ಜಿಯೋ-ಬಿಪಿ ಮೊದಲ ಮೊಬಿಲಿಟಿ ಸ್ಟೇಷನ್ ಆರಂಭ- ಇವಿ ಚಾರ್ಜಿಂಗ್‌, ಬ್ಯಾಟರಿ ಸ್ವಾಪ್

Public TV
3 Min Read
Jio bp to sell additive fuels at no extra cost EV charging battery swap 24×7 retail at RIL fuel 5 e1635327616614

– ಇವಿ ಚಾರ್ಜಿಂಗ್ ಮೂಲಸೌಕರ್ಯ
– ಇಂಟರ್ ನ್ಯಾಷನಲ್ ಆನ್-ದಿ-ಮೂವ್ ಬ್ರ್ಯಾಂಡ್, ವೈಲ್ಡ್ ಬೀನ್ ಕೆಫೆ

ಮುಂಬೈ: ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್ (RIL) ಮತ್ತು ಬಿಪಿ ಯ ಇಂಧನ ಮತ್ತು ಮೊಬಿಲಿಟಿಯ ಜಂಟಿ ಉದ್ಯಮ, ರಿಲಯನ್ಸ್ ಬಿಪಿ ಮೊಬಿಲಿಟಿ ಲಿಮಿಟೆಡ್ (RBML) ತನ್ನ ಮೊದಲ ಜಿಯೋ-ಬಿಪಿ ಬ್ರಾಂಡ್ ಮೊಬಿಲಿಟಿ ಸ್ಟೇಷನ್ ಅನ್ನು ಮಹಾರಾಷ್ಟ್ರದ ನವಿ ಮುಂಬೈನ ನಾವ್ಡೆಯಲ್ಲಿ ಆರಂಭಿಸಿದೆ.

ಸಾಂಕ್ರಾಮಿಕ-ಪೀಡಿತ ಪರಿಸರದಲ್ಲಿ ಕೆಲಸ ಮಾಡುವುದು ಸವಾಲಾದರೂ ಜಿಯೋ-ಬಿಪಿ ಗ್ರಾಹಕರಿಗೆ ಬಹು ಇಂಧನ ಆಯ್ಕೆಗಳನ್ನು ನೀಡುವ ಮೂಲಕ ವಿಶ್ವ ದರ್ಜೆಯ ಮೊಬಿಲಿಟಿ ಸ್ಟೇಷನ್ ಗಳ ನೆಟ್ ವರ್ಕ್ ಅನ್ನು ಪರಿಚಯಿಸಿದೆ. ಭಾರತದಲ್ಲಿ ಮೊಬಿಲಿಟಿ ಪರಿಹಾರಗಳನ್ನು ಮರುರೂಪಿಸುವಾಗ, ಜಿಯೊ-ಬಿಪಿ ಬ್ರ್ಯಾಂಡ್ ಸಾಟಿಯಿಲ್ಲದ ಮತ್ತು ವಿಶಿಷ್ಟವಾದ ಗ್ರಾಹಕ ಅನುಭವವನ್ನು ಒದಗಿಸಲು ಸಿದ್ಧವಾಗಿದೆ. ಅಸ್ತಿತ್ವದಲ್ಲಿರುವ 1400 ಇಂಧನ ಪಂಪ್ ಗಳ ನೆಟ್ ವರ್ಕ್ ಅನ್ನು ಜಿಯೊ-ಬಿಪಿ ಎಂದು ಮರುಬ್ರಾಂಡ್ ಮಾಡಲಾಗುವುದರ ಜೊತೆಗೆ ಮುಂದಿನ ತಿಂಗಳುಗಳಲ್ಲಿ ಹೊಸ ಶ್ರೇಣಿಯ ಗ್ರಾಹಕ ಮೌಲ್ಯದ ಪ್ರಸ್ತಾಪಗಳನ್ನು ಮುಂದಿಡಲಿದೆ.

