ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್ ಪಡೆದು ದಾಖಲೆ ಬರೆದ ಜೂಲನ್ ಗೋಸ್ವಾಮಿ

Public TV
2 Min Read
julan goswami

ವೆಲ್ಲಿಂಗಟನ್: ಟೀಂ ಇಂಡಿಯಾದ ಅನುಭವಿ ವೇಗದ ಬೌಲರ್ ಜೂಲನ್ ಗೋಸ್ವಾಮಿ ಐಸಿಸಿ ಮಹಿಳಾ ಏಕದಿನ ವಿಶ್ವಕಪ್ 2022ರ ಇಂಗ್ಲೆಂಡ್ ವಿರುದ್ಧದ ಪಂದ್ಯದಲ್ಲಿ ಏಕದಿನ ಕ್ರಿಕೆಟ್‍ನಲ್ಲಿ 250 ವಿಕೆಟ್‍ಗಳನ್ನು ಪಡೆದು ದಾಖಲೆ ನಿರ್ಮಿಸಿದ್ದಾರೆ.

ಜೂಲನ್, ಇಂಗ್ಲೆಂಡ್‍ನ ಆರಂಭಿಕ ಆಟಗಾರ್ತಿ ಟಮ್ಮಿ ಬ್ಯೂಮಾಂಟ್ ಅವರನ್ನು ಎಲ್‍ಬಿಡಬ್ಲ್ಯೂ ಮಾಡುವ ಮೂಲಕ ಈ ಮೈಲಿಗಲ್ಲನ್ನು ನೆಟ್ಟರು. ಏಕದಿನ ಮಾದರಿ ಪಂದ್ಯದಲ್ಲಿ ಜೂಲನ್ 250 ವಿಕೆಟ್ ಪಡೆದರೆ, ಈ ಪಟ್ಟಿಯಲ್ಲಿ ಜೂಲನ್ ನಂತರ ಆಸ್ಟ್ರೇಲಿಯಾದ ಕ್ಯಾಥರಿನ್ ಫಿಟ್ಜ್‍ಪ್ಯಾಟ್ರಿಕ್ 180 ವಿಕೆಟ್ ಮತ್ತು ವೆಸ್ಟ್ ಇಂಡೀಸ್‍ನ ಅನಿಸಾ ಮೊಹಮ್ಮದ್ 180 ವಿಕೆಟ್‍ಗಳೊಂದಿಗೆ ಜಂಟಿ ಎರಡನೇ ಸ್ಥಾನದಲ್ಲಿದ್ದಾರೆ. ದಕ್ಷಿಣ ಆಫ್ರಿಕಾದ ಶಬ್ನಿಮ್ ಇಸ್ಮಾಯಿಲ್ ಮತ್ತು ಇಂಗ್ಲೆಂಡ್‍ನ ಕ್ಯಾಥರೀನ್ ಬ್ರಂಟ್ ಕ್ರಮವಾಗಿ 168 ಮತ್ತು 164 ವಿಕೆಟ್‍ಗಳನ್ನು ಪಡೆದು ನಂತರದ ಸ್ಥಾನದಲ್ಲಿದ್ದಾರೆ. ಇದನ್ನೂ ಓದಿ: ಭದ್ರತಾ ಲೋಪ – ದೆಹಲಿ ಕ್ಯಾಪಿಟಲ್ಸ್ ತಂಡದ ಬಸ್ ಮೇಲೆ ದಾಳಿ

ಜೂಲನ್, ಆಸ್ಟ್ರೇಲಿಯಾದ ಲಿನ್ ಫುಲ್‍ಸ್ಟನ್ ಅವರನ್ನು ಹಿಂದಿಕ್ಕಿ ಮಹಿಳಾ ವಿಶ್ವಕಪ್‍ನಲ್ಲಿ 40 ವಿಕೆಟ್‍ಗಳನ್ನು ಪಡೆದ ಮೊದಲ ಕ್ರಿಕೆಟ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ ಆದಾಗ್ಯೂ, ಇಂಗ್ಲೆಂಡ್ ವಿರುದ್ಧ ಭಾರತ ತಂಡದ ಮೊದಲು ಬ್ಯಾಟಿಂಗ್ ಮಾಡಿದ ನಂತರ ಕೇವಲ 134 ರನ್‍ಗಳಿಗೆ ಆಲೌಟ್ ಆಗುವುದರೊಂದಿಗೆ ನಿರಾಸೆ ಮೂಡಿಸಿತು. ಇದಕ್ಕೆ ಉತ್ತರವಾಗಿ ಇಂಗ್ಲೆಂಡ್ ವನಿತೆಯರು ಇನ್ನೂ 112 ಎಸೆತಗಳು ಬಾಕಿ ಇರುವಂತೆಯೇ ನಾಲ್ಕು ವಿಕೆಟ್‍ಗಳ ಜಯ ಸಾಧಿಸಿದರು. ಇದನ್ನೂ ಓದಿ: IPL 2022 – ಡೆಲ್ಲಿ ತಂಡ ಸೇರಿಕೊಂಡ ಶೇನ್ ವಾಟ್ಸನ್

ಬೇ ಓವಲ್‍ನಲ್ಲಿ 2022ರ ಐಸಿಸಿ ಮಹಿಳಾ ವಿಶ್ವಕಪ್‍ನ ಗೆಲ್ಲಲೇಬೇಕಾದ ಲೀಗ್ ಪಂದ್ಯದಲ್ಲಿ ಭಾರತವು ಸೋಲನ್ನು ಅನುಭವಿಸಿದೆ. ಭಾರತದ ಬ್ಯಾಟರ್‌ಗಳಿಗೆ ಇಂಗ್ಲೆಂಡ್ ತಂಡದ ಬೌಲರ್ ಚಾರ್ಲಿ ಡಿನ್ ಕಂಟಕವಾದರು. 8.2 ಓವರ್‌ಗಳನ್ನು ಎಸೆದ ಚಾರ್ಲಿ ಡಿನ್, ಕೇವಲ 23 ರನ್ ನೀಡಿ 4 ವಿಕೆಟ್‍ಗಳನ್ನು ಪಡೆದು ಮಿಂಚಿದರು.

Share This Article
Leave a Comment

Leave a Reply

Your email address will not be published. Required fields are marked *