ಮುಂಬೈ: ಸೇವೆ ಆರಂಭಗೊಂಡ ಬಳಿಕ ನಷ್ಟದಲ್ಲಿದ್ದ ರಿಲಯನ್ಸ್ ಜೀಯೋ 15 ತಿಂಗಳ ಬಳಿಕ ಇದೇ ಮೊದಲ ಬಾರಿ ಲಾಭದ ಫಲಿತಾಂಶ ದಾಖಲಿಸಿದೆ. ಡಿಸೆಂಬರ್ 31ಕ್ಕೆ ಅಂತ್ಯಗೊಂಡ ಮೂರನೇ ತ್ರೈಮಾಸಿಕದಲ್ಲಿ ಜಿಯೋ 504 ಕೋಟಿ ರೂ. ನಿವ್ವಳ ಲಾಭಗಳಿಸಿದೆ ಎಂದು ಮಾತೃಸಂಸ್ಥೆ ರಿಲಯನ್ಸ್ ಇಂಡಸ್ಟ್ರಿಸ್ ತನ್ನ ಹೇಳಿಕೆಯಲ್ಲಿ ತಿಳಿಸಿದೆ.
ಎರಡನೇ ತ್ರೈಮಾಸಿಕದಲ್ಲಿ 271 ಕೋಟಿ ರೂ. ನಷ್ಟ ಅನುಭವಿಸಿದ್ದ ಜಿಯೋ ಮೂರನೇ ತ್ರೈಮಾಸಿಕದಲ್ಲಿ 6,879 ಕೋಟಿ ರೂ. ಆದಾಯಗಳಿಸಿದೆ.
ಜಿಯೋ ಪ್ರತಿಸ್ಪರ್ಧಿ ಏರ್ ಟೆಲ್ ಆದಾಯ ಕುಸಿತಗೊಂಡಿದೆ. ಎರಡನೇ ತ್ರೈಮಾಸಿಕದಲ್ಲಿ 23,335 ಕೋಟಿ ರೂ. ಗಳಿಸಿದ್ದರೆ, ಡಿಸೆಂಬರ್ ಗೆ ಅಂತ್ಯಗೊಂಡ ತ್ರೈಮಾಸಿಕದಲ್ಲಿ 12.9% ಕುಸಿತವಾಗಿದ್ದು 20,319 ಕೋಟಿ ರೂ.ಗಳಿಸಿದೆ. ನಿವ್ವಳ ಲಾಭ 306 ಕೋಟಿ ರೂ. ಗಳಿಸಿದ್ದರೆ, ಎರಡನೇ ತ್ರೈ ಮಾಸಿಕದಲ್ಲಿ 504 ಕೋಟಿ ರೂ. ಗಳಿಸಿತ್ತು.
ಏರ್‍ಟೆಲ್ ಎವರೇಜ್ ರೆವೆನ್ಯೂ ಪರ್ ಯೂಸರ್(ಎಆರ್‍ಪಿಯು) ಡಿಸೆಂಬರ್ ನಲ್ಲಿ 123 ರೂ. ಇದ್ದರೆ ಒಂದು ವರ್ಷದ ಹಿಂದೆ 172 ರೂ. ಇತ್ತು. ಜಿಯೋ ಎಆರ್‍ಪಿಯು ಮೂರನೇ ತ್ರೈಮಾಸಿಕದಲ್ಲಿ 154 ರೂ. ಇದ್ದರೆ, ಎರಡನೇ ತ್ರೈಮಾಸಿಕದಲ್ಲಿ 156 ರೂ. ಇತ್ತು. ಇದನ್ನೂ ಓದಿ: ಜಿಯೋ ಎಫೆಕ್ಟ್: ಟೆಲಿಕಾಂ ಕ್ಷೇತ್ರದಲ್ಲಿ ಉದ್ಯೋಗ ಕಳೆದುಕೊಂಡವರ ಸಂಖ್ಯೆ ಎಷ್ಟು?
2016ರ ಸೆಪ್ಟೆಂಬರ್ ನಲ್ಲಿ ಜಿಯೋ ಅಧಿಕೃತವಾಗಿ ಆರಂಭಿಸಿ ಮೊದಲ 6 ತಿಂಗಳು ಉಚಿತ ಸೇವೆ ನೀಡಿತ್ತು. ಪ್ರಸ್ತುತ ಜಿಯೋಗೆ ಈಗ 16 ಕೋಟಿ ಗ್ರಾಹಕರಿದ್ದಾರೆ.
ಇದನ್ನೂ ಓದಿ: ಜಿಯೋ ಎಫೆಕ್ಟ್: ಏರ್‍ಟೆಲ್‍ನಿಂದ ಟೆಲಿನಾರ್ ಕಂಪೆನಿ ಖರೀದಿ
ಇದನ್ನೂ ಓದಿ: ಉಚಿತ ಕರೆ ನೀಡುತ್ತಿರೋ ಜಿಯೋಗೆ ಎಷ್ಟು ಕೋಟಿ ನಷ್ಟವಾಗಿದೆ? ನಷ್ಟವಾಗಿದ್ದು ಎಲ್ಲಿ?
ಇದನ್ನೂ ಓದಿ: ಜಿಯೋ ಎಫೆಕ್ಟ್: ಐಡಿಯಾ, ವೊಡಾಫೋನ್ ಇಂಡಿಯಾ ವಿಲೀನ
ಇದನ್ನೂ ಓದಿ: ಜಿಯೋದಿಂದಾಗಿ ಭಾರತದ ಟೆಲಿಕಾಂ ಮಾರುಕಟ್ಟೆಯಲ್ಲಿ ಆಗಿರೋ ಆ 9 ಬದಲಾವಣೆಗಳು