ಬಾಲಿವುಡ್‌ನ ಬ್ಯೂಟಿ ಜೊತೆ ಪ್ರತಿಭೆ ಇರುವ ಆಲಿಯಾ ಭಟ್ (Alia Bhatt) ಈಗ ‘ಜಿಗ್ರಾ’ (Jigra) ಎಂಬ ಕಥೆ ಹೇಳೋಕೆ ರೆಡಿಯಾಗಿದ್ದಾರೆ. ಖಡಕ್ ಲುಕ್ ಕೊಟ್ಟು ಮಾಸ್ ಅವತಾರ ತಾಳಿದ್ದಾರೆ. ಸದ್ಯ ಚಿತ್ರದಲ್ಲಿನ ಆಲಿಯಾ ಲುಕ್ ಅನಾವರಣ ಆಗಿದೆ. ಅದಷ್ಟೇ ಅಲ್ಲ, ಸಿನಿಮಾದ ಬಗ್ಗೆ ಇಂಟರೆಸ್ಟಿಂಗ್ ಅಪ್‌ಡೇಟ್‌ವೊಂದನ್ನು ನೀಡಿದ್ದಾರೆ.
ಮದುವೆ ಬಳಿಕ ಆಲಿಯಾ ಸಿನಿಮಾ ಆಯ್ಕೆಯಲ್ಲಿ ಸಖತ್ ಚ್ಯುಸಿಯಾಗಿದ್ದಾರೆ. ವರ್ಷಕ್ಕೆ ಒಂದೇ ಸಿನಿಮಾ ಮಾಡಿದ್ರು ನಟನೆಗೆ ಸ್ಕೋಪ್ ಇರುವ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ‘ಜಿಗ್ರಾ’ ಸಿನಿಮಾದ ಮೂಲಕ ಆಲಿಯಾ ಸದ್ದು ಮಾಡುತ್ತಿದ್ದಾರೆ. ಚಿತ್ರದಲ್ಲಿನ ನಟಿಯ ನಯಾ ಅನಾವರಣ ಆಗಿದೆ. ಇದನ್ನೂ ಓದಿ:ಇಂಡಸ್ಟ್ರಿಗೆ ದರ್ಶನ್ ಕಾಂಟ್ರಿಬ್ಯೂಷನ್ ತುಂಬಾ ಇದೆ: ನಟ ಪ್ರೇಮ್
View this post on Instagram
ಮುಷ್ಠಿ ಬಿಗಿ ಹಿಡಿದು ಖಡಕ್ ಆಗಿ ನಟಿ ಪೋಸ್ ಕೊಡುತ್ತಿರುವ ಮಾಸ್ ಲುಕ್ ಅಭಿಮಾನಿಗಳಲ್ಲಿ ಸಿನಿಮಾ ಕುರಿತು ಕುತೂಹಲ ಮೂಡಿಸಿದೆ. ಈ ಹಿಂದೆ ಎಂದೂ ಕಾಣಿಸಿಕೊಂಡಿರದ ಲುಕ್‌ನಲ್ಲಿ ‘ಜಿಗ್ರಾ’ ಪ್ರಾಜೆಕ್ಟ್‌ನಲ್ಲಿ ನಟಿ ಕಾಣಿಸಿಕೊಂಡಿದ್ದಾರೆ.
ಇನ್ನೂ ಚಿತ್ರದಲ್ಲಿ ನಟ ವೇದಾಂಗ್ ರೈನಾಗೆ (Vedang Raina) ಸಹೋದರಿಯಾಗಿ ಆಲಿಯಾ ನಟಿಸಿದ್ದು, ವಿಭಿನ್ನವಾದ ಕಥೆ ಹೇಳಲು ಹೊರಟಿದ್ದಾರೆ. ಸದ್ಯ ಸೆ.8ರಂದು ‘ಜಿಗ್ರಾ’ ಟ್ರೈಲರ್ ರಿಲೀಸ್ ಆಗೋದಾಗಿ ನಟಿ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದಾರೆ. ಅಕ್ಟೋಬರ್ 11ರಂದು ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.