ಜಸ್ಟ್‌ 999 ರೂ.ಗೆ ಜಿಯೋ ಭಾರತ್‌ 4ಜಿ ಫೋನ್‌ ಬಿಡುಗಡೆ – ಗುಣ ವೈಶಿಷ್ಟ್ಯಗಳೇನು?

Public TV
2 Min Read
jio bharat phone

ಮುಂಬೈ: 2ಜಿ ಮುಕ್ತ ಭಾರತ ನಿರ್ಮಾಣಕ್ಕೆ ಜಿಯೋ (Jio) ಕಂಪನಿ 999 ರೂ.ಗಳಿಗೆ ಎರಡು 4ಜಿ ಫೀಚರ್‌ (4G Feature Phone) ಫೋನ್‌ ಬಿಡುಗಡೆ ಮಾಡಿದೆ.

ಸ್ಮಾರ್ಟ್‌ಫೋನ್‌ ತಯಾರಕ ಕಂಪನಿ ಕಾರ್ಬನ್‌ (Karbonn) ಜೊತೆಗೂಡಿ ಜಿಯೋ ಭಾರತ್‌ ವಿ2 (JioBharat V2) ಮತ್ತು ಜಿಯೋ ಭಾರತ್‌ ಕೆ1 ಕಾರ್ಬನ್‌ (JioBharat K1 Karbonn) ಹೆಸರಿನಲ್ಲಿ ಫೋನ್‌ ಬಿಡುಗಡೆ ಮಾಡಿದೆ. ಮೊದಲ 10 ಲಕ್ಷ ಫೋನ್‌ಗಳ ಮಾರಾಟ ಜುಲೈ 7 ರಿಂದ ಆರಂಭವಾಗಲಿದ್ದು ರಿಟೇಲ್‌ ಸ್ಟೋರ್‌ಗಳಲ್ಲಿ ಲಭ್ಯವಿರಲಿದೆ.

Jio Bharat phone launched in India at Rs 999 sale begins on July 7 2

ಜೆಯೋ ಭಾರತ್‌ ಕೆ1 ಬೂದು ಮತ್ತು ಕೆಂಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಕಾರ್ಬನ್‌ ಲೋಗೋ ಇದೆ. ಜಿಯೋ ಭಾರತ್‌ ವಿ2 ನೀಲಿ ಮತ್ತು ಕಪ್ಪು ಬಣ್ಣದಲ್ಲಿ ಲಭ್ಯವಿದ್ದು ಹಿಂದುಗಡೆ ಜಿಯೋ ಲೋಗೋವಿದೆ. ಇದನ್ನೂ ಓದಿ: 65 ಸಾವಿರ ಗಡಿ ದಾಟಿ ದಾಖಲೆ ಬರೆದ ಸೆನ್ಸೆಕ್ಸ್‌ – ಒಂದೇ ದಿನ ಹೂಡಿಕೆದಾರರ ಸಂಪತ್ತು 2 ಲಕ್ಷ ಕೋಟಿ ಹೆಚ್ಚಳ

ಈ ಫೋನ್‌ಗಳು ಫೀಚರ್‌ ಫೋನಿನಂತೆ ಕಂಡರೂ 4ಜಿ ನೆಟ್‌ವರ್ಕ್‌ ಅನ್ನು ಬೆಂಬಲಿಸುತ್ತದೆ. 22 ಭಾಷೆಗಳನ್ನು ಬೆಂಬಲಿಸುವ ಜಿಯೋ ಭಾರತ್‌ ವಿ2 ಫೋನ್‌ 4.5 ಸೆ.ಮೀ ಸ್ಕ್ರೀನ್‌, ಎಚ್‌ಡಿ ವಾಯ್ಸ್‌ ಕಾಲಿಂಗ್‌, ಪವರ್‌ಫುಲ್‌ ಲೌಡ್‌ ಸ್ಪೀಕರ್‌ ಮತ್ತು ಟಾರ್ಚ್‌, 71 ಗ್ರಾಂ ತೂಕ, 1,000 ಎಂಎಎಚ್‌ ಬ್ಯಾಟರಿ, 3.5 ಎಂಎಂ ಹೆಡ್‌ಫೋನ್‌ ಜ್ಯಾಕ್‌, 0.3 ಮೆಗಾ ಪಿಕ್ಸೆಲ್‌ ಕ್ಯಾಮೆರಾ, 128 ಜಿಬಿವರೆಗೆ ವಿಸ್ತರಣೆ ಮಾಡಬಹುದಾದ ಶೇಖರಣಾ ಸಾಮರ್ಥ್ಯ ಹೊಂದಿದೆ.

Jio Bharat phone launched in India at Rs 999 sale begins on July 7 1

ಜಿಯೋ ಸಿನಿಮಾ ಆಪ್‌ ಮೂಲಕ ಸಿನಿಮಾ ವೀಕ್ಷಿಸಬಹುದು. ಜಿಯೋ ಸಾವನ್‌ ಆಪ್‌ ಮೂಲಕ 8 ಕೋಟಿ ಹಾಡು ಕೇಳಬಹುದು. ಜಿಯೋ ಪೇ ಮೂಲಕ ಯುಪಿಐ ಪಾವತಿ ಮಾಡಬಹುದು.

 

ಜಿಯೋ ಭಾರತ್‌ ಫೋನಿಗೆ ಜಿಯೋ 123 ರೂ. ಮತ್ತು 1,234 ರೂಪಾಯಿಯ ಎರಡು ಪ್ಲ್ಯಾನ್‌ ಬಿಡುಗಡೆ ಮಾಡಿದೆ. 123 ರೂ ರಿಚಾರ್ಜ್‌ ಮಾಡಿದರೆ 28 ದಿನಗಳ ಅನ್‌ಲಿಮಿಟೆಡ್‌ ಕರೆ, 14 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ. ವಾರ್ಷಿಕ 1234 ರೂ. ರಿಚಾರ್ಜ್‌ ಮಾಡಿದರೆ ಅನ್‌ಲಿಮಿಟೆಡ್‌ ಕರೆ, 168 ಜಿಬಿ ಡೇಟಾ (ಒಂದು ದಿನಕ್ಕೆ 0.5 ಜಿಬಿ ಡೇಟಾ) ಸಿಗಲಿದೆ.

Web Stories

Share This Article