Jio bp to sell additive fuels at no extra cost EV charging battery swap 24×7 retail at RIL fuel 4

ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದಲ್ಲಿ ಭಾರತದ ಮಾರುಕಟ್ಟೆ ವೇಗವಾಗಿ ಬೆಳೆಯುತ್ತಿದೆ. ಮುಂದಿನ 20 ವರ್ಷಗಳಲ್ಲಿ ಇದು ವಿಶ್ವದಲ್ಲೇ ವೇಗವಾಗಿ ಬೆಳೆಯುತ್ತಿರುವ ಇಂಧನ ಮಾರುಕಟ್ಟೆಯಾಗಲಿದೆ ಎಂದು ನಿರೀಕ್ಷಿಸಲಾಗಿದೆ. ಜಿಯೋ-ಬಿಪಿ ಮೊಬಿಲಿಟಿ ಸ್ಟೇಷನ್ ಗಳನ್ನು ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲೆಂದೇ ವಿನ್ಯಾಸಗೊಳಿಸಲಾಗಿದೆ ಮತ್ತು ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳಲಾಗಿದೆ. ಸಂಯೋಜಿತ ಇಂಧನಗಳು, ಇವಿ ಚಾರ್ಜಿಂಗ್, ರಿಫ್ರೆಶ್ ಮೆಂಟ್ ಗಳು ಮತ್ತು ಆಹಾರ(ಹೊಟೇಲ್) ಸೇರಿದಂತೆ – ಸಂಚಾರ ನಡೆಸುವ ಗ್ರಾಹಕರಿಗೆ ನೆರವಾಗುವಂತೆ ಹಲವು ಸೇವೆಗಳನ್ನು ಜೊತೆಯಾಗಿ ನೀಡಲಿದೆ. ಮುಂದಿನ ದಿನಗಳಲ್ಲಿ ಕಡಿಮೆ ಇಂಗಾಲವನ್ನು ಹೊರಸೂಸುವ ಸರಳ ಯೋಜನೆಗಳನ್ನು ರೂಪಿಸಲಿದೆ.

Jio bp to sell additive fuels at no extra cost EV charging battery swap 24×7 retail at RIL fuel 1
ಎಕ್ಸ್‌ಪ್ರೆಸ್‌ ಆಯಿಲ್‌ ಚೇಂಜ್‌

ಜಿಯೋ ಮತ್ತು ರಿಲಯನ್ಸ್ ರೀಟೇಲ್ ನಲ್ಲಿ ನೂರಾರು ಮಿಲಿಯನ್ ಗ್ರಾಹಕರನ್ನು ಹೊಂದಿರುವ ರಿಲಯನ್ಸ್ ತನ್ನ ವಿಶಾಲ ನೆಟ್ ವರ್ಕ್ ನಿಂದ ಭಾರತದಾದ್ಯಂತ ಗ್ರಾಹಕ ವ್ಯವಹಾರಗಳನ್ನು ಸದ್ಬಳಕೆ ಮಾಡಿಕೊಳ್ಳುವ ಮೂಲಕ ಇಂಧನ ಮತ್ತು ಮೊಬಿಲಿಟಿ ಕ್ಷೇತ್ರದ ಉದ್ಯಮದಲ್ಲಿ ನಾಯಕರಾಗುವ ಲಕ್ಷಣಗಳನ್ನು ಹೊಂದಿದೆ. ಉತ್ತಮ ಗುಣಮಟ್ಟದ ವಿಭಿನ್ನ ಇಂಧನಗಳು, ಲೂಬ್ರಿಕಂಟ್ ಗಳು, ಅನುಕೂಲತೆ ಮತ್ತು ಸುಧಾರಿತ ಕಡಿಮೆ ಇಂಗಾಲದ ಮೊಬಿಲಿಟಿ ಸೊಲ್ಯೂಷನ್ ಗಳನ್ನು ಒಳಗೊಂಡಿದೆ.

Jio bp to sell additive fuels at no extra cost EV charging battery swap 24×7 retail at RIL fuel 2
ಇವಿ ಚಾರ್ಜಿಂಗ್

