎಂಬಿಪಿಎಸ್ ಇದ್ದ ಏರ್‌ಟೆಲ್ ಡೌನ್‍ಲೋಡ್ ವೇಗ ಅಕ್ಟೋಬರ್‌ನಲ್ಲಿ 13.2 ಎಂಬಿಪಿಎಸ್ ತಲುಪಿದೆ. ಅಲ್ಲದೇ ಕಳೆದ ಐದು ತಿಂಗಳಲ್ಲಿ ವೊಡಾಫೋನ್ 4ಜಿ ವೇಗವು 6.5 ಎಂಬಿಪಿಎಸ್‍ನಿಂದ 15.6 ಎಂಬಿಪಿಎಸ್‍ಗೆ ಹೆಚ್ಚಿದೆ. ಇದನ್ನೂ ಓದಿ: ಪ್ರತಾಪ್‌ಸಿಂಹಗೆ ತಾಕತ್ತಿದ್ರೆ ವಿಜಯೇಂದ್ರರನ್ನು ಮರಿ ಯಡಿಯೂರಪ್ಪ ಎನ್ನಲಿ: ಪ್ರಿಯಾಂಕ್ ಖರ್ಗೆ ಸವಾಲು
Advertisement
Advertisement
ಅಪ್‍ಲೋಡ್ ವೇಗದಲ್ಲಿ ಮೊದಲ ಸ್ಥಾನ ಪಡೆದಿದೆ. ಅಕ್ಟೋಬರ್‌ನಲ್ಲಿ ವೊಡಾಫೋನ್ 4ಜಿ ಅಪ್‍ಲೋಡ್ ವೇಗವು 7.6 ಎಂಬಿಪಿಎಸ್ ಇದ್ದು, ಮೊದಲ ಸ್ಥಾನದಲ್ಲಿದೆ. ಜಿಯೋ ಅಪ್‍ಲೋಡ್ ವೇಗವು 6.4 ಎಂಬಿಪಿಎಸ್ ಮತ್ತು ಏರ್‌ಟೆಲ್ ವೇಗವು 5.2 ಎಂಬಿಪಿಎಸ್ ಇದೆ.