ಮುಂಬೈ: ಜಿಯೋ ತನ್ನ 10ನೇ ವರ್ಷದ ಸಂಭ್ರಮದ ಹಿನ್ನೆಲೆಯಲ್ಲಿ Jio Prime ಸದಸ್ಯತ್ವವನ್ನು ಮತ್ತೆ ಪರಿಚಯಿಸಿದೆ. ಆಗಸ್ಟ್ 20ರಿಂದ ಹೊಸ Jio Prime ಸದಸ್ಯತ್ವ ಲಭ್ಯವಾಗಲಿದ್ದು, ಗ್ರಾಹಕರಿಗೆ ಒಂದು ವರ್ಷದ ಬೆಲೆ ಗ್ಯಾರಂಟಿ ಸೇರಿದಂತೆ ಹಲವು ಹೆಚ್ಚುವರಿ ಪ್ರಯೋಜನಗಳು ಸಿಗಲಿವೆ.
ಮುಖ್ಯವಾಗಿ, ಗ್ರಾಹಕರು ತಮ್ಮ ನೆಚ್ಚಿನ ಅರ್ಹ Jio ಪ್ಲ್ಯಾನ್ ಅನ್ನು ಈಗಿರುವ ದರದಲ್ಲಿ ರೀಚಾರ್ಜ್ ಮಾಡಿದರೆ, ಸೆಪ್ಟೆಂಬರ್ 5, 2027ರವರೆಗೆ ಭವಿಷ್ಯದ ಬೆಲೆ ಪರಿಷ್ಕರಣೆಯಿಂದ ರಕ್ಷಣೆ ಸಿಗಲಿದೆ ಎಂದು ಕಂಪನಿ ತಿಳಿಸಿದೆ. ಅಂದರೆ, ಈಗಿನ ದರದಲ್ಲಿ ಅರ್ಹ ಫ್ಲ್ಯಾನ್‌ಗೆ ರೀಚಾರ್ಜ್ ಮಾಡಿಕೊಂಡು Jio Prime ಸದಸ್ಯರಾದರೆ, ಮುಂದಿನ ದಿನಗಳಲ್ಲಿ ಆ ಪ್ಲಾನ್‌ನ ಬೆಲೆ ಹೆಚ್ಚಾದರೂ ಬೆಲೆ ಗ್ಯಾರಂಟಿಯ ಅವಧಿಯಲ್ಲಿ ಅದರ ಪ್ರಯೋಜನ ಪಡೆಯಬಹುದು.
300 ರೂ. ಗೆ Jio Prime ಸದಸ್ಯತ್ವ
Jio Prime ಸದಸ್ಯತ್ವಕ್ಕೆ ಒಮ್ಮೆ ಮಾತ್ರ 300 ರೂ. ಜಾಯಿನ್ ಶುಲ್ಕ ಪಾವತಿಸಬೇಕು. ಈಗಾಗಲೇ Jio ಬಳಸುತ್ತಿರುವ ಪ್ರಿಪೇಯ್ಡ್ ಮತ್ತು ಪೋಸ್ಟ್‌ಪೇಯ್ಡ್ ಗ್ರಾಹಕರು ಇದಕ್ಕೆ ಸೇರಬಹುದು.
ಇತರೆ ನೆಟ್‌ವರ್ಕ್‌ಗಳಲ್ಲಿರುವ ಗ್ರಾಹಕರು Jioಗೆ ಪೋರ್ಟ್ ಆಗುವ ಮೂಲಕ ಅಥವಾ ಹೊಸ Jio ಸಂಪರ್ಕ ಪಡೆದುಕೊಳ್ಳುವ ಮೂಲಕ ಸದಸ್ಯತ್ವ ಪಡೆಯಬಹುದು.
600 ರೂ. ಮೌಲ್ಯದ ಕ್ಯಾಶ್‌ಬ್ಯಾಕ್ ವೋಚರ್
Jio Prime ಸದಸ್ಯರಿಗೆ ಒಟ್ಟು 600 ರೂ. ಮೌಲ್ಯದ ಕ್ಯಾಶ್‌ಬ್ಯಾಕ್ ವೋಚರ್‌ಗಳು ಸಿಗಲಿವೆ.
ಹೊಸ JioHome ಅಥವಾ JioPC ಸಂಪರ್ಕ ಪಡೆಯುವಾಗ 300 ರೂ. ಕ್ಯಾಶ್‌ಬ್ಯಾಕ್ ವೋಚರ್ ಬಳಸಬಹುದು. ಕುಟುಂಬದವರು ಅಥವಾ ಸ್ನೇಹಿತರಿಗಾಗಿ ಹೊಸ Jio SIM ಸಂಪರ್ಕ ಪಡೆಯಲು ಮತ್ತೊಂದು 300 ರೂ. ಕ್ಯಾಶ್‌ಬ್ಯಾಕ್ ವೋಚರ್ ಸಿಗಲಿದೆ.
ಇದರ ಜೊತೆಗೆ Jioನ ಹೊಸ ಉತ್ಪನ್ನಗಳು, ಸೇವೆಗಳು ಮತ್ತು ಕೆಲವು ಪ್ರಯೋಗಾತ್ಮಕ ಸೇವೆಗಳಿಗೆ ಆರಂಭಿಕ ಪ್ರವೇಶ ಹಾಗೂ ಆದ್ಯತೆಯ ಗ್ರಾಹಕ ಸೇವೆಯಂತಹ ಸೌಲಭ್ಯಗಳೂ ಇರಲಿವೆ.
299 ರೂ. ಫ್ಲ್ಯಾನ್ ಮುಂದುವರಿಸಿದ Jio
ಇತ್ತೀಚೆಗೆ ಟೆಲಿಕಾಂ ವಲಯದಲ್ಲಿ ಟ್ಯಾರಿಫ್ ಬದಲಾವಣೆಗಳ ಚರ್ಚೆ ನಡೆಯುತ್ತಿರುವ ನಡುವೆಯೇ, Jio ತನ್ನ 299 ರೂ. ಫ್ಲ್ಯಾನ್ ಮುಂದುವರಿಸುವ ನಿರ್ಧಾರ ಕೈಗೊಂಡಿದೆ. ಕಂಪನಿಯ ಪ್ರಮುಖ ಟ್ಯಾರಿಫ್ ಫ್ಲ್ಯಾನ್‌ಗಳು ಬಳಕೆದಾರರಿಗೆ ಮುಂದುವರಿಯಲಿವೆ ಎಂದು ತಿಳಿಸಿದೆ.
Jio Prime ಎಲ್ಲಿ ಪಡೆಯಬಹುದು?
ಗ್ರಾಹಕರು MyJio ಆ್ಯಪ್, Jio.com, Jio Stores ಹಾಗೂ ಅಧಿಕೃತ Jio Partner Stores ಮೂಲಕ Jio Prime ಸದಸ್ಯತ್ವ ಪಡೆದುಕೊಳ್ಳಬಹುದು.
ಒಟ್ಟಿನಲ್ಲಿ, Jio Prime ಮೂಲಕ ತನ್ನ ಗ್ರಾಹಕರಿಗೆ ಒಂದು ವರ್ಷದ ಬೆಲೆ ನಿಶ್ಚಿತತೆ ನೀಡುವುದರ ಜೊತೆಗೆ ಕ್ಯಾಶ್‌ಬ್ಯಾಕ್ ಮತ್ತು ಹೊಸ ಸೇವೆಗಳಿಗೆ ಆರಂಭಿಕ ಪ್ರವೇಶ ನೀಡಲು Jio ಮುಂದಾಗಿದೆ.