ಸಾಮಾನ್ಯ ಇಂಧನಗಳ ಬದಲಿಗೆ, ದೇಶಾದ್ಯಂತ ಜಿಯೋ-ಬಿಪಿ ಮೊಬಿಲಿಟಿ ಕೇಂದ್ರಗಳು ಯಾವುದೇ ಹೆಚ್ಚುವರಿ ವೆಚ್ಚವಿಲ್ಲದೆ ಸಂಯೋಜಿತ ಇಂಧನವನ್ನು ನೀಡುತ್ತವೆ. ಇಂಧನದ ಕೊಡುಗೆಯು ಅಂತರಾಷ್ಟ್ರೀಯವಾಗಿ ಅಭಿವೃದ್ಧಿಪಡಿಸಲಾದ ‘ACTIVE’ ತಂತ್ರಜ್ಞಾನವನ್ನು ಒಳಗೊಂಡಿರುತ್ತದೆ, ಇದು ಇಂಜಿನ್ ಗಳನ್ನು ಸ್ವಚ್ಛವಾಗಿಡಲು ಸಹಾಯ ಮಾಡುವಲ್ಲಿ ನಿರ್ಣಾಯಕ ಪಾತ್ರ ವಹಿಸುತ್ತವೆ. ಎಂಜಿನ್ ಭಾಗಗಳ ಮೇಲೆ ರಕ್ಷಣಾತ್ಮಕ ಪದರವನ್ನು ರೂಪಿಸುತ್ತದೆ. ಇದನ್ನೂ ಓದಿ: 75 ಕೆಜಿಯ ಮೀನು 36 ಲಕ್ಷ ರೂಪಾಯಿಗೆ ಮಾರಾಟ

ಜಿಯೋ-ಬಿಪಿ ತನ್ನ ಮೊಬಿಲಿಟಿ ಕೇಂದ್ರಗಳು ಮತ್ತು ಇತರ ಸ್ವತಂತ್ರ ಸ್ಥಳಗಳಲ್ಲಿ – ಮೊಬಿಲಿಟಿ ಪಾಯಿಂಟ್‌ಗಳಲ್ಲಿ ಇವಿ(EV) ಚಾರ್ಜಿಂಗ್ ಸ್ಟೇಷನ್ ಗಳು ಮತ್ತು ಬ್ಯಾಟರಿ ಸ್ವಾಪ್ ಸ್ಟೇಷನ್ ಗಳ ನೆಟ್ವರ್ಕ್ ಅನ್ನು ಸ್ಥಾಪಿಸುತ್ತದೆ. ಜಂಟಿ ಉದ್ಯಮವು ಭಾರತದಲ್ಲಿ ಪ್ರಮುಖ ಇವಿ (EV )ಚಾರ್ಜಿಂಗ್ ಮೂಲಸೌಕರ್ಯ ಕ್ಷೇತ್ರದಲ್ಲಿ ಮೊದಲಿಗನಾಗುವ ಗುರಿಯನ್ನು ಹೊಂದಿದೆ.

Jio bp to sell additive fuels at no extra cost EV charging battery swap 24×7 retail at RIL fuel 3

ವೈಲ್ಡ್ ಬೀನ್ ಕೆಫೆಯ ಮೂಲಕ ಪ್ರಯಾಣದಲ್ಲಿರುವ ಗ್ರಾಹಕರಿಗೆ ಉಪಹಾರಗಳು ಲಭ್ಯವಾಗುವಂತೆ ಮಾಡುವ ಉದ್ದೇಶವನ್ನು ಹೊಂದಿದೆ. ಇವು ದಿನವಿಡೀ ತೆರೆದಿರುತ್ತವೆ. ಇವು ದೈನಂದಿನ ವಸ್ತುಗಳಿಗಾಗಿ, ತಿಂಡಿ, ತಿನಿಸುಗಳಿಗಾಗಿ ಭಾರತದ ಅತಿದೊಡ್ಡ ರಿಟೇಲ್ ಆಗಿರುವ ರಿಲಯನ್ಸ್ ರಿಟೇಲ್ ನೊಂದಿಗೆ ಪಾಲುದಾರಿಕೆ ಹೊಂದಿರುತ್ತದೆ. ವೈಲ್ಡ್ ಬೀನ್ ಕೆಫೆ, ಬಿಪಿಯ ಅಂತಾರಾಷ್ಟ್ರೀಯ ಆನ್-ದಿ-ಮೂವ್ ಬ್ರ್ಯಾಂಡ್, ಮಸಾಲಾ ಚಾಯ್, ಸಮೋಸಾ, ಉಪ್ಮಾ, ಪನೀರ್ ಟಿಕ್ಕಾ ರೋಲ್ ಮತ್ತು ಚಾಕೊಲೇಟ್ ಲಾವಾ ಕೇಕ್ ಸೇರಿದಂತೆ ಪ್ರಾದೇಶಿಕ ಮತ್ತು ಸ್ಥಳೀಯ ದರಗಳಲ್ಲಿ ಒದಗಿಸಲಿದೆ.‌  ಇದನ್ನೂ ಓದಿ: ಸಾಮಾನ್ಯ ವ್ಯಕ್ತಿ ಜೊತೆಗೆ ಜಪಾನ್ ಯುವರಾಣಿ ಮದುವೆ-ಪದವಿ, ಗೌರವ ಹಿಂಪಡೆದ ಅರಮನೆ

Jio bp to sell additive fuels at no extra cost EV charging battery swap 24×7 retail at RIL fuel 1

ಜಿಯೋ-ಬಿಪಿ ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್‌ಲೆಟ್‌ ಗಳ ನೆಟ್ವರ್ಕ್ ಅನ್ನು ತನ್ನ ಮೊಬಿಲಿಟಿ ಸ್ಟೇಷನ್ ಗಳಲ್ಲಿ ಕ್ಯಾಸ್ಟ್ರೋಲ್ ಸಹಭಾಗಿತ್ವದಲ್ಲಿ ನೀಡುತ್ತದೆ, ವೃತ್ತಿಪರವಾಗಿ ತರಬೇತಿ ಪಡೆದ ತಜ್ಞರು ಉಚಿತ ವಾಹನ ತಪಾಸಣೆ ಮತ್ತು ಉಚಿತ ಆಯಿಲ್ ಚೇಂಜ್ ಸೇವೆಯನ್ನು ನೀಡಲಿದ್ದಾರೆ. ಎಕ್ಸ್ ಪ್ರೆಸ್ ಆಯಿಲ್ ಚೇಂಜ್ ಔಟ್ಲೆಟ್ ಗಳಲ್ಲಿ ಕ್ಯಾಸ್ಟ್ರೋಲ್ ಲೂಬ್ರಿಕಂಟ್ ಖರೀದಿಸುವ ಪ್ರತಿಯೊಬ್ಬ ದ್ವಿಚಕ್ರ -ವಾಹನದ ಗ್ರಾಹಕರು ಯಾವುದೇ ವೆಚ್ಚವಿಲ್ಲದೆ ತೈಲ ಬದಲಾವಣೆ ಸೇವೆಯನ್ನು ಪಡೆಯಲಿದ್ದಾರೆ.

ಈ ಹೊಸ ಮೌಲ್ಯದ ಪ್ರಸ್ತಾಪಗಳ ಜೊತೆಗೆ, ಜಿಯೋ-ಬಿಪಿ ಎಂಡ್-ಟು-ಎಂಡ್ ಆಟೊಮೇಷನ್ ಬೆಂಬಲಿತ ‘ಗುಣಮಟ್ಟ ಮತ್ತು ಪ್ರಮಾಣ’ದ ಭರವಸೆಯನ್ನು ಖಾತ್ರಿಗೊಳಿಸುತ್ತದೆ, ಪ್ರತಿ ಗ್ರಾಹಕನಿಗೆ ಜಿಯೊ-ಬಿಪಿ ಮೊಬಿಲಿಟಿ ಸ್ಟೇಷನ್‌ಗಳಲ್ಲಿ ಖರ್ಚು ಮಾಡುವ ಪ್ರತಿ ರೂಪಾಯಿಗೂ ಮೌಲ್ಯವನ್ನು ನೀಡುತ್ತದೆ. ಗ್ರಾಹಕರಿಗೆ ಅತ್ಯುತ್ತಮ ಅನುಭವ ನೀಡುವುದರ ಜೊತೆಗೆ, ಡೈನಾಮಿಕ್ ಬೆಲೆಗಳು, ತ್ವರಿತ ರಿಯಾಯಿತಿಗಳು, ಹ್ಯಾಪಿ ಅವರ್ ಯೋಜನೆಗಳು, ನೆಟ್ವರ್ಕ್‌ ಆದ್ಯಂತ ಹೊಂದಿಕೊಳ್ಳುವ ಮತ್ತು ಏಕರೂಪದ ಡಿಜಿಟಲ್ ಪಾವತಿಯ ಅನುಷ್ಠಾನದಂತಹ ಅತ್ಯಾಕರ್ಷಕ ಹೊಸ ಯೋಜನೆಗಳು ಕೂಡ ಇದರಲ್ಲಿದೆ.

Share This Article
Leave a Comment

Leave a Reply

Your email address will not be published. Required fields are marked *